ಏರ್ ಶೋ ಬಡವರ ಕಾರ್ಯಕ್ರಮನಾ ಅಂತ ಕೇಳುವಷ್ಟು ಅಪ್ರಬುದ್ದರಿದ್ದಾರೆ: ಎಚ್‌ಡಿಕೆ ವಿರುದ್ದ ಆಯನೂರು ಮಂಜುನಾಥ್ ಲೇವಡಿ

Published : Feb 15, 2023, 03:49 PM ISTUpdated : Feb 15, 2023, 03:51 PM IST
ಏರ್ ಶೋ ಬಡವರ ಕಾರ್ಯಕ್ರಮನಾ ಅಂತ ಕೇಳುವಷ್ಟು ಅಪ್ರಬುದ್ದರಿದ್ದಾರೆ: ಎಚ್‌ಡಿಕೆ ವಿರುದ್ದ ಆಯನೂರು ಮಂಜುನಾಥ್ ಲೇವಡಿ

ಸಾರಾಂಶ

ಏರ್ ಶೋ ಅನ್ನು ಬಡವರ ಕಾರ್ಯಕ್ರಮನಾ ಅಂತ ಕೇಳುವಷ್ಟು ಅಪ್ರಬುದ್ದರು ಸದನದಲ್ಲಿದ್ದಾರೆ. ಆ ನಾಯಕರು ಸದನಕ್ಕೆ ಬರೋದಿಲ್ಲ, ಸದನ ಕಲಾಪಗಳಲ್ಲಿ ಭಾಗಿಯಾಗೋದೆ ಇಲ್ಲ. ಅವರ ಭಾಷಣಗಳೇನಿದ್ದರೂ ಬರೀ ಮಾಧ್ಯಮಗಳಿಗೆ ಮಾತ್ರ ಅಂತ ಆಯನೂರು ಮಂಜುನಾಥ್‌ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ. 

ಬೆಂಗಳೂರು (ಫೆಬ್ರವರಿ 15, 2023): ರಾಜ್ಯ ವಿಧಾನ ಮಂಡಲ ವಿಧಿವೇಶನದ ವೇಳೆ ವಿಧಾನ ಪರಿಷತ್‌ನಲ್ಲಿ ಆಯನೂರು ಮಂಜುನಾಥ್‌ ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿ ವಿರುದ್ಧ ಲೇವಡಿ ಮಾಡಿದ್ದಾರೆ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ವೇಳೆ ಮಾತನಾಡಿದ ಆಯನೂರು ಮಂಜುನಾಥ್, ಅಚ್ಚೇ ದಿನ್ ಎನ್ನುವುದು ಅಚ್ಚೇ ಜನರಿಗೆ ಮಾತ್ರ ಬರುತ್ತದೆ. ದೇಶದ ಜನರಿಗೆ ಅಚ್ಚೇ ದಿನ್ ಬಂದಿದೆ, ಆದರೆ, ಕಾಂಗ್ರೆಸ್ ಜೆಡಿಎಸ್‌ನವರಿಗೆ ಯಾವತ್ತೂ ಅಚ್ಚೇ ದಿನ ಬರೋದೇ ಇಲ್ಲ. ಕಾಂಗ್ರೆಸ್, ಜೆಡಿಎಸ್‌ನವರಿಗೆ ಕೇವಲ ಕಚ್ಚಾ ದಿನ್ ಅಂತ ಬಿಜೆಪಿ ನಾಯಕ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.

ಅಲ್ಲದೆ, ಏರ್ ಶೋ ಅನ್ನು ಬಡವರ ಕಾರ್ಯಕ್ರಮನಾ ಅಂತ ಕೇಳುವಷ್ಟು ಅಪ್ರಬುದ್ದರು ಸದನದಲ್ಲಿದ್ದಾರೆ. ಆ ನಾಯಕರು ಸದನಕ್ಕೆ ಬರೋದಿಲ್ಲ, ಸದನ ಕಲಾಪಗಳಲ್ಲಿ ಭಾಗಿಯಾಗೋದೆ ಇಲ್ಲ. ಅವರ ಭಾಷಣಗಳೇನಿದ್ದರೂ ಬರೀ ಮಾಧ್ಯಮಗಳಿಗೆ ಮಾತ್ರ. ಕೇವಲ ಸಿಎಂ ಆಗುವುದಕ್ಕೆ ಮಾತ್ರ ಅವರು ಸದನಕ್ಕೆ ಬರ್ತಾರೆ. ಹೊರಗಡೆ ಮಾತ್ರ ಭಾಷಣ ಮಾಡ್ತಾರೆ, ಇಲ್ಲಿಗೆ (ಸದನ) ಬರೋದೇ ಇಲ್ಲ ಎಂದು ಬಿಜೆಪಿ ನಾಯಕ, ಎಂಎಲ್‌ಸಿ ಆಯನೂರು ಮಂಜುನಾಥ್‌ ಟೀಕೆ ಮಾಡಿದ್ದಾರೆ. 

ಇದನ್ನು ಓದಿ: ಪಾಪ, ಎಚ್‌ಡಿಕೆಗೆ ವಯಸ್ಸಾಗಿದೆ ನಿವೃತ್ತಿ ಆದರೆ ಆಗಲಿ ಬಿಡಿ: ಸಿದ್ದರಾಮಯ್ಯ

ಇನ್ನು, ಬೆಂಗಳೂರಿನಲ್ಲಿ ನಡೆಯುತ್ತಿರುವ ವೈಮಾನಿಕ ಪ್ರದರ್ಶನದ ಬಗ್ಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿರೋ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಆಯನೂರು ಮಂಜುನಾಥ್‌ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವೈಮಾನಿಕ ಪ್ರದರ್ಶನ ಬಡವರ ಕಾರ್ಯಕ್ರಮವಲ್ಲ, ಅದು ದೇಶದ ಸ್ವಾಯತ್ತತೆಯನ್ನು, ಸ್ವಾವಲಂಬಿಯನ್ನು ಪ್ರದರ್ಶಿಸುವ ಕಾರ್ಯಕ್ರಮವಾಗಿದೆ ಎಂದು ಆಯನೂರು ಮಂಜುನಾಥ್‌ ಟೀಕಿಸಿದ್ದಾರೆ. 

ಹಾಗೂ, ಒಂದು ದಿನಕ್ಕೂ ಸದನಕ್ಕೆ ಬರದಿರುವ ಕುಮಾರಸ್ವಾಮಿ ವೈಮಾನಿಕ ಪ್ರದರ್ಶನದ ಬಗ್ಗೆ ಇಂತಹ ಹೇಳಿಕೆ ನೀಡುತ್ತಾರೆ. ಕುಮಾರಸ್ವಾಮಿ ಸದನಕ್ಕೆ ಬರೋದು ಮುಖ್ಯಮಂತ್ರಿ ಆಗೋಕೆ ಮಾತ್ರ. ಬೆಂಗಳೂರಿನಲ್ಲಿ ನಡೆಯುತ್ತಿರುವ ವೈಮಾಣಿಕ ಪ್ರದರ್ಶನದ ಬಗ್ಗೆ ಅಂತಹ ಹೇಳಿಕೆ ಸರಿಯಲ್ಲ ಎಂದೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ನಾಯಕ, ಎಂಎಲ್‌ಸಿ ಆಯನೂರು ಮಂಜುನಾಥ್‌ ಮಾತನಾಡಿದ್ದಾರೆ. 

ಇದನ್ನೂ ಓದಿ: ಎಚ್‌.ಡಿ.ಕುಮಾರಸ್ವಾಮಿಯಿಂದ ಜಾತಿಗಳ ನಡುವೆ ವಿಷಬೀಜ: ಸಚಿವ ಶ್ರೀರಾಮುಲು

ಏರ್‌ ಶೋ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು..?
ಏರೋ ಇಂಡಿಯಾ ಕಾರ್ಯಕ್ರಮದ ಉದ್ಘಾಟನೆಗೆ ಪ್ರಧಾನಿ ಮೋದಿ ಬಂದಿದ್ದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ ಮಾಡಿದ್ರು. ಏರ್‌ ಶೋದಿಂದ ಬಡತನ ನಿವಾರಣೆಯಾಗುತ್ತದಾ ಎಂದು ಅವರು ಹುಬ್ಬಳ್ಳಿಯಲ್ಲಿ ಪ್ರಶ್ನೆ ಮಾಡಿ ವ್ಯಂಗ್ಯವಾಡಿದ್ದರು. 

ಅಲ್ಲದೆ, ಬಿಜೆಪಿಯವರು ಚುನಾವಣೆಯ ನೆಪದಲ್ಲಿ ಜನರನ್ನು ದಾರಿ ತಪ್ಪಿಸುವ ಯತ್ನ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವುದು 14ನೇ ಆವೃತ್ತಿಯ ಏರ್‌ ಶೋ ಆಗಿದೆ. ಇದನ್ನು ಈ ಹಿಂದೆ ಪ್ರಧಾನಿ ಮೋದಿಯವರು ಆರಂಭಿಸಿದ್ದಾರಾ ಎಂದೂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ರು. 

ಇದನ್ನೂ ಓದಿ; ಪರಿಷತ್‌ನಲ್ಲಿ ಸದ್ದು ಮಾಡಿದ ಡಿಫರೆಂಟ್ ಹಾರಗಳ ಅಬ್ಬರ: ಕುಮಾರಸ್ವಾಮಿ ವಿರುದ್ಧ ಸಿಡಿದೆದ್ದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ

ಅಲ್ಲದೆ, ಬಡವರ ಜೀವನದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ನವರು ಚೆಲ್ಲಾಟವಾಡುತ್ತಿವೆ. ನೀರಾವರಿ ಯೋಜನೆ ಹೆಸರಲ್ಲಿ ಈ ಭಾಗದ ಜನರೇ ಲೂಟಿ ಮಾಡ್ತಿದ್ದಾರೆ ಎಂದೂ ಹುಬ್ಬಳ್ಳಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ