ರಾಜಕೀಯಕ್ಕೆ ಬರಬೇಕೆಂದು ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ: ಜೆಡಿಎಸ್ ಟಿಕೆಟ್‌ ಆಕಾಂಕ್ಷಿ

By Sathish Kumar KH  |  First Published Feb 15, 2023, 5:15 PM IST

ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಜಿಲ್ಲೆಗಳಲ್ಲಿ ಸ್ಥಳಗಳಲ್ಲಿ ಸ್ಪರ್ಧೆ
ಅಂದು ನ್ಯಾಯಾಧೀಶ.. ಇಂದು ಜೆಡಿಎಸ್ ಟಿಕೆಟ್ ಆಕಾಂಕ್ಷಿ..!
ಕಾನೂನು ವಿಭಾಗದಲ್ಲಿ ಪಿಎಚ್‌ಡಿ ಮಾಡಿದ ಲಂಬಾಣಿ ಸಮಾಜದ ಮೊದಲಿಗ


ವರದಿ : ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಗದಗ (ಫೆ.15): ಪ್ರಧಾನ ಸಿವಿನ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸುಭಾಷ್ ಚಂದ್ರ ರಾಠೋಡ್ ಅವರು ತಮ್ಮ ಉನ್ನತ ಹುದ್ದಿಗೆ ರಾಜೀನಾಮೆ ನೀಡಿ ರಾಜಕೀಯ ರಂಗ ಪ್ರವೇಶಸಿದ್ದಾರೆ.

Tap to resize

Latest Videos

undefined

ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಲೂಕಿನ ಸಂಕನಾಳ್ ತಾಂಡಾದವರಾಗಿರೋ ಸುಭಾಚಂದ್ರ ಕಳೆದ ಆರು ತಿಂಗಳಿಂದ ಗದಗ ಜಿಲ್ಲೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿದ್ರು.. ಭಷ್ಟಾಚಾರ ವಿರೋಧಿ ಮನಸ್ಥಿತಿ, ಪ್ರಸ್ತುತ ರಾಜಕೀಯದಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ರಾಜಕೀಯ ಪ್ರವೇಶ ಮಾಡಿದ್ದೇನೆ ಎಂದು ಸುಭಾಷ್ ಚಂದ್ರ ಅವರು ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗುವ ಆಸೆ ಈಡೇರೋದಿಲ್ಲ; ಸಚಿವ ಸಿ.ಸಿ.ಪಾಟೀಲ್

ಚಿತ್ತಾಪುರದತ್ತ ಚಿತ್ತ ನೆಟ್ಟ ಸುಭಾಷ್ ಚಂದ್ರ: ರಾಜಕೀಯ ಪ್ರವೇಶ ಮಾಡುವ ಉದ್ದೇಶದಿಂದ ನ್ಯಾಯಾಧೀಶ ಹುದ್ದೆಗೆ ರಾಜೀನಾಮೆ ನೀಡಿದ್ದು, ಜನವರಿ 18 ನೇ ತಾರೀಕು ರಾಜೀನಾಮೆ ಅಂಗೀಕಾರವಾಗಿದೆ‌‌. ಕಲಬುರಗಿ, ಚಿತ್ತಾಪುರ, ಗದಗನಲ್ಲಿ ನ್ಯಾಯಾಧೀಶರಾಗಿ 6 ವರ್ಷ ಸೇವೆ ಸಲ್ಲಿಸಿದ್ದ ಸುಭಾಚಂದ್ರ ಅವರು ಸದ್ಯ ಚಿತ್ತಾಪುರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ 2ನೇ ಪಟ್ಟಿಯಲ್ಲಿ ಸುಭಾಷ್ ಚಂದ್ರ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ. ಚಿತ್ತಾಪುರದಿಂದ ಸ್ಪರ್ಧಿಸಲು ಟಿಕೆಟ್ ನೀಡೋದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಭವವಸೆ ನೀಡಿದ್ದಾರೆ. ಆದರೆ, ಈಗ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಕಾನೂನು ವಿಭಾಗದಲ್ಲಿ ಪಿಎಚ್‌ಡಿ ಮಾಡಿದ ಲಂಬಾಣಿ ಸಮಾಜದ ಮೊದಲಿಗ: ವಿಜಯಪುರ, ಬಾಗಲಕೋಟೆಯಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ನಂತರ ಕರ್ನಾಟಕ ಯೂನಿವರ್ಸಿಟಿಯಿಂದ ಕಾರ್ಮಿಕ ಕಾನೂನು ವಿಷಯದಲ್ಲಿ‌ ಪ್ರಬಂಧ ಮಂಡಿಸಿ ಪಿಎಚ್ ಡಿ ಪಡೆದಿದ್ದಾರೆ. ಕಾನೂನು ವಿಷಯದಲ್ಲಿ Ph.D ಪಡೆದ ಮೊದಲ ಲಂಬಾಣಿ ಯುವಕ ಎಂದೂ ಇವರು ಪ್ರಸಿದ್ಧಿ ಪಡೆದಿದ್ದರು. ಕಾನೂನು ವಿಷಯದಲ್ಲಿ ಪ್ರಧ್ಯಾಪಕರಾಗಿ, ವಕೀಲರಾಗಿ ಸೇವೆ ಸಲ್ಲಿಸಿದ ಅನುಭವ ಸುಭಾಷ್ ಚಂದ್ರ ಅವರಿಗಿದೆ. ಸಾಮಾಜಿಕ ಹೋರಾಟಗಾರರಾದ ಅಣ್ಣಾ ಹಜಾರೆ, ನ್ಯಾಯಾಮೂರ್ತಿ ಸಂತೋಷ ಹೆಗ್ಡೆ ಮತ್ತು ಸಮಾಜಿಕ ಹೋರಾಟಗಾರರಾದ ಎಸ್‌. ಹಿರೇಮ‌ಠ ಮುಂತಾದವರ ಸಲಹೆ ಪಡೆದು ಸಮಾಜ ಸೇವೆಗೆ ಮುಂದಾಗಿದ್ದಾರೆ‌.

Accident: ಮದುವೆ ಮುಗುಸಿ ಮನೆಗೆ ಹೊರಟಿದ್ದ ಮಿನಿ ಬಸ್‌ ಡಿಕ್ಕಿ: ಆಟೋದಲ್ಲಿದ್ದ ಮೂವರು ಸಾವು

ಸಮಾನತೆ ಸೃಷ್ಟಿಸುವ ರಥಯಾತ್ರೆ: 
ಜ್ಯಾತ್ಯಾತೀತ ನಿಲುವು ಹೊಂದಿರುವ ಹಾಗೂ ಪ್ರಾದೇಶಿಕ ಪಕ್ಷ ಸೇರುವ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕಿದೆ. ರಾಜ್ಯದಲ್ಲಿ ಪಂಚರತ್ನ ರಥಯಾತ್ರೆಯ ಮೂಲಕ ಸಾಮಾಜಿಕ ಸಮಾನತೆ‌ ಸೃಷ್ಟಿಸುವ ಹಾಗೂ ಆರ್ಥಿಕತೆಯ ಸದೃಢತೆಗೆ ಯೋಜನೆ ರೂಪಿಸಲಾಗಿದೆ. ಹೀಗಾಗಿ ಜೆಡಿಎಸ್ ಆಯ್ಕೆ ಮಾಡಿಕೊಂಡೆ.
- ಸುಭಾಷ್‌ ಚಂದ್ರ, ನಿವೃತ್ತ ನ್ಯಾಯಾಧೀಶ

click me!