ಮೊಟ್ಟೆಎಸೆತ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

By Kannadaprabha News  |  First Published Aug 23, 2022, 12:15 PM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆಎಸೆದಿರುವ ಘಟನೆ  ಖಂಡಿಸಿ ಗಂಗಾವತಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು


ಗಂಗಾವತಿ (ಆ.23) : ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆಎಸೆದಿರುವುದನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಹಸೀಲ್ದಾರರಿಗೆ ಮನವಿ ಪತ್ರ ಅರ್ಪಿಸಿದ ಕಾಂಗ್ರೆಸ್‌ ನಗರ ಬ್ಲಾಕ್‌ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಶ್ಯಾಮೀದ್‌ ಮನಿಯಾರ್‌ ಆಕ್ರೋಶ ವ್ಯಕ್ತಪಡಿಸಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಎಲ್ಲ ಲಕ್ಷಣಗಳು ಬಿಜೆಪಿ ಮುಖಂಡರಿಗೆ ಮನವರಿಕೆಯಾಗಿದೆ. ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವವು ಬಿಜೆಪಿ ಸರ್ಕಾರಕ್ಕೆ ಭಯ ಸೃಷ್ಟಿಯಾಗಿದ್ದರಿಂದ ತಮ್ಮ ಕಾರ್ಯಕರ್ತರಿಂದ ಮೊಟ್ಟೆಎಸೆಯುವಂತಹ ಕೆಲಸ ಮಾಡಿಸಿದೆ. ಇದಕ್ಕೆ ಪ್ರತಿ ಕ್ಷೇತ್ರದಲ್ಲೂ ಕಾಂಗ್ರೆಸ್‌ ಕಾರ್ಯಕರ್ತರು ತಕ್ಕ ಉತ್ತರ ನೀಡುತ್ತಾರೆ ಎಂದರು.

ಮಹಾತ್ಮ ಗಾಂಧಿಯವರನ್ನು ಕೊಂದವರು ನನ್ನನ್ನ ಬಿಡ್ತಾರಾ? ಸಿದ್ದರಾಮಯ್ಯ ಆತಂಕ!

Tap to resize

Latest Videos

undefined

ಶಾಸನಬದ್ಧವಾಗಿ ಅಧಿಕಾರ ಹೊಂದಿರುವ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆಎಸೆದ ಪ್ರಕರಣ ಬಿಜೆಪಿಯ ಹತಾಶೆಯ ಪ್ರತೀಕವಾಗಿದೆ. ಸಚಿವ ಮಾಧುಸ್ವಾಮಿ ಅವರು ಹೇಳಿಕೆಯಂತೆ ರಾಜ್ಯದಲ್ಲಿ ಸರ್ಕಾರ ದಿನ ಕಳೆಯಲು ಬಿಜೆಪಿ ಮುಖಂಡರು ಮ್ಯಾನೇಜ್‌ ಮಾಡುತ್ತಿದ್ದಾರೆ. ಭದ್ರತಾ ಲೋಪವಾಗಿರುವುದನ್ನು ಒಪ್ಪಿಕೊಂಡು ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಸಿದ್ದರಾಮಯ್ಯ ಅವರ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಸರ್ಕಾರವನ್ನು ರಾಜ್ಯಪಾಲರು ತಕ್ಷಣ ವಜಾಗೊಳಿಸಬೇಕು ಎಂದು ಮನಿಯಾರ್‌ ಅಗ್ರಹಿಸಿದರು.

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ: 10 ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಗ್ರಾಮೀಣ ಬ್ಲಾಕ್‌ ಅಧ್ಯಕ್ಷ ಫಕೀರಪ್ಪ ಎಮ್ಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಬ್ಬಾರ, ನಗರಸಭೆ ಸದಸ್ಯರಾದ ಮನೋಹರಸ್ವಾಮಿ ಹಿರೇಮಠ, ಮುಷ್ತಾಕ್‌ ಅಲಿ, ಮೌಲಾಸಾಬ…, ಎಫ್‌. ರಾಘವೇಂದ್ರ, ಹುಲಿಗೆಮ್ಮ ಕಿರಿಕಿರಿ, ಸೋಮನಾಥ್‌ ಭಂಡಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮರೇಶ ಗೋನಾಳ, ಕಾಂಗ್ರೆಸ್‌ ಮುಖಂಡರಾದ ಶರಣೇಗೌಡ ಬಸಾಪಟ್ಟಣ, ವಿಶ್ವನಾಥ್‌ ಮಾಲಿಪಾಟೀಲ…, ಹನುಮಂತಪ್ಪ ಅರಸೀನಕೆರೆ, ಜಬೀರ, ಜುಬೈರ್‌, ರಮೇಶ ಹಾದಿಮನಿ, ಫಾರೂಕ್‌, ರಾಜ್‌ ಮಹಮದ್‌, ಸೋಮನಾಥ್‌ ಕಂಪ್ಲಿ, ಯಮನಪ್ಪ ನವಲಿ, ಬೆಟ್ಟಪ್ಪ ಬೆಣಕಲ…, ಹುಸೇನ್‌ ಪೀರಾ, ನೀಲಕಂಠಪ್ಪ, ಶಿವರಾಜ್‌ ಹೊಸಳ್ಳಿ, ಆಸಿಫ್‌ ಅಹ್ಮದ್‌, ಸನ್ನಿಕ್‌, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಣ್ಣ ಬಳ್ಳಾರಿ, ಬಸವರಾಜ ಜೇಕಿನ್‌, ನಬಿಸಾಬ…, ಹುಲುಗಪ್ಪ ಮುಕ್ಕುಂಪಿ, ಸಲ್ಮಾನ್‌ ಬಿಚ್ಚುಗುತ್ತಿ, ಸುರೇಶ್‌ ಮತ್ತಿತರು ಇದ್ದರು

click me!