Congress Protest: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ರಣಕಹಳೆ

By Kannadaprabha News  |  First Published Sep 5, 2022, 6:22 AM IST
  • ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ ರಣಕಹಳೆ
  •  ದಿಲ್ಲಿಯಲ್ಲಿ ಬೃಹತ್‌ ರಾರ‍ಯಲಿ
  • ನಿರುದ್ಯೋಗ, ಹಣದುಬ್ಬರ ಮೋದಿಯ ಅಣ್ಣ-ತಮ್ಮ: ವಾಗ್ದಾಳಿ
  • ಇಂದು ಏನನ್ನಾದರೂ ಖರೀದಿಸಬೇಕು ಎಂದರೆ 10 ಸಲ ಯೋಚಿಸಬೇಕು: ರಾಹುಲ್‌ ಕಿಡಿ
  • ಕುಟುಂಬ ರಕ್ಷಿಸಲು ನಡೆದ Rally ಇದು:ಬಿಜೆಪಿ ತಿರುಗೇಟು

ನವದೆಹಲಿ (ಸೆ.5) :  ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಬೃಹತ್‌ Rally ನಡೆಸಿದ ಕಾಂಗ್ರೆಸ್‌ ಪಕ್ಷ, ನಿರುದ್ಯೋಗ ಹಾಗೂ ಹಣದುಬ್ಬರಗಳು ಮೋದಿ ಸರ್ಕಾರದ ಇಬ್ಬರು ಸಹೋದರರು ಎಂದು ಹರಿಹಾಯ್ದಿದೆ. ಅಲ್ಲದೆ, ಜನರು ಕಷ್ಟಪಡುತ್ತಿರುವಾಗ ‘ರಾಜ ಮೋದಿ’ ತನ್ನ ಸ್ನೇಹಿತರ ಆದಾಯ ಹೆಚ್ಚಿಸಿ ಅವರನ್ನು ತೃಪ್ತಿಪಡಿಸುವಲ್ಲಿ ಬ್ಯುಸಿಯಾಗಿದ್ದಾರೆ ಎಂದೂ ಆಕ್ರೋಶ ವ್ಯಕ್ತಪಡಿಸಿದೆ.

Mehangai Par Halla Bol: ಬೆಲೆಯೇರಿಕೆ ವಿರುದ್ಧ ಇಂದು ಕಾಂಗ್ರೆಸ್‌ ಮಹಾರ್‍ಯಾಲಿ

Tap to resize

Latest Videos

ರಾಮಲೀಲಾ ಮೈದಾನ(Ram Leela Ground)ದಲ್ಲಿ ದೇಶದ ಎಲ್ಲೆಡೆಯಿಂದ ಬಂದ ಕಾಂಗ್ರೆಸ್‌(Congress) ನಾಯಕರ ‘ಮೆಹಂಗಾಯಿ ಪರ್‌ ಹಲ್ಲಾ ಬೋಲ್‌ ರಾರ‍ಯಲಿ’ಯಲ್ಲಿ ಮಾತನಾಡಿದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge), ‘ನಾವು ಸಂಸತ್ತಿನಲ್ಲಿ ಬೆಲೆಯೇರಿಕೆ ಬಗ್ಗೆ ಚರ್ಚಿಸಲು ಎಲ್ಲಾ ಪ್ರಯತ್ನ ನಡೆಸಿದೆವು. ಆದರೆ ಸರ್ಕಾರ ಅದನ್ನು ತಪ್ಪಿಸಿತು. ರಾಹುಲ್‌ ಗಾಂಧಿ(Rahul Gandhi) ನಾಯಕತ್ವದಲ್ಲಿ ನಮ್ಮ ಪಕ್ಷ ಈ ಹೋರಾಟವನ್ನು ಸಂಸತ್ತಿನಿಂದ ಬೀದಿಗೆ ತಂದ ಮೇಲೆ ಚರ್ಚೆಗೆ ಒಪ್ಪಿತು. ಆದರೆ ಚರ್ಚೆಗೆ ಕೇವಲ 5 ತಾಸು ಸಮಯ ನೀಡಿ, ಅದರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಕೇವಲ 28 ನಿಮಿಷ ಸಮಯ ನೀಡಿತು. ನಿತ್ಯ ಜನಸಾಮಾನ್ಯರು ಬಳಸುವ ವಸ್ತುಗಳ ಮೇಲೆ ಜಿಎಸ್‌ಟಿ ಏರಿಕೆ ಮಾಡಿ ದೇಶದಲ್ಲಿ ಬೆಲೆಯೇರಿಕೆಯ ಸಮಸ್ಯೆಉಲ್ಬಣಗೊಳ್ಳುವಂತೆ ಕೇಂದ್ರ ಸರ್ಕಾರ ಮಾಡಿದೆ. ಇನ್ನೊಂದೆಡೆ ನಿರುದ್ಯೋಗ ಹೆಚ್ಚುತ್ತಿದ್ದರೆ, ರುಪಾಯಿ ಮೌಲ್ಯ ಕುಸಿಯುತ್ತಿದೆ. ಮೋದಿಜೀ, ನೀವೇನು ಮಾಡುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಟ್ವೀಟ್‌ ಮಾಡಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ‘ಇಂದು ಜನರು ಏನನ್ನಾದರೂ ಖರೀದಿಸಬೇಕು ಅಂದರೆ ಹತ್ತು ಸಲ ಯೋಚಿಸುವಂತಾಗಿದೆ. ಇದಕ್ಕೆಲ್ಲಾ ಪ್ರಧಾನಿಯೇ ಹೊಣೆ. ನಾವು ಹಣದುಬ್ಬರದ ವಿರುದ್ಧ ಕೂಗೆಬ್ಬಿಸುತ್ತಲೇ ಇದ್ದರೂ ರಾಜ ಮಾತ್ರ ಕೇಳಿಸಿಕೊಳ್ಳುತ್ತಿಲ್ಲ’ ಎಂದು ಕಿಡಿಕಾರಿದರು.

ಇನ್ನಿಬ್ಬರು ಸೋದರರು ಇ.ಡಿ, ಸಿಬಿಐ:

ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌(Jairam Ramesh) ಮಾತನಾಡಿ, ‘ಮೋದಿ(Narendra Modi) ಸರ್ಕಾರಕ್ಕೆ ಇಬ್ಬರು ಸಹೋದರರಿದ್ದಾರೆ. ಒಬ್ಬರು ನಿರುದ್ಯೋಗಿ, ಇನ್ನೊಬ್ಬರು ಹಣದುಬ್ಬರ. ಮೋದಿ ಸರ್ಕಾರಕ್ಕೆ ಇನ್ನೂ ಇಬ್ಬರು ಅಣ್ತಮ್ಮಂದಿರಿದ್ದಾರೆ. ಅವರು ಇ.ಡಿ(ED). ಮತ್ತು ಸಿಬಿಐ(CBI). ನಾವು 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹೋರಾಟ ನಡೆಸುತ್ತಿಲ್ಲ. ಬದಲಿಗೆ ದೇಶದ ಜನರು ಎದುರಿಸುತ್ತಿರುವ ಎರಡು ಅತಿದೊಡ್ಡ ಸಮಸ್ಯೆಗಳಾದ ನಿರುದ್ಯೋಗ ಹಾಗೂ ಹಣದುಬ್ಬರದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಹೋರಾಟ ನಡೆಸುತ್ತಿದ್ದೇವೆ’ ಎಂದು ಹೇಳಿದರು.

ಪಾಕ್‌, ಚೀನಾಕ್ಕೆ ಮಾತ್ರ ಲಾಭ-ರಾಹುಲ್‌:

Rallyಯಲ್ಲಿ ಮಾತನಾಡಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಜೆಪಿ ಸರ್ಕಾರ(BJP Govt)ದಿಂದಾಗಿ ದೇಶದಲ್ಲಿ ದ್ವೇಷ ಹಾಗೂ ಭೀತಿ ಹೆಚ್ಚುತ್ತಿದೆ. ಅದರಿಂದಾಗಿ ದೇಶ ದುರ್ಬಲಗೊಳ್ಳುತ್ತಿದೆ. ಕೇವಲ ಕಾಂಗ್ರೆಸ್‌ ಪಕ್ಷ ಮಾತ್ರ ದೇಶವನ್ನು ಒಗ್ಗೂಡಿಸಬಲ್ಲದು. ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ನಮ್ಮ ಪಕ್ಷದ ಬಾಯಿ ಮುಚ್ಚಿಸಿರುವುದರಿಂದ ನಮಗುಳಿದಿರುವ ದಾರಿ ನೇರವಾಗಿ ಜನರ ಜೊತೆ ಮಾತನಾಡುವುದೊಂದೇ ಆಗಿದೆ. ಅವರಿಗೆ ನಾವು ಸತ್ಯ ತಿಳಿಸಿ, ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕಿದೆ ಎಂದು ಹೇಳಿದರು.

‘ಬಿಜೆಪಿ ಮತ್ತು ಆರ್‌ಎಸ್‌ಎಸ್‌(BJP-RSS)ನವರು ಹರಡುತ್ತಿರುವ ದ್ವೇಷ ಮತ್ತು ಭೀತಿಯಿಂದಾಗಿ ಭಾರತಕ್ಕೆ ಯಾವುದೇ ಲಾಭವಿಲ್ಲ. ಬದಲಿಗೆ ಚೀನಾ ಮತ್ತು ಪಾಕಿಸ್ತಾನಕ್ಕೆ ಲಾಭವಾಗಲಿದೆ. ದೇಶದ ಜನರಿಗೆ ಉದ್ಯೋಗ ಒದಗಿಸುತ್ತೇನೆ ಎಂದು ಹೇಳಿದ್ದ ಮೋದಿ ಈಗ ತನ್ನ ಇಬ್ಬರು ಬೃಹತ್‌ ಉದ್ಯಮಿ ಸ್ನೇಹಿತರಿಗೆ ಮಾತ್ರ ಉದ್ಯೋಗ ಒದಗಿಸಿದ್ದಾರೆ. ಅವರು ಪ್ರಧಾನಿಗಾಗಿ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಕೂಡ ಅವರಿಗಾಗಿ 24 ಗಂಟೆ ಕೆಲಸ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ: ಮೋದಿಗೆ ಸಂಸಾರದ ನಿರ್ವಹಣೆ ಗೊತ್ತಿಲ್ಲ, ರಮೇಶ್‌ ಕುಮಾರ್‌

ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಪಕ್ಷದ ನಾಯಕರಾದ ಅಧೀರ್‌ ರಂಜನ್‌ ಚೌಧುರಿ, ಭೂಪೇಶ್‌ ಭಾಘೇಲ್‌, ಭೂಪಿಂದರ್‌ ಸಿಂಗ್‌ ಹೂಡಾ ಮುಂತಾದವರು ಮಾತನಾಡಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

click me!