ಜನರಲ್ಲಿ ದೇಶಾಭಿಮಾನ ಮೂಡಿಸಲು ಕಾಂಗ್ರೆಸ್ ಪಾದಯಾತ್ರೆ

Published : Aug 23, 2022, 12:45 PM IST
ಜನರಲ್ಲಿ ದೇಶಾಭಿಮಾನ ಮೂಡಿಸಲು ಕಾಂಗ್ರೆಸ್ ಪಾದಯಾತ್ರೆ

ಸಾರಾಂಶ

ಕಾಂಗ್ರೆಸ್‌ ಪಾದಯಾತ್ರೆಗೆ ಶಾಸಕ ಎಚ್‌.ಕೆ. ಪಾಟೀಲ್‌ ಚಾಲನೆ ಜನರಲ್ಲಿ ದೇಶಾಭಿಮಾನ ಮೂಡಿಸುವುದು ಪಾದಯಾತ್ರೆ ಉದ್ದೇಶ

\ಗದಗ (ಆ.23): ಸ್ವಾತಂತ್ರ್ಯ ಅಮೃತ ಮಹೋ​ತ್ಸ​ವದ ಅಂಗ​ವಾಗಿ ಜನ​ರಲ್ಲಿ ದೇಶ​ಭಿ​ಮಾನ, ರಾಷ್ಟ್ರ​ಭಕ್ತಿ ಮೂಡಿಸುವುದು ಕಾಂಗ್ರೆಸ್‌ ​ಪಾ​ದ​ಯಾ​ತ್ರೆಯ ಉದ್ದೇ​ಶ​ವಾಗಿದೆ ಎಂದು ಶಾಸಕ ಎಚ್‌.​ಕೆ. ​ಪಾ​ಟೀಲ ಹೇಳಿದರು. ಅವರು ಸೋಮ​ವಾ​ರ ನಗ​ರ​ದ 24ನೇ ವಾರ್ಡ್‌ನ ಭೀಷ್ಮಕೆರೆ ಬನ್ನಿ​ಮ​ಹಾ​ಕಾಳಿ ದೇವ​ಸ್ಥಾ​ನ​ದಲ್ಲಿ ಶ್ರಾವಣ ಮಾಸ​ದಂಗ​ವಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪಾದ​ಯಾ​ತ್ರೆಗೆ ಚಾಲನೆ ನೀಡಿ, ಮಾತ​ನಾ​ಡಿ​ದರು.

Gadag: ಮಠದ ಹಣವನ್ನೂ ಕಿತ್ತುಕೊಳ್ಳುವ ಇವರನ್ನ ದೇವರೇ ಕಾಪಾಡಬೇಕು: ಹೆಚ್.ಕೆ.ಪಾಟೀಲ್

ಸ್ವಾತಂತ್ರ್ಯಾ ನಂತರ ದೇಶದಲ್ಲಿ ಕಾಂಗ್ರೆಸ್‌ ಸರ್ಕಾರವೇ ಹೆಚ್ಚಿನ ಆಡಳಿತ ನಡೆಸಿದ್ದು, ಪಂ. ಜವಾಹರಲಾಲ… ನೆಹರು, ಲಾಲ… ಬಹದ್ದೂರ ಶಾಸ್ತ್ರಿ, ಇಂದಿರಾಗಾಂಧಿ, ರಾಜೀವಗಾಂಧಿ, ಪಿ.ವಿ. ನರಸಿಂಹರಾವ್‌, ಮನಮೋಹನ್‌ ಸಿಂಗ್‌ ಸೇರಿದಂತೆ ಅನೇಕರು ಪ್ರಧಾನಿಗಳಾಗಿ ಇಡೀ ದೇಶದ 135 ಕೋಟಿ ಜನತೆಗೆ ಹೊಟ್ಟೆತುಂಬ ಊಟ, ವಾಸಿಸುವುದಕ್ಕೆ ಮನೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹರಿಸಿದ ಸಮಗ್ರ ಮಾಹಿತಿಯನ್ನು ಸಹ ಜನರಿಗೆ ನೀಡುತ್ತಾ ಬರಲಾಯಿತು.

8 ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾ​ರ, ನರೇಂದ್ರ ಮೋದಿ ಅವರು ಚುನಾವಣೆ ಪೂರ್ವದ ತಮ್ಮ ಭಾಷಣದಲ್ಲಿ ದೇಶದಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಡೀಸೆಲ…, ಪೆಟ್ರೋಲ… ದರ ಅತ್ಯಂತ ಕಡಿಮೆ ಮಾಡುವುದು, ರೈತರು ಬೆಳೆದ ಬೆಳೆಗಳ ದರವನ್ನು ದ್ವಿಗುಣಗೊಳಿಸುವುದಾಗಿ, ಎಲ್ಲರಿಗೂ ಉಚಿತ ಅಡುಗೆ ಅನಿಲವನ್ನು ನೀಡುವ ಮೂಲಕ ಹೊಗೆರಹಿತ ಭಾರತ ಮಾಡುವ ಭರವಸೆ ನೀಡಿದ್ದರು. ಇಂದು ಅದ್ಯಾವುದೂ ಆಗಲಿಲ್ಲ. ದಿನ ಬಳಕೆ ವಸ್ತು​ಗ​ಳ ಬೆಲೆ ಏರಿ​ಕೆ​ಯಿಂದ ದೇಶದ, ರಾಜ್ಯದ ಜನತೆ ಬೇಸತ್ತು ಹೋಗಿ​ದ್ದು, ಜೀವನ ನಡೆ​ಸು​ವುದು ಕಷ್ಟ​ಕ​ರ​ವಾ​ಗಿ​ದೆ. ರೈತರಿಗೆ ಸರಿಯಾಗಿ ಗೊಬ್ಬರ ದೊರಯುತ್ತಿಲ್ಲ, ತುಂಬಿದ ಬೆಳೆವಿಮೆ ಸರಿಯಾಗಿ ದೊರೆಯುತ್ತಿಲ್ಲ, ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದ​ರು.

ಗ್ರಾಮಗಳ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿ: ಎಚ್‌.​ಕೆ.​ಪಾ​ಟೀ​ಲ್

ಪಾದ​ಯಾ​ತ್ರೆಯೂ ನಗ​ರದ ಬ​ನ್ನಿ​ಮ​ಹಾ​ಕಾಳಿ ದೇವ​ಸ್ಥಾ​ನ​ದಿಂದ ಪ್ರಾರಂಭ​ವಾಗಿ ಶೆಟ್ಟರ ದವಾ​ಖಾನೆ, ಉಡ​ಚಮ್ಮನ ದೇವ​ಸ್ಥಾನ, ದರ್ಗಾ ಮೂಲಕ, ಮಕಾ​ನ​ಗಲ್ಲಿ, ಜಮಾ​ದಾರ ಮನೆ ಲೈನ್‌ಗೆ ಬಂದು ಮುಕ್ತಾ​ಯ​ಗೊಂಡಿತು.ಈ ಸಂದ​ರ್ಭ​ದಲ್ಲಿ ಗದ​ಗ-ಬೆಟ​ಗೇರಿ ಶಹರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗುರಣ್ಣ ಬಳ​ಗಾ​ನೂರ, ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ನಗ​ರ​ಸಭೆ ಸದ​ಸ್ಯ​ರು, ಮುಖಂಡ​ರಾದ ಪ್ರಭು ಬುರ​ಬುರೆ, ಉಮರ್‌ ಫಾರೂಕ್‌ ಹುಬ್ಬಳ್ಳಿ ಸೇರಿ​ದಂತೆ ಪಕ್ಷದ ಕಾರ್ಯ​ಕ​ರ್ತರು, ಅಭಿ​ಮಾ​ನಿ​ಗಳು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!