MLC Election: ಡೋಂಗಿ ದೇಶ​ಭ​ಕ್ತ​ರಿಗೆ ಮತ ಹಾಕ​ದಿ​ರಿ: ಶ್ರೀನಿವಾಸ ಮಾನೆ

By Kannadaprabha NewsFirst Published Dec 8, 2021, 12:16 PM IST
Highlights

*  ಕಾಂಗ್ರೆಸ್‌ ಅಭ್ಯರ್ಥಿ ಪರ ಮತ​ಯಾ​ಚಿ​ಸಿದ ಹಾನಗಲ್‌ ಶಾಸಕ ಶ್ರೀನಿವಾಸ ಮಾನೆ
*  ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿರುವ ಬಿಜೆಪಿಗರು
*  ಕಾಂಗ್ರೆಸ್‌ನಲ್ಲಿ ಯಾವುದೇ ಜಾತಿ ಧರ್ಮ ಎಂಬುವುದಿಲ್ಲ

ಮುಂಡಗೋಡ(ಡಿ.08):  ಡೋಂಗಿ ಧರ್ಮ ಹಾಗೂ ದೇಶ ಭಕ್ತಿಯಿಂದ ಜನರ ಕಣ್ಣಿಗೆ ಮಣ್ಣೆರಚಿ ಆಳ್ವಿಕೆ ನಡೆಸುತ್ತಿರುವವರ ಮಾತಿಗೆ ಮಣೆ ಹಾಕದೆ ಕಾಂಗ್ರೆಸ್‌(Congress) ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಬಡವರ ಕಣ್ಣೀರು ಒರೆಸುವ ಕೆಲಸಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹಾನಗಲ್‌ ಶಾಸಕ ಶ್ರೀನಿವಾಸ ಮಾನೆ(Srinivas Mane) ಹೇಳಿದರು.

ಮಂಗಳವಾರ ತಾಲೂಕಿನ ನ್ಯಾಸರ್ಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಉತ್ತರಕನ್ನಡ(Uttara Kananda) ವಿಧಾನಪರಿಷತ್‌ ಚುನಾವಣೆಯ(Vidhan Parishat Election) ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ(Bheemanna Naik) ಪರ ಪ್ರಚಾರ(Campaign) ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್‌ನಲ್ಲಿ ಯಾವುದೇ ಜಾತಿ ಧರ್ಮ ಎಂಬುವುದಿಲ್ಲ. ಎಲ್ಲರಿಗೂ ಸಮಾನವಾದ ಹಕ್ಕು ನೀಡಲಾಗಿದೆ. ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಸಾಕಷ್ಟು ಜನ ನಮ್ಮ ಪಕ್ಷ ಸೇರುತ್ತಿದ್ದಾರೆ. ಇದನ್ನೆಲ್ಲ ಗಮನಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Assembly Election) ಕಾಂಗ್ರೆಸ್‌ ಸಂಪೂರ್ಣ ಬಹುಮತ ಪಡೆಯುವಲ್ಲಿ ಯಾವುದೇ ಅನುಮಾನವಿಲ್ಲ.

Council Election Karnataka : ಕುಮಾರಸ್ವಾಮಿ ಒಳ್ಳೆಯ ತೀರ್ಮಾನ-15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು :BSY

ಮಾಡಬಾರದ್ದನ್ನು ಮಾಡುತ್ತಿರುವುದರಿಂದ ನೋಡಬಾರದನ್ನು ನೋಡುವ ಸ್ಥಿತಿ ನೋಡುತ್ತಿದ್ದೇವೆ. ಕೊರೋನಾ(Coronavirus), ಬರಗಾಲ(Drought), ಮಳೆ ಪ್ರವಾಹ(Flood) ಒಂದಿಲ್ಲ ಒಂದು ತೊಂದರೆ ಅನುಭವುಸುತ್ತಿದ್ದು, ಸೃಷ್ಟಿ ನಮಗೆ ಬುದ್ಧಿ ಕಲಿಸುತ್ತಿದೆ. ಈಗಲಾದರೂ ನಾವು ಎಚ್ಚೆಎತ್ತುಕೊಂಡು ಮಾನವೀಯ ತಳಹದಿಯ ಮೇಲೆ ಜೀವನ ಮಾಡಲು ಮುಂದಾಗಬೇಕಿದ್ದು, ದೇವರಿಗೆ ಎಷ್ಟು ಪೂಜೆ ಪುನಸ್ಕಾರ ಮಾಡುತ್ತೇವೆ ಎಂಬುವುದು ಮುಖ್ಯವಲ್ಲ. ಬದಲಾಗಿ ಮಾನವಿಯತೆಗೆ ಎಷ್ಟು ಬೆಲೆ ಕೊಡುತ್ತೇವೆಯೊ ಅದರ ಮೇಲೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ.

ಎಲ್ಲರೂ ಸಮಾನರಾಗಿ ಬೆಳೆಯಬೇಕಿದೆ:

ಜನರಿಗೆ ಟೋಪಿ ಹಾಕುವ ಕೆಲಸವನ್ನು ಬಿಜೆಪಿಯವರು(BJP) ಮಾಡುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಬೇಡವಾದವರೆಲ್ಲ ಬಿಜೆಪಿ ಸೇರಿದ್ದು, ಅವರು ಕೂಡ ಈಗ ಅದನ್ನೇ ಮಾಡುತ್ತಿದ್ದಾರೆ. ಎಲ್ಲ ಸಚಿವರು ಸೇರಿದಂತೆ ಸರ್ಕಾರವೇ ಹಾನಗಲ್‌ ಕ್ಷೇತ್ರದಲ್ಲಿ ಬೀಡುಬಿಟ್ಟು ಹಣದ ಹೊಳೆ ಹರಿಸಿ ಪ್ರಚಾರ ಮಾಡಿದರೂ ಏನು ಮಾಡಲಾಗಲಿಲ್ಲ. ಜನರು ಬುದ್ಧಿವಂತರಿದ್ದಾರೆ ಹಣದಿಂದ ಜನರನ್ನು ಕೊಳ್ಳಲಾಗುವುದಿಲ್ಲ.

ಕೆಪಿಸಿಸಿ ನಿರ್ದೇಶಕ ಪ್ರಶಾಂತ ದೇಶಪಾಂಡೆ(Prashan Deshpande) ಮಾತನಾಡಿ, ಪಕ್ಷದಿಂದ ಆಯ್ಕೆಯಾದ ಪ್ರತಿಯೊಬ್ಬ ಚುನಾಯಿತ ಜನಪ್ರತಿಗಳ ಅವಶ್ಯಕತೆ ಈಗ ಪಕ್ಷಕ್ಕಿದೆ. ಪಕ್ಷಕ್ಕೆ ಏನಾದರೂ ಕೊಡುಗೆ ನೀಡಬೇಕಾದರೆ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿ ಗೆಲ್ಲಸಲು ಇದು ಸಕಾಲವಾಗಿದೆ. ಪರ್ಸೆಂಟೇಜ್‌ ವ್ಯವಹಾರ ಭ್ರಷ್ಟಾಚಾರ(Corruption) ಮಾಡುವವರಿಗೆ ಬಿಜೆಪಿಯಲ್ಲಿ ಗೌರವವಿದೆ. ಪ್ರಾಮಾಣಿಕರಿಗೆ ಯಾವುದೇ ಬೆಲೆ ಇಲ್ಲ. ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿದ ಉದ್ಯೋಗ ಖಾತರಿ ಯೋಜನೆಗೆ ಹಣ ಕಡಿತಗೊಳಿಸಲಾಗಿದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಜಾರಿ ಮಾಡಿದ ಯೋಜನೆ ನಾವೇ ಮಾಡಿದ್ದು ಎಂದು ಸುಳ್ಳು ಹೇಳಿಕೊಂಡು ಹೊರಟಿದ್ದಾರೆ. ಸುಳ್ಳಿಗೆ ಯಾರೂ ಬಲಿಯಾಗಬಾರದು. ಇತ್ತೀಚೆಗೆ ಹಾನಗಲ್‌ ಉಪ ಚುನಾವಣೆಯಂತೆ ಹಣ ನೋಡದೆ ಗುಣ ನೋಡಿ ಮತ ನೀಡಬೇಕು ಎಂದು ಕರೆ ನೀಡಿ ದಿಟ್ಟ ಉತ್ತರ ನೀಡುವಂತೆ ಕರೆ ನೀಡಿದರು.

Karnataka Politics: ಯತ್ನಾಳ್ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಸಿದ್ದು ಮಾತು

ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ತಾಪಂ ಮಾಜಿ ಸದಸ್ಯ ಜ್ಞಾನದೇವ ಗುಡಿಯಾಳ, ರಾಜ್ಯ ಅಲ್ಪಸಂಖ್ಯಾತ ವಿಭಾಗ ಸಂಚಾಲಕ ಎಮ್‌.ಎನ್‌. ದುಂಡಸಿ, ಎಚ್‌.ಎಮ್‌. ನಾಯ್ಕ, ವೆಂಕಟೇಶ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಬಿಜೆಪಿಗೆ ಜನರ ಸಮಸ್ಯೆ, ಅಭಿವೃದ್ಧಿ ಕುರಿತು ನಂಬಿಕೆ ಇಲ್ಲ

ಭಟ್ಕಳ: ಬಿಜೆಪಿಗೆ ಜನರ ಸಂಕಷ್ಟದ ಬಗ್ಗೆಯಾಗಲಿ, ಅಭಿವೃದ್ಧಿ ಕುರಿತಾಗಲಿ ನಂಬಿಕೆ ಇಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬೇಜವಬ್ದಾರಿ ಸರ್ಕಾರವಿದ್ದು, ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ಸಿನ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ(BK Hariprasad) ಹೇಳಿದರು.
 

click me!