ಸಿಟಿ ರವಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಪ್ರಾಸ್ಟಿಟ್ಯೂಟ್ ಎಂದು ಹೇಳಿದ್ದಕ್ಕೆ ನಾನೇ ಸಾಕ್ಷಿ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಸಿಟಿ ರವಿ ಬಳಸಿದ ಪದಕ್ಕೆ ತಾವು ಗಾಬರಿಗೊಂಡಿದ್ದಾಗಿ ತಿಳಿಸಿದ ಅವರು, ಬಿಜೆಪಿ ನಾಯಕರು ಸಿಟಿ ರವಿ ಪರ ನಿಂತಿದ್ದು ಮಾನ ಮರ್ಯಾದೆ ಇಲ್ಲದಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.
ಮೈಸೂರು(ಡಿ.23): ಬಿಜೆಪಿಯವರಿಗೆ ಮಾನ-ಮಾರ್ಯಾದೆ ಇಲ್ಲ. ಸಿಟಿ ರವಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಪ್ರಾಸ್ಟಿಟ್ಯೂಟ್ ಎಂದಿರೋದು ಸತ್ಯ. ನಾನೇ ಆ ಪದವನ್ನು ಕೇಳಿಸಿಕೊಂಡು ಒಂದು ಕ್ಷಣ ಗಾಬರಿಯಾಗಿಬಿಟ್ಟೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.
ಸಿಟಿ ರವಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಟಿ ರವಿ ಬಳಸಿದ್ದು ಫ್ರಸ್ಟೇರೇಟ್ ಎಂಬ ಪದ ಅಲ್ಲ. ಅವರು ಬಳಸಿದ್ದು ಪ್ರಾಸ್ಟಿಟೂಟ್ ಅದಕ್ಕೆ ನಾನೇ ಸಾಕ್ಷಿ. ಸಿಟಿ ರವಿ ಆಡಿದ ಮಾತಿಗೆ ನಾನು ಗಾಬರಿಯಾದೆ. ಏನು ಇಂಥ ಪದಗಳನ್ನ ಬಳಸುತ್ತಿದ್ದಾರಲ್ಲ ಅಂದುಕೊಂಡೆ. ತಕ್ಷಣ ನಾನು ಲಕ್ಷ್ಮಿ ಹೆಬ್ಬಾಳ್ಕರ್ ಬಳಿಗೂ ಹೋದೆ. ಆಗ ಅವರು ಕೂಡ ಸಿಟಿ ರವಿ ಬಳಸಿದ ಪದವನ್ನು ನನಗೆ ತಿಳಿಸಿದರು. ಆದರೆ ಸಿಟಿ ರವಿ ಆ ಪದವನ್ನ ಬಳಸಿಲ್ಲ ಎಂದು ಹೇಳುತ್ತಿದ್ದಾರೆ. ಈ ಸಿಂಪಥಿ ಗಿಟ್ಟಿಸಿಕೊಳ್ಳಲು ಸಿಟಿ ರವಿ ಡ್ರಾಮಾ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಸ್ವಲ್ಪನಾದರೂ ಮಾನ-ಮರ್ಯಾದೆ ಇದೆಯಾ? ಇದ್ದಿದ್ದರೆ ಸಿಟಿ ರವಿ ಪರವಾಗಿ ನಿಲ್ಲುತ್ತಿರಲಿಲ್ಲ. ಎಲ್ಲ ಬಿಜೆಪಿ ನಾಯಕರು ಸಿಟಿ ರವಿ ಪರವಾಗಿ ನಿಂತಿದ್ದಾರೆಂದರೆ ಇವರಿಗೆ ಮಾನ ಮರ್ಯಾದೆನೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
undefined
ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಿಟಿ ರವಿ ಆಶ್ಲೀಲ ಪದ ಬಳಕೆ ಮಾಡಿದ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ: ಬಸವರಾಜ ಹೊರಟ್ಟಿ
ಇನ್ನು ಸಿಟಿ ರವಿಯನ್ನು ಬಂಧಿಸಿ ಪೊಲೀಸರು ಎನ್‌ಕೌಂಟರ್ ಮಾಡಲು ಯತ್ನಿಸಿದರು ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಪೊಲೀಸರು ಎನ್‌ಕೌಂಟರ್ ಮಾಡುವ ಆರೋಪವೆಲ್ಲ ಶುದ್ಧ ಡ್ರಾಮಾ. ಈ ವಿಚಾರದಲ್ಲಿ ಬಿಜೆಪಿಯವರು ನೀಡುತ್ತಿರುವ ಹೇಳಿಕೆಗಳೆಲ್ಲ ಬರೀ ನಾಟಕ ಎಂದು ಕಿಡಿಕಾರಿದು.