ಟಿಕೆಟ್‌ ವಿಚಾರ ಯಾರ ಕಿಚನ್‌ನಲ್ಲೂ ನಿರ್ಧಾರ ಆಗಲ್ಲ: ಸಿ.ಟಿ.ರವಿಗೆ ವಿಜಯೇಂದ್ರ ತಿರುಗೇಟು

By Kannadaprabha News  |  First Published Mar 15, 2023, 7:02 AM IST

ರಾಜಕಾರಣದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ. ಸಿ.ಟಿ.ರವಿ ಅವರು ಹಿರಿಯರು. ಯಡಿಯೂರಪ್ಪ ಅವರು ಎಷ್ಟು ಹಿರಿಯರು, ಬಿಜೆಪಿ ಕಟ್ಟಿದ್ದು ಅವರು ಎಂಬ ಕುರಿತು ಸಿ.ಟಿ.ರವಿ ಅವರಿಗೂ ಗೊತ್ತಿದೆ. ಹೀಗಾಗಿ ನಾನು ಆ ರೀತಿಯ ಹೇಳಿಕೆಗೆ ಉತ್ತರ ನೀಡಲ್ಲ ಎಂದ ವಿಜಯೇಂದ್ರ. 


ಕೊಪ್ಪಳ(ಮಾ.15):  ಬಿಜೆಪಿ ಟಿಕೆಟ್‌ ನಿರ್ಧಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಿಚನ್‌ನಲ್ಲೂ ಆಗಲ್ಲ, ಮತ್ತೊಬ್ಬರ ಕಿಚನ್‌ನಲ್ಲೂ ಆಗಲ್ಲ ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಮೂಲಕ ಪಕ್ಷದ ಟಿಕೆಟ್‌ ನಿರ್ಧಾರ ಯಡಿಯೂರಪ್ಪ ಅವರ ಕಿಚನ್‌ನಲ್ಲಿ ಆಗಲ್ಲ, ಪಕ್ಷದ ಚುನಾವಣಾ ಸಮಿತಿ ಹಾಗೂ ಹೈಕಮಾಂಡ್‌ ನಿರ್ಧರಿಸುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ರಾಜಕಾರಣದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾದಾಗ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ. ಸಿ.ಟಿ.ರವಿ ಅವರು ಹಿರಿಯರು. ಯಡಿಯೂರಪ್ಪ ಅವರು ಎಷ್ಟು ಹಿರಿಯರು, ಬಿಜೆಪಿ ಕಟ್ಟಿದ್ದು ಅವರು ಎಂಬ ಕುರಿತು ಸಿ.ಟಿ.ರವಿ ಅವರಿಗೂ ಗೊತ್ತಿದೆ. ಹೀಗಾಗಿ ನಾನು ಆ ರೀತಿಯ ಹೇಳಿಕೆಗೆ ಉತ್ತರ ನೀಡಲ್ಲ ಎಂದರು.

Tap to resize

Latest Videos

undefined

ಸಿಟಿ ರವಿ ಬೆಂಬಲಿಗರಿಗೆ ಮತದಾರರ ತರಾಟೆ: ನಮ್ಮೂರು ಅಭಿವೃದ್ಧಿಗೆ 15 ವರ್ಷ ಸಾಕಾಗಿಲ್ವಾ.?

ಮುಂದಿನ ದಿನಗಳಲ್ಲಿ ಪಕ್ಷ ಎಲ್ಲವನ್ನೂ ನಿರ್ಧರಿಸುತ್ತದೆ. ಪಕ್ಷ ಏನು ಜವಾಬ್ದಾರಿ ನೀಡಿದೆ ಅದನ್ನು ಮಾತ್ರ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ, ಅರುಣ್‌ ಸೋಮಣ್ಣ ಅವರ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಆ ಹೇಳಿಕೆಯನ್ನು ನಾನು ಕೇಳಿಲ್ಲ. ಹಾಗಾಗಿ ನಾನು ಆ ಕುರಿತು ಉತ್ತರ ನೀಡಲ್ಲ. ಪಕ್ಷ ಎಲ್ಲಿ ಸ್ಪರ್ಧೆ ಮಾಡು ಅಂತ ಹೇಳುತ್ತದೆಯೋ ಅಲ್ಲಿ ಸ್ಪರ್ಧಿಸುತ್ತೇನೆ. ಬೇಡ ಅಂದರೆ ಸ್ಪರ್ಧಿಸುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.

click me!