ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಸಮಾವೇಶಕ್ಕೆ ಹೋಗಿದ್ದ ಕಾಂಗ್ರೆಸ್‌ನ ಪ್ರಜಾಧ್ವನಿ ಬಸ್ ಮಾರ್ಗದ ಮಧ್ಯೆಯೇ ಕೆಟ್ಟು ನಿಂತುಕೊಂಡಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರಜಾಧ್ವನಿ ಬಸ್ ಇಳಿದು ಬೇರೊಂದು ವಾಹನದಲ್ಲಿ ಹೋಗಿದ್ದಾರೆ.
ಬೆಳಗಾವಿ (ಮಾ.01): ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಸಮಾವೇಶಕ್ಕೆ ಹೋಗಿದ್ದ ಕಾಂಗ್ರೆಸ್‌ನ ಪ್ರಜಾಧ್ವನಿ ಬಸ್ ಮಾರ್ಗದ ಮಧ್ಯೆಯೇ ಕೆಟ್ಟು ನಿಂತುಕೊಂಡಿದೆ. ಸಮಾವೇಶ ಮುಗಿಸಿ ಕಿತ್ತೂರು ತಾಲೂಕಿನ ಇಟಗಿ ಕಡೆಗೆ ಹೋಗುತ್ತಿರುವಾಗ ಬಸ್ ಕೆಟ್ಟು ನಿಂತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಸ್ ಇಳಿದು ಬೇರೊಂದು ವಾಹನದಲ್ಲಿ ಹೋಗಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅವರು, ಸಮಾವೇಶ ಮುಗುಸಿ ಕಿತ್ತೂರು ವಿಧಾನಸಭಾ ಕ್ಷೇತ್ರದ ಇಟಗಿ ಕಡೆಗೆ ಬಸ್‌ನಲ್ಲಿ ಹೊರಟಿಟದ್ದರು, ಈ ವೇಳೆ ಮಾರ್ಗಮಧ್ಯೆಯೇ ಸಿದ್ದರಾಮಯ್ಯ ತೆರಳುತ್ತಿದ್ದ ಪ್ರಜಾಧ್ವನಿ ಬಸ್ ಕೆಟ್ಟು ನಿಂತಿದೆ. ಬಸರಕೋಡ ಬಳಿ ಪ್ರಜಾಧ್ವನಿ ಬಸ್‌ನ ಕ್ಲಚ್ ಪ್ಲೇಟ್ ತುಂಡಾಗಿದೆ. ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಬಸರಕೋಡ ಗ್ರಾಮವಾಗಿದ್ದು, ಇಲ್ಲಿ ಬಸ್‌ನಿಮದ ಕೆಳಗೆ ಇಳಿದ ಸಿದ್ದರಾಮಯ್ಯ ಹಾಗೂ ಇತರ ನಾಯಕರು ಬದಲಿ ವಾಹನದಲ್ಲಿ ಇಟಗಿ ಗ್ರಾಮಕ್ಕೆ ತೆರಳಿದರು.
ಮಣ್ಣಿನ ಮಗನಿಗೆ ಒಂದು ಅವಕಾಶ ಕೊಡಿ: ಮತ್ತೊಮ್ಮೆ ಸಿಎಂ ಬಯಕೆ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್
ಸಿದ್ದರಾಮಯ್ಯ ಬಿಟ್ಟು ಕಾರಲ್ಲಿ ಹೋಗಿದ್ದ ಇತರೆ ನಾಯಕರು: ಬೆಳಗಾವಿ ಜಿಲ್ಲೆ ಖಾನಾಪುರ ವಿಧಾನಸಭಾ ಕ್ಷೇತ್ರದ ಬೀಡಿ ಸಮಾವೇಶ ಮುಗಿಸಿ ಇಟಗಿ ಕ್ರಾಸ್‌ಗೆ ತೆರಳುತ್ತಿದ್ದ ಸಿದ್ದರಾಮಯ್ಯ ಅವರು ಕಿತ್ತೂರು ಕ್ಷೇತ್ರದ ಇಟಗಿ ಕ್ರಾಸ್‌ಗೆ ಬಸ್‌ನಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದೆ. ಇನ್ನು ಖಾನಾಪುರದ ಬೀಡಿ ಸಮಾವೇಶದಲ್ಲಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವ ಹೊತ್ತಿನಲ್ಲಿಯೇ ವೇದಿಕೆಯಿಂದ ಇಳಿದ ಕಾಂಗ್ರೆಸ್ ನಾಯಕರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಪ್ರಕಾಶ್ ರಾಥೋಡ್ ಸೇರಿ ಇತರರು ಕಾರಿನಲ್ಲಿ ಹೊರಟು ಇಟಗಿ ಸೇರಿದ್ದರು. ಆದರೆ, ಈಗ ಸಿದ್ದರಾಮಯ್ಯ ಹೊರಟಿದ್ದ ಬಸ್ ಕೆಟ್ಟು ನಿಂತಿದೆ.
ಕಾರಿನಲ್ಲಿಯೇ ಇಟಗಿ ಸಮಾವೇಶ ಸೇರಿಕೊಂಡ ಸಿದ್ದರಾಮಯ್ಯ: ಪ್ರಜಾಧ್ವನಿ ಸಮಾವೇಶಕ್ಕೆ ಬಸ್ ಬಿಟ್ಟು ಕಾರಿನಲ್ಲಿ ತೆರಳಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಇಟಗಿ ಕ್ರಾಸ್‌ನಲ್ಲಿ ನಡೆಯುತ್ತಿದ್ದ ಪ್ರಜಾಧ್ವನಿ ಸಮಾವೇಶಕ್ಕೆ ಹಾಜರಾಗಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಶಿವಮೊಗ್ಗದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿಗೆ ಈಶ್ವರಪ್ಪ ಕಾರಣ. ನಾನು, ಡಿಕೆಶಿ, ಸುರ್ಜೇವಾಲಾ ಅವರ ಮನೆಗೆ ಹೋಗಿದ್ದೆವು. ಆ ಯಮ್ಮನ ಕೇಳಿದ್ವಿ ಯಾಕೆ ನಿಮ್ಮ ಯಜಮಾನರು ಆತ್ಮಹತ್ಯೆ ಮಾಡಿಕೊಂಡರು ಎಂದು. ಈಶ್ವರಪ್ಪಗೆ ಬಿಲ್ ಕೊಡು ಅಂತಾ ಕೇಳಿದ್ರೆ 40% ಕಮಿಷನ್ ಕೇಳಿದರು ಎಂದು ಹೇಳಿದರು. ಮತ್ತೊಂದೆಡೆ ಕೆ.ಆರ್.ಪುರಂ ಇನ್ಸ್‌ಪೆಕ್ಟರ್ ನಂದೀಶ್ ಅಂತಾ ಆತ್ಮಹತ್ಯೆ ಮಾಡಿಕೊಂಡರು. ಎಂಟಿಬಿ ನಾಗರಾಜ್ ಅವರು ಸತ್ತಾಗ ನೋಡೋಕೆ ಹೋಗಿದ್ದಾಗ, ಪಾಪ 70 ರಿಂದ 80 ಲಕ್ಷ ಸಾಲ ಮಾಡಿ ಟ್ರಾನ್ಸಫರ್ ತಗೊಂಡಿದ್ದ ಎಂದು ಹೇಳಿದ್ದಾರೆ. ಇದರಿಂದ ಲಂಚ ಇಲ್ಲದೇ ಯಾವುದೇ ಟ್ರಾನ್ಸಫರ್ ಆಗ್ತಿಲ್ಲ ಎಂಬುದು ಗೊತ್ತಾಗುತ್ತಿದೆ ಎಂದರು.
ಕರ್ನಾಟಕದ ಜನ ಬದಲಾವಣೆ ಬಯಸಿದ್ದಾರೆ: ಸಿದ್ದರಾಮಯ್ಯ
ವಿಧಾನಸೌಧದ ಗೋಡೆ ಲಂಚ, ಲಂಚ ಎನ್ನುತ್ತಿದೆ: ಪೊಲೀಸ್ ಇನ್ಸ್‌ಪೆಕ್ಟರ್ ಗೆ ಎಷ್ಟು, ಸರ್ಕಲ್ ಇನ್ಸ್‌ಪೆಕ್ಟರ್ ಗೆ ಎಷ್ಟು ತಹಶಿಲ್ದಾರ್ ಗೆ ಎಷ್ಟು ಅಂತಾ ಬೋರ್ಡ್ ಹಾಕಿ ಬಿಟ್ಟಿದ್ದಾರೆ. ವಿಧಾನಸಭೆ ಲಂಚಮಯ ಆಗಿದೆ. ಒಬ್ಬ ಇಂಜಿನಿಯರ್ ದುಡ್ಡು ತಗೊಂಡು ಹೋಗಬೇಕಾದ್ರೆ ಸಿಕ್ಕಾಕಿಕೊಂಡು ಬಿಟ್ರು. ವಿಧಾನಸಭೆ ಗೋಡೆಗೆ ಕಿವಿಗೊಟ್ಟು ಕೇಳಿ ಅದು ಪಿಸುಗುಡುತ್ತೆ. ವಿಧಾನಸೌಧ ಗೋಡೆ ಕೇವಲ ಲಂಚ ಲಂಚ ಅಂತಾ ಪಿಸುಗುಡುತ್ತದೆ. ರೈತರ 50 ಸಾವಿರ ರೂ. ಸಾಲ ಮನ್ನಾ ಮಾಡಿದೆ. ಇವರು 50 ರೂಪಾಯಿ ಆದ್ರೂ ಮನ್ನಾ ಮಾಡಿದ್ರಾ? ಈ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೆಸೆಯಿರಿ ಅಂತಾ ಜನರಲ್ಲಿ ಮನವಿ ಮಾಡುತ್ತೀನಿ ಎಂದು ಸಿದ್ದರಾಮಯ್ಯ ಹೇಳಿದರು.