Council Election Karnataka :ಗೆಲ್ಲುವ ಪಣದಿಂದ ಫೀಲ್ಡಿಗಿಳಿದ ಮಾಜಿ ಮುಖಂಡರು

By Kannadaprabha NewsFirst Published Dec 1, 2021, 10:48 AM IST
Highlights
  • ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ಡಿ.10 ರಂದು ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆ
  • ಮೈಸೂರು -ಚಾಮರಾಜನಗರದಲ್ಲಿ ಬಹುತೇಕ ಮಾಜಿ ಸಂಸದರು, ಮಾಜಿ ಶಾಸಕರು ಪ್ರಚಾರದಲ್ಲಿ ಸಕ್ರಿಯ

 ಮೈಸೂರು (ಡಿ.01):  ಮೈಸೂರು, ಚಾಮರಾಜನಗರ (Mysuru - Chamarajanagar) ಜಿಲ್ಲೆ ಸ್ಥಳೀಯ ಸಂಸ್ಥೆಗಳ ದ್ವಿ ಸದಸ್ಯ ಕ್ಷೇತ್ರದಿಂದ ಡಿ.10 ರಂದು ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆಯ (MLC Election) ಪ್ರಚಾರದಲ್ಲಿ ಬಹುತೇಕ ಮಾಜಿ ಸಂಸದರು (MP), ಮಾಜಿ ಶಾಸಕರು (MLA) ಕೂಡ ತೊಡಗಿಸಿಕೊಂಡಿದ್ದಾರೆ. ಕೆಲವರು ಮಾತ್ರ ಇನ್ನೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಮಾಜಿ ಸಂಸದರ ಪೈಕಿ ಚಾಮರಾಜನಗರದ ಆರ್‌. ಧ್ರುವ ನಾರಾಯಣ ಅವರು ಕೆಪಿಸಿಸಿ (KPCC) ಕಾರ್ಯಾಧ್ಯಕ್ಷರೂ ಆಗಿದ್ದಾರೆ. ಹೀಗಾಗಿ ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್‌ (Congress) ಪರ ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಎ. ಸಿದ್ದರಾಜು, ಕಾಗಲವಾಡಿ ಶಿವಣ್ಣ ಅವರು ಕಾಂಗ್ರೆಸ್‌ ಪರ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೈಸೂರಿನ ಮಾಜಿ ಸಂಸದರಾದ ಸಿ.ಎಚ್‌. ವಿಜಯ ಶಂಕರ್‌ ಅವರು ಬಿಜೆಪಿ (BJP) ಪರ ಪ್ರಚಾರ ನಿರತರಾಗಿದ್ದಾರೆ.

ಮಾಜಿ ಸಚಿವರಾದ ಡಾ.ಎಚ್‌.ಸಿ. ಮಹದೇವಪ್ಪ (HC Mahadevappa) (ಟಿ. ನರಸೀಪುರ), ಕೆ. ವೆಂಕಟೇಶ್‌ (ಪಿರಿಯಾಪಟ್ಟಣ), ಮಾಜಿ ಶಾಸಕರಾದ ಎಂ.ಕೆ. ಸೋಮ ಶೇಖರ್‌ (ಕೃಷ್ಣರಾಜ), ವಾಸು (ಚಾಮರಾಜ), ಕಳಲೆ ಕೇಶವಮೂರ್ತಿ (ನಂಜನಗೂಡು), ಎಸ್‌. ಜಯಣ್ಣ, ಎಸ್‌. ಬಾಲರಾಜ್‌ (ಕೊಳ್ಳೇಗಾಲ), ಎ.ಆರ್‌. ಕೃಷ್ಣಮೂರ್ತಿ (ಸಂತೇಮರಹಳ್ಳಿ), ಎಸ್‌. ಕೃಷ್ಣಪ್ಪ (ಬನ್ನೂರು) ಅವರು ಕಾಂಗ್ರೆಸ್‌ (Congress) ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಾಜಿ ಸಚಿವರಾದ ಡಾ.ಗೀತಾ ಮಹದೇವ ಪ್ರಸಾದ್‌ ಅವರು ಆರೋಗ್ಯ ಸಮಸ್ಯೆಯಿಂದಾಗಿ (Health Issue) ರಾಜಕಾರಣದಲ್ಲಿ ಸಕ್ರಿಯರಾಗಿಲ್ಲ. ಹೀಗಾಗಿ ಗುಂಡ್ಲು ಪೇಟೆಯಲ್ಲಿ ಅವರ ಪುತ್ರ ಎಚ್‌.ಎಂ. ಗಣೇಶ್‌ ಪ್ರಸಾದ್‌ ಅವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಟಿ. ನರಸೀಪುರದ ಎಂ. ಶ್ರೀನಿವಾಸಯ್ಯ ಅವರು ರಾಜಕಾರಣದಲ್ಲಿ ಸಕ್ರಿಯರಾಗಿಲ್ಲ.

ಡಾ.ಎನ್‌.ಎಲ್‌. ಭಾರತೀಶಂಕರ್‌ (ಟಿ. ನರಸೀಪುರ),ಎಚ್‌.ಸಿ. ಬಸವರಾಜು (ಪಿರಿಯಾಪಟ್ಟಣ), ಜಿ.ಎನ್‌. ನಂಜುಂಡಸ್ವಾಮಿ (ಕೊಳ್ಳೇಗಾಲ), ಪರಿಮಳಾ ನಾಗಪ್ಪ (ಹನೂರು) ಅವರು ಬಿಜೆಪಿ ಪರ ಪ್ರಚಾರನಿರತರಾಗಿದ್ದಾರೆ. ಕೆ.ಎಂ. ಚಿಕ್ಕಮಾದನಾಯಕ, ಸುನೀತಾ ವೀರಪ್ಪಗೌಡ (ಬನ್ನೂರು) ಅವರು ಇನ್ನೂ ಕಾಣಿಸಿಕೊಂಡಿಲ್ಲ. ಚಿಕ್ಕಮಾದನಾಯಕರ ಪುತ್ರ ಕೆ.ಸಿ. ಲೋಕೇಶ್‌ (ಜಿಪಂ ಮಾಜಿ ಸದಸ್ಯರು) ಪಕ್ಷದ ಕ್ಷೇತ್ರಾಧ್ಯಕ್ಷರಾಗಿದ್ದು, ಸಕ್ರಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮೈಸೂರು ನಗರದಲ್ಲಿ ಬಿಜೆಪಿಯನ್ನು ಕಟ್ಟಿದವರಲ್ಲಿ ಒಬ್ಬರಾದ ನರಸಿಂಹ ರಾಜ ಕ್ಷೇತ್ರದ ಇ. ಮಾರುತಿ ರಾವ್‌ ಪವಾರ್‌ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

ಎಚ್‌.ಡಿ. ಕೋಟೆಯ ಎಂ. ಶಿವಣ್ಣ ಅವರು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿದ್ದು, ಬಿಜೆಪಿ (BJP) ಪರ ಸಕ್ರಿಯ ಪ್ರಚಾರದಲ್ಲಿದ್ದಾರೆ. ಚಿಕ್ಕಣ್ಣ ಅವರು ಜೆಡಿಎಸ್‌ನಲ್ಲಿ (JDS) ಗುರುತಿಸಿಕೊಂಡಿದ್ದಾರೆ. ಚಾಮರಾಜನಗರದ ವಾಟಾಳ್‌ ನಾಗರಾಜ್‌ (Vatal Nagaraj) ಅವರು ಸ್ವತಃ ಅಭ್ಯರ್ಥಿಯಾಗಿದ್ದು, ಪ್ರತಿಭಟನೆಯ ಮೂಲಕವೇ ಪ್ರಚಾರ ಮಾಡುತ್ತಿದ್ದಾರೆ.

ವಿಧಾನ ಪರಿಷತ್‌ ಸದಸ್ಯರ ಪೈಕಿ ಸಿ. ರಮೇಶ್‌ ಅವರು ಟಿ. ನರಸೀಪುರದಲ್ಲಿ ಪ್ರಚಾರ ನಿರತರಾಗಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಸಿದ್ದರಾಜು ಎಲ್ಲೆಡೆ ಸಕ್ರಿಯರಾಗಿದ್ದಾರೆ. ಪ್ರೊ.ಕೆ.ಆರ್‌. ಮಲ್ಲಿಕಾರ್ಜುನಪ್ಪ ಅವರು ಚಾಮರಾಜನಗರದಲ್ಲಿ ಪ್ರಚಾರ ನಡೆಸಿದ್ದಾರೆ. ತೋಂಟದಾರ್ಯ, ಗೋ. ಮಧುಸೂದನ್‌ ಅವರು ಪಕ್ಷದ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಡಿ. ಮಾದೇಗೌಡರು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಟಿ,ಕೆ. ಚಿನ್ನಸ್ವಾಮಿ ಅವರು ವಯೋಸಹಜ ಕಾರಣದಿಂದ ಸಕ್ರಿಯ ರಾಜಕಾರಣದಿಂದ ದೂರ ಇದ್ದಾರೆ. ಕೆ.ಸಿ. ಪುಟ್ಟ ಸಿದ್ದ ಶೆಟ್ಟಿ ಅವರು ಕಾಂಗ್ರೆಸ್‌ (Congress) ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

  • ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ಡಿ.10 ರಂದು ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆ
  • ಮೈಸೂರು -ಚಾಮರಾಜನಗರದಲ್ಲಿ ಬಹುತೇಕ ಮಾಜಿ ಸಂಸದರು, ಮಾಜಿ ಶಾಸಕರು ಪ್ರಚಾರದಲ್ಲಿ ಸಕ್ರಿಯ
click me!