ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಚಂಡ ಬಹುಮತದಿಂದ ಗೆಲ್ಲಲಿದೆ: ವೀರಪ್ಪ ಮೊಯ್ಲಿ

Published : May 11, 2023, 03:43 PM IST
ಕರ್ನಾಟಕದಲ್ಲಿ ಕಾಂಗ್ರೆಸ್‌ ಪ್ರಚಂಡ ಬಹುಮತದಿಂದ ಗೆಲ್ಲಲಿದೆ: ವೀರಪ್ಪ ಮೊಯ್ಲಿ

ಸಾರಾಂಶ

ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದರಾದಾಗಿ ಚುನಾವಣೆಗೆ ಸ್ಪರ್ಧಿಸಿದಾಗಿಂದ ಚಿಕ್ಕಬಳ್ಳಾಪುರ ನಗರಕ್ಕೆ ತಮ್ಮ ಮತ್ತು ಪತ್ನಿ ಹಾಗೂ ಪುತ್ರನ ಮತದಾನದ ಹಕ್ಕನ್ನು ವರ್ಗಾಯಿಸಿಕೊಂಡಿರುವ ಮಾಜಿ ಸಂಸದ ವೀರಪ್ಪ ಮೊಯ್ಲಿ ಬುಧವಾರ ಮಧ್ಯಾಹ್ನ ಎಂಜಿ ರಸ್ತೆಯಲ್ಲಿರುವ ಅರಣ್ಯ ಇಲಾಖೆ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು. 

ಚಿಕ್ಕಬಳ್ಳಾಪುರ (ಮೇ.11): ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದರಾದಾಗಿ ಚುನಾವಣೆಗೆ ಸ್ಪರ್ಧಿಸಿದಾಗಿಂದ ಚಿಕ್ಕಬಳ್ಳಾಪುರ ನಗರಕ್ಕೆ ತಮ್ಮ ಮತ್ತು ಪತ್ನಿ ಹಾಗೂ ಪುತ್ರನ ಮತದಾನದ ಹಕ್ಕನ್ನು ವರ್ಗಾಯಿಸಿಕೊಂಡಿರುವ ಮಾಜಿ ಸಂಸದ ವೀರಪ್ಪ ಮೊಯ್ಲಿ ಬುಧವಾರ ಮಧ್ಯಾಹ್ನ ಎಂಜಿ ರಸ್ತೆಯಲ್ಲಿರುವ ಅರಣ್ಯ ಇಲಾಖೆ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು. ಮತದಾನದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಈ ಭಾರಿ ಕರ್ನಾಟಕದಲ್ಲಿ ಕಾಂಗ್ರೇಸ್‌ ಪ್ರಚಂಡ ಬಹುಮತದಿಂದ ಗೆಲ್ಲಲಿದೆ. ಅದರಲ್ಲಿ ಯಾವುದೆ ಅನುಮಾನ ಬೇಡ ಎಂದರು. ಚಿಕ್ಕಬಳ್ಳಾಪುರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲಿದ್ದಾರೆ. ಈ ಭಾರಿ ರಾಜ್ಯದಲ್ಲಿ ಕಾಂಗ್ರೇಸ್‌ ಗೆಲುವಿನ ಅಲೆ ಇದೆ. ಪ್ರಚಂಡ ಬಹುಮತದಿಂದ ಕಾಂಗ್ರೆಸ್‌ಗೆ ಗೆಲುವು ಸಿಗಲಿದೆ. ಬಿಜೆಪಿ ಪಕ್ಷದ ಭ್ರಷ್ಟಾರದ ವಿರುದ್ಧ ಮತದಾರರು ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

ಒಂದೇ ಕುಟುಂಬ 65 ಸದಸ್ಯರ ಮತದಾನ: ಗಂಡ, ಹೆಂಡತಿ, ಅಪ್ಪ, ಅಮ್ಮ ಇನ್ನೂ ಹೆಚ್ಚು ಎಂದರೆ ಮಕ್ಕಳ ಜೊತೆಯಲ್ಲಿ ಮತದಾನ ಮಾಡುವುದು ಸಾಮಾನ್ಯ. ಆದರೆ ಚಿಕ್ಕಬಳ್ಳಾಪುರ ನಗರದಲ್ಲಿ ಬುಧವಾರ ಎಲ್ಲರನ್ನೂ ಬೆರಗು ಮಾಡುವಂತೆ ವೈಶ್ಯ ಜನಾಂಗದ ಒಂದೇ ಕುಟುಂಬದ 65 ಸದಸ್ಯರು ಒಟ್ಟಿಗೆ ಬಂದು ಮತದಾನ ಮಾಡಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ 161ನೇ ಮತಗಟ್ಟೆಯಲ್ಲಿ ಈ ಕುಟುಂಬ ಮತದಾನ ಮಾಡಿದ್ದಾರೆ. ನಗರದ ಬಾದಾಮ್‌ ಕುಟುಂಬದ ಸದಸ್ಯರೇ ಇವರಾಗಿದ್ದು ಪ್ರತಿ ಬಾರಿ ಚುನಾವಣೆ ನಡೆದಾಗಲೂ ಈ ರೀತಿ ಒಟ್ಟಗೆ ಬಂದು ಮತದಾನ ಮಾಡುವುದು ಈ ಕುಟುಂಬದ ಸದಸ್ಯರ ವಾಡಿಕೆ ಆಗಿದೆ.

ಸಿದ್ಧಾರ್ಥ ಸಿಂಗ್‌ ಗೆಲುವು ಖಚಿತ: ಸಚಿವ ಆನಂದ್‌ ಸಿಂಗ್‌

ವಿಭಕ್ತ ಕುಟುಂಬವಾದರೂ ಒಗ್ಗಟ್ಟು: ನಗರದ ಬಜಾರ್‌ ರಸ್ತೆಯ (ಸರ್‌.ಎಂ.ವಿ. ರಸೆ)್ತ 2ನೇ ಕ್ರಾಸ್‌ ರಸ್ತೆಯಲ್ಲಿ ಈ ಕುಟುಂಬದ ಸದಸ್ಯರು ವಾಸಿಸುತ್ತಾರೆ. ಈ ಮೊದಲು ಇದು ಅವಿಭಕ್ತ ಕುಟುಂಬವಾಗಿತ್ತು. ಕಾಲ ಕಳೆದಂತೆ ಕುಟುಂಬಗಳು ವಿಭಜನೆ ಆಗಿ ಹತ್ತಾರು ಕುಟುಂಬಗಳಾಗಿದ್ದರೂ ಸಹ ಎಲ್ಲರೂ ಒಂದೇ ರಸ್ತೆಯಲ್ಲಿ ಅಕ್ಕಪಕ್ಕದಲ್ಲೇ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರೂ ಒಂದೇ ಕುಟುಂಬದಂತೇ ಇದ್ದಾರೆ. ಹಬ್ಬ ಹರಿದಿನಗಳಲ್ಲಿ, ಸುಖ ದುಃಖಗಳಲ್ಲಿ ಎಲ್ಲರೂ ಒಂದಾಗುತ್ತಾರೆ. ಸಂತೋಷ ಹಂಚಿಕೊಳ್ಳುತ್ತಾರೆ. ಕಷ್ಟಗಳನ್ನು ಒಟ್ಟಿಗೆ ಎದುರಿಸತ್ತಾರೆ.

ಮತದಾನ ಮುಗಿದ ಬೆನ್ನಲ್ಲೇ ರಿಲ್ಯಾಕ್ಸ್ ಮೂಡ್‍ಗೆ ಜಾರಿದ ಸತೀಶ್‌ ಜಾರಕಿಹೊಳಿ

ತಮ್ಮ ಒಗ್ಗಟ್ಟನ್ನು ತೋರ್ಪಡಿಸುವ ಕೆಲಸವನ್ನು ಇಂತಹ ಸಂದರ್ಭಗಳಲ್ಲಿ ಮಾಡುವುದರಿಂದ ತಾವೆಲ್ಲ ಒಂದು ಎಂಬ ಭಾವನೆ ನಮ್ಮಲ್ಲಿದೆ. ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಟ್ಟೆಗೆ ಸೇರಿ ಸಂಪ್ರದಾಯಗಳನ್ನು ಪಾಲಿಸುತ್ತೇವೆ. ಇವೆಲ್ಲವನ್ನು ಕಂಡ ನಮ್ಮ ಸ್ನೇಹಿತರು, ಈ ಭಾಗದದ ಹಿರಿಯರು ನಮ್ಮನ್ನು ಅಭಿನಂದಿಸುತ್ತಾರೆ. ಇದು ಇತರ ಕುಟುಂಬದ ಅಣ್ಣತಮ್ಮಂದಿರಿಗೂ ಮಾದರಿಯಾಗುತ್ತದೆ ಎಂದು ಬಾದಾಮ್‌ ಕುಟುಂಬದ ಸದಸ್ಯರಾದ ಗೋಪಾಲಕೃಷ್ಣ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!