Karnataka election 2023: ಬೂತ್‌ ಏಜೆಂಟ್‌ ಆಗಿದ್ದ ಬಿಜೆಪಿ ಕಾರ್ಯಕರ್ತ ಮೃತ್ಯು! ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

By Sathish Kumar KH  |  First Published May 11, 2023, 3:27 PM IST

ಚಿಂಚೋಳಿಯಲ್ಲಿ ನಿನ್ನೆ ನಡೆದ ಮತದಾನದ ವೇಳೆ ಮತಗಟ್ಟೆಯಲ್ಲಿ ಬೂತ್‌ ಏಜೆಂಟ್‌ ಆಗಿ ಕಾರ್ಯ ನಿರ್ವಹಿಸಿದ್ದ ಬಿಜೆಪಿ ಕಾರ್ಯಕರ್ತನೊಬ್ಬ ಇಂದು (ಗುರುವಾರ) ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 


ಕಲಬುರಗಿ (ಮೇ 11): ಚಿಂಚೋಳಿಯಲ್ಲಿ ನಿನ್ನೆ ನಡೆದ ಮತದಾನದ ವೇಳೆ ಮತಗಟ್ಟೆಯಲ್ಲಿ ಬೂತ್‌ ಏಜೆಂಟ್‌ ಆಗಿ ಕಾರ್ಯ ನಿರ್ವಹಿಸಿದ್ದ ಬಿಜೆಪಿ ಕಾರ್ಯಕರ್ತನೊಬ್ಬ ಇಂದು (ಗುರುವಾರ) ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ರಾಜ್ಯಾದ್ಯಂತ ನಿನ್ನೆ ಬುಧವಾರ ಶಾಂತಿಯುತವಾಗಿ ಮತದಾನ ನಡೆದಿದ್ದು, ಶೇ.72 ಪ್ರಮಾಣ ಮತದಾನವಾಗಿದೆ. ಆದರೆ, ವಿಜಯಪುರ, ಯಾದಗಿರಿ, ಬೆಂಗಳೂರು, ಮೈಸೂರು ಸೇರಿ ಕೆಲವು ಭಾಗಗಳಲ್ಲಿ ಮಾತ್ರ ಗಲಾಟೆ ನಡೆದಿತ್ತು. ಆದರೆ, ಕಲಬುರಗಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿತ್ತು. ಈ ವೇಳೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸಲಗರ ಬಸಂತಪುರ ತಾಂಡಾ ನಿವಾಸಿ ರಾಮು ರಾಠೋಡ್‌ (45) ಭಾರಿ ಉತ್ಸಾಹದಿಂದಲೇ ಬೂತ್‌ ಏಜೆಂಟ್‌ ಆಗಿ ಕಾರ್ಯ ನಿರ್ವಹಿಸಿದ್ದನು. ಆದರೆ, ರಾತ್ರಿ ವೇಳೆ ಕಾಣೆಯಾಗಿದ್ದ ರಾಮು ಅವರು ಬೆಳಗ್ಗೆ ಗ್ರಾಮದ ಹೊರಹೊಲಯದ ಜಮೀನೊಂದರಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

Tap to resize

Latest Videos

undefined

Karnataka Election 2023: ಯಾದಗಿರಿಯ ಕೆಂಭಾವಿ, ಸುರಪುರದಲ್ಲಿ ಸೆಕ್ಷನ್‌ 144 ಜಾರಿ: 2 ದಿನ ಹೊರಬರುವಂತಿಲ್ಲ

ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ ಬಸಂತಪುರದಲ್ಲಿ ಘಟನೆ ನಡೆದಿದೆ. ರಾಮು ರಾಠೋಡ್ (45) ಶವವಾಗಿ ಪತ್ತೆಯಾದ ಬಿಜೆಪಿ ಕಾರ್ಯಕರ್ತನಾಗಿದ್ದಾನೆ. ರಾಮು ಕುಟುಂಬದವರು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪ ಮಾಡಿದ್ದಾರೆ. ರಾಮು, ಸಲಗರ ಬಸಂತಪುರ ತಾಂಡಾ ನಿವಾಸಿ ಆಗಿದ್ದಾನೆ. ನಿನ್ನೆ  ನಡೆದ ಚುನಾವಣೆಯಲ್ಲಿ  ಬಿಜೆಪಿ ಪೋಲಿಂಗ್ ಬೂತ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸಿದ್ದನು. ಆದರೆ, ಕಳೆದ ರಾತ್ರಿ ಮನೆಗೆ ಬಂದಿರಲಿಲ್ಲ. ಇಂದು ಮುಂಜಾನೆ ತಾಂಡಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದೆ. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಾಡುಹಗಲೇ ಝಳಪಿಸಿದ ಮಚ್ಚು: ಬಸ್‌ ಚಾಲಕನ ಕೊಚ್ಚಿ ಕೊಲೆ: 
ಕಲಬುರಗಿ ನಗರದ ಸಿಟಿ ಬಸ್‌ ನಿಲ್ದಾಣದಲ್ಲಿ ಹಾಡು ಹಗಲೇ ಮಾರಕಾಸ್ತ್ರಗಳಿಂದ ದಿಂದ ಕೊಚ್ಚಿ ಬಸ್ ಚಾಲಕನ ಬರ್ಬರ ಹತ್ಯೆ ಮಾಡಲಾಗಿದೆ. ಡಿಪೋ ನಂಬರ 3ರ ಚಾಲಕ ನಾಗಯ್ಯ ಸ್ವಾಮಿ (45) ಹತ್ಯೆಯಾದ ವ್ಯಕ್ತಿಯಾಗಿದ್ದಾರೆ. ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದ ವೇಳೆ ಘಟನೆ ನಡೆದಿದೆ. ಬಸ್‌ನಲ್ಲಿ ಇದ್ದಾಗಲೇ 3 ಜನ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಬಸ್‌ ನಿಂದ ಇಳಿದು ತಪ್ಪಿಸಿಕೊಂಡು ಓಡಿ ಹೋದರೂ ಬಿಡದೇ ಅಟ್ಟಾಡಿಸಿಕೊಮಡು ಹೋಗಿ ಕೊಚ್ಚಿ ಕೊಲೆ ಮಾಡಿದ್ದಾರೆ. 

BENGALURU ACCIDENT: ಬೈಕ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌: ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಮಹಿಳೆ

ಹಳೆಯ ವೈಷಮ್ಯದ ಹಿನ್ನೆಲೆ ದಾಳಿ:
ಇನ್ನು ಕಲಬುರಗಿ ನಗರ ಬಸ್‌ ನಿಲ್ದಾಣದಲ್ಲಿ ಹಾಡಹಗಲೇ ಬಸ್‌ ಚಾಲಕನನ್ನು ಕೊಲೆ ಮಾಡುವುದಕ್ಕೆ ಕಾರಣ ಹಳೆಯ ವೈಷಮ್ಯ ಎಮದು ಹೇಳಲಾಗುತ್ತಿದೆ. ಆದರೆ, ಪೊಲೀಸರ ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ. ಆದರೆ, ಮಾರಕಾಸ್ತ್ರಗಳಿಂದ ಬಸ್‌ ನಿಲ್ದಾಣದಲ್ಲಿ ಕರ್ತವ್ಯನಿರತ ಬಸ್‌ ಚಾಲಕನನ್ನು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುವುದನ್ನು ಸಾವಿರಾರು ಜನರು ಕಣ್ಣಾರೆ ನೋಡಿದ್ದು, ಭಯಭೀತರಾಗಿದ್ದಾರೆ. ಬಸ್‌ ಚಾಲಕ ಕೈ, ಕಾಲು ತುಂಡಾಗಿ ಬಿದ್ದಿದ್ದು, ರಕ್ತದೋಕುಳಿಯೇ ಹರಿದಿದೆ. ಘಟನಾ ಸ್ಥಳಕ್ಕೆ ಬ್ರಹ್ಮಪುರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ.

click me!