ಕಾಂಗ್ರೆಸ್‌ನಿಂದ ಸಮಾಜ ಇಬ್ಭಾಗ ಮಾಡುವ ಹುನ್ನಾರ: ಸಿ.ಟಿ.ರವಿ

By Kannadaprabha News  |  First Published Dec 26, 2022, 2:00 AM IST

ಬಿಜೆಪಿ ಮೀಸಲಾತಿ ವಿರೋಧಿ ಎನ್ನುವುದು ಕಾಂಗ್ರೆಸ್‌ನ ಮತ್ತೊಂದು ಮಾಮೂಲಿ ಸುಳ್ಳು. ಆದರೆ, ಮೀಸಲಾತಿಯನ್ನು ರಾಜ್ಯದಲ್ಲಿ ಹೆಚ್ಚಿಸಿದ್ದೇ ನಮ್ಮ ಸರ್ಕಾರ: ಸಿ.ಟಿ.ರವಿ 


ಚಿಕ್ಕಮಗಳೂರು(ಡಿ.26):  ಅಭಿವೃದ್ಧಿ ಮತ್ತು ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡಿದರೆ, ಕಾಂಗ್ರೆಸ್‌ ಪಕ್ಷ ಜಾತ್ಯತೀತತೆಯನ್ನು ಪ್ರಚೋದಿಸುತ್ತ ಸಮಾಜವನ್ನು ಇಬ್ಭಾಗ ಮಾಡಿ ಲಾಭ ಪಡೆಯುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು. 

ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾನುವಾರ ಮಾತನಾಡಿ, ಕಾಂಗ್ರೆಸಿಗರು ಜಾತೀಯತೆ ಅಜೆಂಡಾ ಇಟ್ಟುಕೊಂಡು ನಮ್ಮ ವಿರುದ್ಧ ಸುಳ್ಳುಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸಂವಿಧಾನ ವಿರೋಧಿ ಎನ್ನುವುದು ಕಾಂಗ್ರೆಸ್‌ ಹೇಳುವ ಮೊದಲ ಸುಳ್ಳು. ಸಂವಿಧಾನ ಗೌರವ್‌ ದಿವಸ್‌ ಆರಂಭ ಆಗಿದ್ದೇ ಮೋದಿ ಅವರು ಪ್ರಧಾನಿ ಆದ ನಂತರ. ಬಿಜೆಪಿಯ​ನ್ನು ಅಂಬೇಡ್ಕರ್‌ ವಿರೋಧಿ ಎಂದು ಕರೆದರೂ ಎಲ್ಲಾದರೂ ಅಂಬೇಡ್ಕರ್‌ ಅವರಿಗೆ ಅಗೌರವವಾದರೆ ಕೂಡಲೇ ಆರೆಸ್ಸೆಸ್‌, ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದರು. ಆದರೆ ಅಂಬೇಡ್ಕರ್‌ ಅವರ ಪಂಚಧಾಮಗಳನ್ನು ಪಂಚತೀರ್ಥ ಎಂದು ಕರೆದು ಅಭಿವೃದ್ಧಿಪಡಿಸಿದ್ದು ಮೋದಿ. ಕಾಂಗ್ರೆಸ್‌ ಅಂಬೇಡ್ಕರ್‌ರನ್ನು ಸೋಲಿಸಿದ್ದಲ್ಲದೆ, ಅವರು ಬದುಕಿದ್ದಾಗಲೂ, ಸತ್ತಾಗಲೂ ಅನ್ಯಾಯ ಮಾಡಿತ್ತು ಎಂದು ದೂರಿದರು.

Tap to resize

Latest Videos

ಜೆಡಿಎಸ್‌ಗೆ ಮರಳಲು ದತ್ತಗೆ ಗಡುವು ; ಪ್ರಜ್ವಲ್ ರೇವಣ್ಣ

ಬಿಜೆಪಿ ಮೀಸಲಾತಿ ವಿರೋಧಿ ಎನ್ನುವುದು ಕಾಂಗ್ರೆಸ್‌ನ ಮತ್ತೊಂದು ಮಾಮೂಲಿ ಸುಳ್ಳು. ಆದರೆ, ಮೀಸಲಾತಿಯನ್ನು ರಾಜ್ಯದಲ್ಲಿ ಹೆಚ್ಚಿಸಿದ್ದೇ ನಮ್ಮ ಸರ್ಕಾರ. ಬಡ್ತಿ ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವ್ಯತಿರಿಕ್ತ ತೀರ್ಪು ಬಂದಾಗ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಪರವಾಗಿ ಪ್ರಮಾಣಪತ್ರ ಸಲ್ಲಿಸಿತು. ಇದನ್ನು ಮರೆಮಾಚುವ ಪ್ರಯತ್ನ ವಿರೋಧಿಗಳದ್ದು. ಈ ಸುಳ್ಳುಗಳ ಜೊತೆಗೆ ಜಾತಿಯನ್ನು ಪ್ರಚೋದಿಸಿ, ಸಮಾಜವನ್ನು ಒಡೆದು ರಾಜಕೀಯ ಲಾಭ ಪಡೆಯುವುದು ಕಾಂಗ್ರೆಸ್‌ ಮಾಡುವ ಮತ್ತೊಂದು ಕೆಲಸ ಎಂದು ಆರೋಪಿಸಿದರು.

click me!