ಶೆಟ್ಟರ್, ಬೊಮ್ಮಾಯಿ ಕ್ಷೇತ್ರಕ್ಕೆ ಟಿಕೆಟ್‌ ಘೋಷಿಸದ ಕಾಂಗ್ರೆಸ್‌..!

By Kannadaprabha News  |  First Published Apr 16, 2023, 6:00 AM IST

ಇನ್ನು ಮೂರನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು, ‘ಬಿಜೆಪಿ ಹಿರಿಯ ನಾಯಕರನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ. ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ಗೆ ಬಂದರೆ ಸ್ವಾಗತ’ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.


ಬೆಂಗಳೂರು(ಏ.16): ರಾಜ್ಯ ಕಾಂಗ್ರೆಸ್‌ ಪಕ್ಷವು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಾದ ಶಿಗ್ಗಾಂವ್‌ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರ ಕ್ಷೇತ್ರವಾದ ಹುಬ್ಬಳ್ಳಿ-ಧಾರವಾಡ ಕೇಂದ್ರ ಸೇರಿದಂತೆ ಹದಿನೈದು ಕ್ಷೇತ್ರಗಳ ಟಿಕೆಟ್‌ನ್ನು ಇನ್ನೂ ಅಂತಿಮಗೊಳಿಸಿಲ್ಲ.

ಬಿಜೆಪಿ ಹೈಕಮಾಂಡ್‌ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡಲು ಸತಾಯಿಸುತ್ತಿರುವುದು ಹಾಗೂ ಶೆಟ್ಟರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ತನ್ನ ಮೂರನೇ ಪಟ್ಟಿಯಲ್ಲೂ ಅಭ್ಯರ್ಥಿಯನ್ನು ಘೋಷಿಸದಿರುವುದು ತೀವ್ರ ಕುತೂಹಲ ಮೂಡಿಸಿದೆ.

Tap to resize

Latest Videos

ರಘು ಆಚಾರ್‌, ಮಾಲಕರಡ್ಡಿ ಸೇರಿ 4 ಮಂದಿಗೆ ಜೆಡಿಎಸ್‌ ಟಿಕೆಟ್‌

ಇನ್ನು ಮೂರನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು, ‘ಬಿಜೆಪಿ ಹಿರಿಯ ನಾಯಕರನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ. ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ಗೆ ಬಂದರೆ ಸ್ವಾಗತ’ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್‌ ಈವರೆಗೆ ಅಭ್ಯರ್ಥಿ ಘೋಷಿಸಿಲ್ಲ. ಹೀಗಾಗಿ ಬಸವರಾಜ ಬೊಮ್ಮಾಯಿ ವಿರುದ್ಧ ಯಾರನ್ನು ಕಣಕ್ಕಳಿಸುತ್ತಾರೆ ಎಂಬುದೂ ಚರ್ಚಾ ವಿಷಯವಾಗಿ ಬದಲಾಗಿದೆ.

ಸಿದ್ದುಗೆ ಟಿಕೆಟ್‌ ನೀಡದ್ದಕ್ಕೆ ರಮೇಶ್‌ಕುಮಾರ್‌ಗೆ ಸಿಟ್ಟಿಲ್ಲ: ರಣದೀಪ್‌ ಸಿಂಗ್‌ ಸುರ್ಜೇವಾಲಾ

ಪುಲಿಕೇಶಿನಗರ ಟಿಕೆಟ್‌ ಅಂತಿಮವಾಗಿಲ್ಲ:

ಇನ್ನು ಪುಲಿಕೇಶಿನಗರ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್‌ ನೀಡಲು ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಪಟ್ಟಿಯಲ್ಲೂ ಟಿಕೆಟ್‌ ಘೋಷಣೆ ಮಾಡಿಲ್ಲ. ಇದಲ್ಲದೆ ಹಾಲಿ ಶಾಸಕರುಳ್ಳ ಹರಿಹರ, ಶಿಡ್ಲಘಟ್ಟ, ಲಿಂಗಸಗೂರು ಕ್ಷೇತ್ರಗಳಿಗೂ ಟಿಕೆಟ್‌ ಅಂತಿಮಗೊಳಿಸಿಲ್ಲ. ಅರವಿಂದ ಬೆಲ್ಲದ್‌ ವಿರುದ್ಧದ ಹುಬ್ಬಳ್ಳಿ-ಧಾರವಾಡ ಪಶ್ಚಿಮದ ಅಭ್ಯರ್ಥಿ, ರಾಯಚೂರು, ಮುಳಬಾಗಿಲು, ಚಿಕ್ಕಮಗಳೂರು, ಕೆ.ಆರ್‌. ಪುರ, ಸಿ.ವಿ. ರಾಮನ್‌ನಗರ, ಶ್ರವಣಬೆಳಗೊಳ, ಅರಕಲಗೂಡು, ಮಂಗಳೂರು ನಗರ- ಉತ್ತರ ಕ್ಷೇತ್ರಗಳ ಟಿಕೆಟ್‌ನ್ನೂ ಕಾಯ್ದಿರಿಸಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!