44 ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮಾಧ್ಯಕ್ಷ ಸ್ಥಾನ

Published : Feb 29, 2024, 06:30 AM IST
44 ಕಾಂಗ್ರೆಸ್‌ ಕಾರ್ಯಕರ್ತರಿಗೆ ನಿಗಮಾಧ್ಯಕ್ಷ ಸ್ಥಾನ

ಸಾರಾಂಶ

ಜ.26 ರಂದೇ 34 ಮಂದಿ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆಗಲೇ 34 ಮಂದಿ ಕಾರ್ಯಕರ್ತರ ಪಟ್ಟಿಯನ್ನೂ ಹೈಕಮಾಂಡ್ ರವಾನಿಸಿತ್ತು. ಈವರೆಗೆ ಕಾರ್ಯಕರ್ತರಿಗೆ ನಿಗಮ-ಮಂಡಳಿ ನೇಮಕ ಮಾಡುವ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ 34 ಕಾರ್ಯಕರ್ತರ ಜತೆಗೆ ಹೆಚ್ಚು ವರಿ 10 ಮಂದಿ ಸೇರಿಸಿ 44 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಬೆಂಗಳೂರು(ಫೆ.29): ಕಾಂಗ್ರೆಸ್‌ ಪಕ್ಷದ 44 ಮಂದಿ ಕಾರ್ಯಕರ್ತರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮಗೊಳಿಸಿದ್ದು, ಇಂದು(ಗುರುವಾರ) ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ.

44 ಮಂದಿ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ. ಈ ಪಟ್ಟಿ ಆಯಾ ಇಲಾಖೆಗಳಿಗೆ ರವಾನೆಯಾಗಿದೆ.ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.

ನಿಗಮ-ಮಂಡಳಿ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಈಗ ಡವಡವ

ಜ.26 ರಂದೇ 34 ಮಂದಿ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆಗಲೇ 34 ಮಂದಿ ಕಾರ್ಯಕರ್ತರ ಪಟ್ಟಿಯನ್ನೂ ಹೈಕಮಾಂಡ್ ರವಾನಿಸಿತ್ತು. ಈವರೆಗೆ ಕಾರ್ಯಕರ್ತರಿಗೆ ನಿಗಮ-ಮಂಡಳಿ ನೇಮಕ ಮಾಡುವ ಪ್ರಕ್ರಿಯೆ ನಡೆದಿರಲಿಲ್ಲ. ಇದೀಗ 34 ಕಾರ್ಯಕರ್ತರ ಜತೆಗೆ ಹೆಚ್ಚು ವರಿ 10 ಮಂದಿ ಸೇರಿಸಿ 44 ಮಂದಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಸಿದ್ದರಾಮಯ್ಯ ಅವರ ಆಪ್ತರಾದ ಕೆ. ಮರಿಗೌಡ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ), ಸರೋವರ ಶ್ರೀನಿವಾಸ್ (ಪ್ರವಾಸೋದ್ಯಮ ಅಭಿವೃದ್ಧಿ ನಿಗಮ),
ವಿನೋದ್ ಅಸೂಟಿ (ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ), ಅಲ್ತಾಫ್ (ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ), ಕಾಂತಾ ನಾಯಕ್ (ಕೌಶಲ್ಯ ಅಭಿವೃದ್ಧಿ ನಿಗಮ), ನಾಗಲಕ್ಷ್ಮೀ ಚೌಧರಿ (ಮಹಿಳಾ ಆಯೋಗ), ಮಾಜಿ ಜಿಲ್ಲಾಧ್ಯಕ್ಷರಾದಜೆ.ಎಸ್‌.ಆಂಜನೇಯುಲು (ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ), ಹಿರಿಯ ನಾಯಕ ಎಸ್.ಇ. ಸುಧೀಂದ್ರ, ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್, ಮಾಜಿ ಮೇಯರ್‌ಗಳಾದ ಸಂಪತ್ ರಾಜ್ ಹಾಗೂ ಪದ್ಮಾವತಿ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರಿದ್ದ ತೀರ್ಥ ಹಳ್ಳಿಯ ಆರ್. ಎಂ.ಮಂಜುನಾಥಗೌಡ, ಯುವ ನಾಯಕ ಎಸ್.ಮನೋಹರ್, ಸುಂದರೇಶ್‌ಗೆ ಸ್ಥಾನ ಲಭಿಸಿದೆ.

ನಿಗಮ ಮಂಡಳಿ ಅಧ್ಯಕ್ಷನಾಗಿರುವುದು ನನಗೆ ಬಯಸದೇ ಬಂದ ಭಾಗ್ಯ: ಶಾಸಕ ರಾಜು ಕಾಗೆ

1 ವಿನೋದ್ ಅಸೂಟಿ-ಉಪಾಧ್ಯಕ್ಷ, ಕ್ರೀಡಾ ಪ್ರಾಧಿಕಾರ

2 ಸರೋವರ ಶ್ರೀನಿವಾಸ್, ಅಧ್ಯಕ್ಷ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

3 ಅಲ್ತಾಫ್, ಅಧ್ಯಕ್ಷ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

4 ಕಾಂತಾ ನಾಯಕ್, ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ ನಿಗಮ

5 ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷ, ಮಹಿಳಾ ಆಯೋಗ

6 ಆಂಜನೇಯಲು, ಅಧ್ಯಕ್ಷ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ

7 ಮರಿಗೌಡ, ಅಧ್ಯಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

8 ಆರ್‌.ಎಂ.ಮಂಜುನಾಥ ಗೌಡ -ಮಲೆನಾಡು ಅಭಿವೃದ್ಧಿ ಮಂಡಳಿ

9 ಸುಂದರೇಶ್ -ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ

10 ಪಲ್ಲವಿ, ಸಾಂಬಾರು ಮಂಡಳಿ

11 ಮಂಡ್ಯ ಡಾ.ಹೆಚ್ ಕೃಷ್ಣ- ಆಹಾರ ನಿಗಮ

12 ಮುಂಡರಗಿ ನಾಗರಾಜ್

13 ಬಿ.ಹೆಚ್.ಹರೀಶ್

14 ಡಾ.ಅಂಶುಮಂಥ್

15 ರಘುನಂದನ್ ರಾಮಣ್ಣ

16 ಡಾ.ಬಿ.ಯೋಗೇಶ್ ಬಾಬು

17 ಡಾ.ಎಚ್.ಕೃಷ್ಣ

18 ದೇವಿಂದ್ರಪ್ಪ ಮರ್ತೂರು

19 ರಾಜಶೇಖರ್ ರಾಮಸ್ವಾಮಿ

20 ಎಸ್.ರಾಮಪ್ಪ

21 ಜಯಣ್ಣ

22 ಎಸ್.ಮನೋಹರ್

23 ಆಯೂಬ್ ಖಾನ್

24 ಮಮತಾ ಗುಟ್ಟಿ

25 ಸುಧೀಂದ್ರ

26 ಹೆಚ್.ಎಸ್.ಸುಂದರೇಶ್

27 ಸಂಪತ್ ರಾಜು

28 ಸವಿತ ರಘು

29 ಶಾಕಿರ್ ಸನದಿ

30 ಸೋಮಣ್ಣ ಬೇವಿನಮರದ್

31 ಮಹಬೂಬ್ ಪಾಷ

32 ಕೀರ್ತಿ ಗಣೇಶ್

33 ಮಜರ್ ಖಾನ್

34 ಲಲಿತ್ ರಾಘವ್

35 ಜಿ.ಎಸ್.ಮಂಜುನಾಥ್

36 ಪದ್ಮಾವತಿ

37 ಜಗದೇವ ಗುತ್ತೆದಾರ್

38 ರಮೇಶ್ ಬಾಬು

39 ಸೋಮಣ್ಣ ಬೇವಿನ ಮರದ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Modern Muslim League: ಕಾಂಗ್ರೆಸ್‌ ಆಧುನಿಕ ಮುಸ್ಲಿಂ ಲೀಗ್‌; ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ!
ಬಿಜೆಪಿ ಅಧ್ಯಕ್ಷ ನಿತಿನ್‌ ರಾಜ್ಯಕ್ಕೆ ಮೊದಲ ಭೇಟಿ; ಇಂದು, ನಾಳೆ ಸರಣಿ ಸಭೆ, ಏನೇನು ಕಾರ್ಯಕ್ರಮ? ಇಲ್ಲಿದೆ ಡಿಟೇಲ್ಸ್!