ಸರ್ಕಾರ ನಡೆಸುವ ಬಗ್ಗೆ ಸಿದ್ದು ಕಡೆ ಬೊಮ್ಮಾಯಿ ಪಾಠ ಕೇಳಲಿ: ಜಮೀರ್‌ ಅಹ್ಮದ್‌

By Kannadaprabha News  |  First Published Mar 1, 2023, 10:02 PM IST

ಸರ್ಕಾರ ಹೇಗೆ ನಡೆಸಬೇಕು ಎಂಬುದನ್ನು ಬೊಮ್ಮಾಯಿ ಅವರು, ಸಿದ್ದರಾಮಯ್ಯ ಬಳಿ ಪಾಠ ಹೇಳಿಸಿಕೊಳ್ಳಬೇಕು. ಕೊನೆಘಳಿಗೆಯಲ್ಲಾದರೂ ಜನರ ಒಳತಿಗಾಗಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಜಮೀರ್‌ ಅಹ್ಮದ್‌ ಹೇಳಿದರು. 


ನವಲಗುಂದ (ಮಾ.01): ಸರ್ಕಾರ ಹೇಗೆ ನಡೆಸಬೇಕು ಎಂಬುದನ್ನು ಬೊಮ್ಮಾಯಿ ಅವರು, ಸಿದ್ದರಾಮಯ್ಯ ಬಳಿ ಪಾಠ ಹೇಳಿಸಿಕೊಳ್ಳಬೇಕು. ಕೊನೆಘಳಿಗೆಯಲ್ಲಾದರೂ ಜನರ ಒಳತಿಗಾಗಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಜಮೀರ್‌ ಅಹ್ಮದ್‌ ಹೇಳಿದರು. ನವಲಗುಂದದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್‌ ಮಾಡಿದ ಸಾಧನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತದೆ. ಅದರಂತೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಡಿದ ಕಾರ್ಯಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರಜಾಧ್ವನಿ ಯಾತ್ರೆ ಕೈಗೊಳ್ಳಲಾಗಿದೆ. 

ಆದರೆ, ಬಿಜೆಪಿ ಹಿಂದೂ-ಮುಸ್ಲಿಂ ಜಾತಿ ಮೇಲೆ ರಾಜಕಾರಣ ಮಾಡುತ್ತಾ ಬಂದಿದೆ. ಹೊರತಾಗಿ ಅಭಿವೃದ್ಧಿ ಮಾಡಿಲ್ಲ ಎಂದು ಕಿಡಿಕಾರಿದರು. ಕೋವಿಡ್‌ ಸಂದರ್ಭದಲ್ಲಿ ಕಾಂಗ್ರೆಸ್‌ನ ಅನ್ನಭಾಗ್ಯದ ಅಕ್ಕಿಯಿಂದಲೇ ಬಿಜೆಪಿ ಜನರು ಹಸಿವಿನಿಂದ ಸಾಯುವುದನ್ನು ತಪ್ಪಿಸಿದೆ. ಶಾದಿಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ತೆಗೆದು ಹಾಕುವ ಮೂಲಕ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂಅಹ್ಮದ ಮಾತನಾಡಿ, ಬಿಜೆಪಿ ರಾಮರಾಜ್ಯ ಮಾಡ್ತೇವೆ ಎಂದು ಸುಳ್ಳು ಹೇಳಿ ರಾವಣ ರಾಜ್ಯ ಮಾಡಿದ್ದಾರೆ ಎಂದು ಕಿಡಿಕಾರಿದರು. ಜನರ ಹಾದಿ ತಪ್ಪಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಬಿಜೆಪಿ ಸರ್ಕಾರ ಯಾವ ಘನಕಾರ್ಯ ಮಾಡಿದೆ ಎಂದು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದೆ. 

Tap to resize

Latest Videos

ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕಿಮ್ಮತ್ತಿಲ್ಲ: ಸಚಿವ ಅಶ್ವತ್ಥ ನಾರಾಯಣ

ಅದು ಕ್ಷಮೆ ಕೇಳುವ ಯಾತ್ರೆ ಮಾಡಬೇಕು ಎಂದರು. ಜನರು ನೆಮ್ಮದಿಯ ಬದುಕಿಗಾಗಿ ಕಾಂಗ್ರೆಸ್‌ ಗೆಲ್ಲಿಸಬೇಕು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್‌ ಅಲೆ ಎದ್ದಿದೆ. ಜನರು ಆಶೀರ್ವಾದ ಮಾಡಬೇಕು ಎಂದ ಅವರು, ಈ ಸಲ ಚುನಾವಣೆಯಲ್ಲಿ 150 ಸ್ಥಾನ ಬರುವುದು ಗ್ಯಾರಂಟಿ ಎಂದು ನುಡಿದರು. ಕಾರ್ಯಕ್ರಮದಲ್ಲಿ ಮಾಜಿ ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕ ಎನ್‌.ಎಚ್‌. ಕೋನರೆಡ್ಡಿ, ವಿನೋದ ಅಸೂಟಿ, ಮಾಜಿ ಸಚಿವ ಕೆ.ಎನ್‌. ಗಡ್ಡಿ, ಚಂಬಣ್ಣ ಹಾಳದೋಟರ, ರಾಜಶೇಖರ ಮೆಣಸಿನಕಾಯಿ, ಬಾಪುಗೌಡ ಪಾಟೀಲ, ಶಿವಾನಂದ ಕರಿಗಾರ, ಮಾಜಿ ಸಂಸದ ಐ.ಜಿ. ಸನದಿ, ಅನಿಲಕುಮಾರ ಪಾಟೀಲ, ಶಾಕೀರ್‌ ಸನದಿ, ಬಸವರಾಜ ಗುರಿಕಾರ, ಪ್ರಕಾಶ ರಾಠೋಡ್‌ ಇದ್ದರು.

ಪ್ರಜಾಧ್ವನಿ ಯಾತ್ರೆಗೆ ಭವ್ಯ ಸ್ವಾಗತ ಸಿದ್ದುಗೆ ಚಕ್ಕಡಿ, ಟಗರು ಮರಿ ಉಡುಗೊರೆ: ಕಾಂಗ್ರೆಸ್‌ ಸಾಧನೆಗಳನ್ನು ಬಿಂಬಿಸುವ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರ ಸೋಮವಾರ ಸಂಜೆ ನವಲಗುಂದ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಜನರು ಭವ್ಯ ಸ್ವಾಗತ ನೀಡಿದರಲ್ಲದೇ. ಬೃಹತ್‌ ಹೂಮಾಲೆ ಹಾಕುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬರಮಾಡಿಕೊಂಡರು. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಂಬಳಿ ಹೊದಿಸಿ, ಟಗರು ಮರಿ ಹಾಗೂ ಸಾಗವಾನಿ ಕಟ್ಟಿಗೆಯಿಂದ ತಯಾರಿಸಿದ ಚಕ್ಕಡಿ ಬಂಡಿಯನ್ನು ಉಡುಗೊರೆಯಗಿ ನೀಡಲಾಯಿತು. ಪ್ರಜಾಧ್ವನಿ ಬಸ್‌ನಲ್ಲಿ ಸಿದ್ದರಾಮಯ್ಯ ಜೊತೆ ನವಲಗುಂದ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾದ ವಿನೋದ ಅಸೂಟಿ ಹಾಗೂ ಎನ್‌.ಎಚ್‌. ಕೊನರಡ್ಡಿ ಪ್ರವಾಸ ಮಾಡಿದ್ದು ವಿಶೇಷವಾಗಿತ್ತು.

ಇಲ್ಲಿ ಕುಡಿಸಿಕೊಂಡು ಕರಕೊಂಡು ಬಂದಿದ್ದೀರಿ ಏನು?: ಇದು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪರ ಬೆಂಬಲಿಗರು ಘೋಷಣೆ ಕೂಗಲು ಆರಂಭಿಸುತ್ತಿದ್ದಂತೆ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಹೇಳಿದ ಮಾತು. ಸಿದ್ದರಾಮಯ್ಯ ತಮ್ಮ ಭಾಷಣ ಶುರು ಮಾಡುತ್ತಿದ್ದಂತೆ ಟಿಕೆಟ್‌ ಆಕಾಂಕ್ಷಿಗಳ ಪರ ಘೋಷಣೆಗಳು ಜೋರಾದವು. ನಾಲ್ಕಾರು ಬಾರಿ ಸುಮ್ಮನಿರಿ. ಭಾಷಣ ಮಾಡಲು ಕೊಡಿ ಎಂದೆಲ್ಲ ಸಮಾಧಾನ ಪಡಿಸಲು ಸಿದ್ದರಾಮಯ್ಯ ಯತ್ನಿಸಿದರು. ಆದರೂ ಘೋಷಣೆ ಮಾತ್ರ ಶಾಂತವಾಗಲೇ ಇಲ್ಲ. 

ರೇವಣ್ಣ, ಎಚ್‌​ಡಿ​ಕೆ ನಡುವೆ ಭಿನ್ನಾಭಿಪ್ರಾಯ ಇಲ್ಲ: ಸಿ.ಎಂ.ಇಬ್ರಾಹಿಂ

ಕೊನೆಗೆ ಆಕಾಂಕ್ಷಿಗಳತ್ತ ನೋಡಿದ ಸಿದ್ದರಾಮಯ್ಯ, ನಿಮ್ಮ ಬೆಂಬಲಿಗರೆಲ್ಲರನ್ನು ಕುಡಿಸಿಕೊಂಡು ಕರಕೊಂಡು ಬಂದಿದ್ದರೇನು ಎಂದು ಪ್ರಶ್ನಿಸಿದರು. ಈಗ ಸುಮ್ಮನಿರದಿದ್ದರೆ ನಾನು ಭಾಷಣವನ್ನೇ ಮಾಡುವುದಿಲ್ಲ. ಹೊರಟು ಹೋಗುತ್ತೇನೆ ಎಂದು ಹೇಳಿ ಕೆಲ ಕಾಲ ತಮ್ಮ ಭಾಷಣವನ್ನು ನಿಲ್ಲಿಸಿದರು. ಆಗ ಎಲ್ಲರೂ ಶಾಂತವಾಗಿ ಕುಳಿತರು. ಬಳಿಕ ತಮ್ಮ ಭಾಷಣವನ್ನು ಮುಂದುವರಿಸಿದರು. ಆಗ ನಾನು ಇಲ್ಲಿ ಟಿಕೆಟ್‌ ಹಂಚಿಕೆ ಮಾಡಲು ಬಂದಿಲ್ಲ. ಯಾರಿಗೆ ಟಿಕೆಟ್‌ ಕೊಡಲಿ ಎಲ್ಲರೂ ಸೇರಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವುದೊಂದೇ ಕೆಲಸ ಮಾಡಿ ಎಂದು ನುಡಿದರು.

click me!