* ಕಾಂಗ್ರೇಸಿಗರು ತಲೆ ತಿರುಕರು ಎಂದಿದ್ದಕ್ಕೆ ಬಿಎಸ್ ವೈಗೆ ವಯಸ್ಸಾಗಿದೆ- ಅರಳು ಮರಳು
* ದುಡ್ಡು ತೆಗೆದುಕೊಳ್ಳುವುದನ್ನು ಫೋಟೋ ತೆಗೆದು ತೋರಿಸಬೇಕಾ.?
* 20ಸಾವಿರ ಕೋಟಿ ರುಪಾಯಿ ಪೆಂಡಿಂಗ್ ಬಿಲ್ಸ್ ಇದೆ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಫೆ.15): ಕಾಂಗ್ರೆಸ್ ನಾಯಕರು ತಲೆ ತಿರುಕರು ಎಂದ ಬಿಎಸ್ ವೈ ಹೇಳಿಕೆಗೆ ಸಿದ್ದರಾಮಯ್ಯ ಟಂಗ್ ಕೊಟ್ಟರು. ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೆರೆ ಗ್ರಾಮದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ವಿರುದ್ದ ಹಾಗೂ ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿದರು. ಬೆಂಗಳೂರಿನಿಂದ ಬಾಗಲಕೋಟೆಗೆ ತೆರಳುತ್ತಿದ್ದ ಸಿದ್ದರಾಮಯ್ಯ ಅವರ ಹೆಲಿಕಾಪ್ಟರ್ ಇಂಧನ ಭರ್ತಿ ಮಾಡುವ ಹಿನ್ನೆಲೆ ಕ್ಯಾದಿಗೆರೆ ಗೆ ಆಗಮಿಸಿದ್ದ ಸಿದ್ದು ಗೆ ಮಾಜಿ ಸಚಿವ ಜಮೀರ್ ಅಹ್ಮದ್, ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸಾಥ್ ನೀಡಿದರು.
undefined
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ, ಅರಳು ಮರಳು ಇರಬೇಕು. ಕಾಂಗ್ರೆಸ್ ನಾಯಕರು ತಲೆ ತಿರುಕರು ಎಂದ ಬಿಎಸ್ ವೈ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ನೀಡಿದರು. ಬಿಜೆಪಿ ಅವರ ಭ್ರಷ್ಟಾಚಾರ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಡಿಕೆಶಿ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೇಳಿಕೆಗೆ ದಾಖಲೆ ಕೊಡಲಿ ಎಂದು ಸಿಎಂ ಬೊಮ್ಮಾಯಿ ಟಾಂಗ್ ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ದುಡ್ಡು ತೆಗೆದುಕೊಳ್ಳುವುದು ಫೋಟೋ ತೆಗೆದು ತೋರಿಸಬೇಕಾ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪತ್ರ ಬರೆದಿದ್ದಾರೆ. ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ತರಾತುರಿ ಟೆಂಡರ್ ಕರೆದು ಭ್ರಷ್ಟಾಚಾರ ಎಂದು ಪತ್ರ ಬರದಿದ್ದಾರೆ.
ರಾಜ್ಯಪಾಲರಿಂದ ತೌಡು ಕುಟ್ಟಿದ ಭಾಷಣ, ಭತ್ತ ಕುಟ್ಟಿದ್ದರೆ ಅಕ್ಕಿ ಆದರೂ ಬರುತ್ತಿತ್ತು: ಸಿದ್ದರಾಮಯ್ಯ
ಭ್ರಷ್ಟಾಚಾರ ನಡೆಯುವಾಗ ಕಡ್ಲೆಪುರಿ ತಿನ್ನುತ್ತಿದ್ದರಾ.? : ನಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆ ನಡೆಸಲಿ. ನಮ್ಮ ಆಡಳಿತ ಅವಧಿಯಲ್ಲಿ ಕಡ್ಲೆಪುರಿ ತಿನ್ನುತ್ತಿದ್ದರಾ? ಶಾರ್ಟ್ ಟೈಮ್ ಟೆಂಡರ್ ನ ಉದ್ದೇಶ ಏನು ಎಂದು ಪ್ರಶ್ನಿಸಿದರು. ಪೆಂಡಿಂಗ್ ಬಿಲ್ಸ್ ಗಳನ್ನು ಹಣ ನೀಡಿದವರಿಗೆ ಕೊಡುತ್ತಿದ್ದಾರೆ. 20ಸಾವಿರ ಕೋಟಿ ಪೆಂಡಿಂಗ್ ಬಿಲ್ಸ್ ಇದೆ, ಹಣ ಕೊಟ್ಟವರಿಗೆ ಬಿಲ್ಸ್ ಕೊಡುತ್ತಿದ್ದಾರೆ. ನೂರು ರೂ. ಇರುವ ಟೆಂಡರ್ ಇನ್ನೂರು ರೂ. ಮಾಡಿದ್ದಾರೆ. ಆ ಮೂಲಕ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಲ್ಲಾ ಟೆಂಡರ್ ರದ್ದುಗೊಳಿಸಬೇಕು ಎಂದರು. ಬೊಮ್ಮಾಯಿ ಕಾಲದಲ್ಲೇ ಇದು ಶುರುವಾಗಿದ್ದು, ಹಿಂದೆ ಹೀಗಾಗಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ತನಿಖೆ ಮಾಡಿಸುತ್ತೇವೆ. ಲೂಟಿ ಹೊಡೆದವರನ್ನು ಜೈಲಿಗೆ ಕಳಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.
ಬಾದಾಮಿ ಜನರಿಗೆ ದಯವಿಟ್ಟು ನನ್ನ ಕ್ಷಮಿಸಿ ಎಂದ ಸಿದ್ದರಾಮಯ್ಯ
ಕಾಂಗ್ರೆಸ್, ಬಿಜೆಪಿ ಆಡಳಿತದ ಭ್ರಷ್ಟಾಚಾರ ತನಿಖೆ ಆಗಲಿ: ನಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ನಡೆದಿದ್ದರೆ ವಿಪಕ್ಷದಲ್ಲಿದ್ದವರು ಏನು ಮಾಡುತ್ತಿದ್ದರು. ಮಾಧ್ಯಮದಲ್ಲಿದ್ದ ನಿವೇನು ಮಾಡುತ್ತಿದ್ದಿರಿ ಎಂದು ಪ್ರಶ್ನೆ? ಆಗ ಬಾಯಲಿ ಕಡಬು ಸಿಕ್ಕಿ ಹಾಕಿ ಕೊಂಡಿತ್ತಾ ಎಂದು ವ್ಯಂಗ್ಯವಾಡಿದರು. ಬಿಜೆಪಿ ಸರ್ಕಾರ ಬಂದು ಮೂರುವರೆ ವರ್ಷವಾಯಿತು. ನಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಆಗಿದ್ದರೆ ತನಿಖೆ ಮಾಡಿಸಬೇಕಿತ್ತು. ಕಾಂಗ್ರೆಸ್, ಬಿಜೆಪಿ ಎರಡೂ ಆಡಳಿತಾವಧಿಯ ತನಿಖೆ ಆಗಲಿ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಧಮ್ ಇದ್ದರೆ ಬಿಜೆಪಿಯವರು ತನಿಖೆ ಮಾಡಿಸಲಿ ಎಂದು ಸಿದ್ಧರಾಮಯ್ಯ ಸವಾಲು ಹಾಕಿದರು.