ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರೋದು ಕಾನೂನು ಬಾಹಿರ ಕೇಂದ್ರ ಹಾಗೂ ಜೆಡಿಎಸ್ ಒತ್ತಡಕ್ಕೆ ಮಣಿದು ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು (ಆ.19): ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರೋದು ಕಾನೂನು ಬಾಹಿರ ಕೇಂದ್ರ ಹಾಗೂ ಜೆಡಿಎಸ್ ಒತ್ತಡಕ್ಕೆ ಮಣಿದು ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಇಂದು ಏಷಿಯಾನೆಟ್ ಸುವರ್ಣ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ನಿರ್ಧಾರವನ್ನು ನಾನು ವಿರೋಧಿಸುತ್ತೇನೆ. ಆರೋಪದಲ್ಲಿ ಹುರುಳಿದ್ರೆ, ನ್ಯಾಯಮಾರ್ಗದಲ್ಲಿ ಆರೋಪ ಮಾಡಿದ್ರೆ ರಾಜೀನಾಮೆ ಕೊಡಬಹುದಿತ್ತು. ಆದರೆ ರಾಜ್ಯಪಾಲರ ನಿರ್ಧಾರದ ಹಿಂದೆ ಬಿಜೆಪಿ ಜೆಡಿಎಸ್ ಷಡ್ಯಂತವಿದೆ. ಹೀಗಾಗಿ ನಾವು ಹೋರಾಟ ಮಾಡ್ತಿದ್ದೇವೆ. ಇಂದು ನಾವು ವಿರೋಧಿಸಿದ್ರೆ ಮುಂದೆ ಬರುವ ಸಿಎಂಗೂ ಇದೇ ಆಗುತ್ತೆ ಅದಕ್ಕಾಗಿ ಸಂವಿಧಾನ ಉಳಿಸಲು ಹೋರಾಟ ಮಾಡುತ್ತಿದ್ದೇವೆ ಎಂದರು.
undefined
ದೆಹಲಿ ಹೈಕಮಾಂಡ್‌ನಿಂದ ನಮ್ಮ ತಂದೆಗೆ ಕ್ಲೀನ್‌ಚಿಟ್ ಸಿಕ್ಕಿದೆ: ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ
ಬಿಎಸ್ ಯಡಿಯೂರಪ್ಪ ಪ್ರಕರಣಕ್ಕೂ, ನಮ್ಮ ತಂದೆಯವರ ಕೇಸ್‌ಗೆ ಹೊಂದಾಣಿಕೆಯಾಗಲ್ಲ. ಎರಡು ಪ್ರಕರಣಗಳು ಬೇರೆ ಬೇರೆ. ಆಗ ಲೋಕಾಯುಕ್ತ ತನಿಖೆ ವರದಿ ಮೇಲೆ ದೂರು ನೀಡಲಾಗಿತ್ತು. ಆದರೆ ಇಲ್ಲಿ ಯಾವ ತನಿಖೆ ಆಗಿದೆ? ಇಲ್ಲಿ ದೂರು ಕೊಟ್ಟಿರುವವರು ಖಾಸಗಿ ವ್ಯಕ್ತಿಗಳೇ ಹೊರತು ತನಿಖಾ ಸಂಸ್ಥೆಗಳಲ್ಲ. ದೂರು ಕೊಟ್ಟವರ ಮೇಲೆಯೂ ಸಾಕಷ್ಟು ಗುರುತರ ಆರೋಪಗಳಿವೆ. ಅಂಥವರ ಆರೋಪದ ಮೇಲೆ ಪ್ರಾಸಿಕ್ಯೂಷನ್ ಅನುಮತಿ ಕೊಡುತ್ತ ಹೋದ್ರೆ ಮುಂದೆ ಸಿಎಂ ಆಗಿ ಯಾರೂ ಕೆಲಸ ಮಾಡಲು ಆಗೊಲ್ಲ ಎಂದರು.
ಇದೇ ರೀತಿ ಮುಂದುವರಿದರೆ ನಾಳೆ ದಾರಿಯಲ್ಲಿ ಹೋಗುವವರು ದೂರು ಕೊಡ್ತಾರೆ. ಮುಡಾ ವಿಚಾರದಲ್ಲಿ ನಮ್ಮ ತಂದೆಯವರ ಪ್ರಭಾವ ಬಳಸಲು ಸಾಕ್ಷಿ ಎಲ್ಲಿದೆ? ಇದೊಂದು ಸಂಪೂರ್ಣ ಅಸಂವಿಧಾನಕವಾಗಿದೆ. ಚುನಾವಣೆಯಲ್ಲಿ ಸೋಲಿಸಲು ಆಗೊಲ್ಲ ಅಂತಾ ಅಡ್ಡದಾರಿಯಲ್ಲಿ ಸರ್ಕಾರ ಬಿಳಿಸಲು ನೋಡ್ತಿದ್ದಾರೆ. ಹೀಗೆ ಆದ್ರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ.
ಸಿಎಂ ರಾಜೀನಾಮೆ ಕೊಟ್ಟರೆ ಖಂಡಿತ ನಾವು ಇದರ ಬಗ್ಗೆ ಮಾತನಾಡೊಕೆ ಆಗಲ್ಲ. ಮುಡಾ ಹಗರಣ ಸಂಬಂಧ ನಮ್ಮ ತಾಯಿ ಯಾಕೆ ಮಾತನಾಡಬೇಕು? ಅವರೇನು ಅಧಿಕಾರದಲ್ಲಿದ್ದಾರೆ? ಅವರೇನು ಸಾರ್ವಜನಿಕ ಜೀವನದಲ್ಲಿ ಇದ್ದಾರಾ? ಅವರು ಯಾರಿಗಾದರೂ ಯಾಕೆ ಉತ್ತರ ಕೊಡಬೇಕು? ಏನಾದ್ರು ಇದ್ರೆ ಕೋರ್ಟ್ ನಲ್ಲಿ ದೂರು ಕೊಡ್ಲಿ, ತನಿಖೆ ಎದುರಿಸುತ್ತಾರೆ. ಪ್ರಭಾವ ಬೀರಲು ಸಿದ್ದರಾಮಯ್ಯ ಅಧಿಕಾರದಲ್ಲೇ ಇರಲಿಲ್ಲ. ಸೈಟ್ ಕೊಟ್ಟಿರೋದು 2021ರಲ್ಲಿ, ನಾನು ಶಾಸಕನಾಗಿದ್ರೂ, ಪ್ರಭಾವ ಬೀರಲು ಸಾಧ್ಯವಿಲ್ಲ. ಬಿಜೆಪಿ ಕಾಲದಲ್ಲಿ ಅವರು ಕೊಟ್ಟು, ಈಗ ಆರೋಪ ಮಾಡಿದ್ರೆ ಹೇಗೆ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ವಿಪಕ್ಷಗಳು ಇಂತಹ ಷಡ್ಯಂತ್ರ ಮಾಡಿದ್ದಾರೆ. ಇದಕ್ಕೆಲ್ಲ ನಾವು ಹೆದರೊಲ್ಲ. ಕಾನೂನು ಹೋರಾಟ ಮಾಡುತ್ತೇವೆ. ಸುಮ್ಮನೆ ಸುಳ್ಳು ಆರೋಪ ಮಾಡಿದ್ರೆ ಒಪ್ಪಿಕೊಳ್ಳೊಕೆ ಆಗುತ್ತಾ. ನಾವು ತಲೆ ಬಾಗಲು ಆಗಲ್ಲ. 46 ವರ್ಷದಲ್ಲಿ ಎರಡು ಬಾರಿ ಡೆಪ್ಯುಟಿ ಸಿಎಂ ಆಗಿದ್ದಾರೆ, ಎಷ್ಟು ಬಾರಿ ಫೈನಾನ್ಸ್ ಮಿನಿಸ್ಟರ್ ಆಗಿದ್ದಾರೆ. ಎರಡನೇ ಬಾರಿ ಸಿಎಂ ಆಗಿದ್ದಾರೆ. ನಮ್ಮ ತಂದೆ ಭ್ರಷ್ಟಾಚಾರ ಮಾಡಿದ್ರೆ ಇಷ್ಟು ವರ್ಷದಲ್ಲಿ ಬೇಕಾದಷ್ಟು ಮಾಡಬಹುದಿತ್ತು. ಆರೋಪ ಮಾಡ್ತಿರೋ ಬಿಜೆಪಿ, ಜೆಡಿಎಸ್ ನಾಯಕರ ಆಸ್ತಿ ನೋಡಿ. ಅವರು ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ. ಭ್ರಷ್ಟಾಚಾರ ಮಾಡಿದ್ರೆ ಅವರ ಲೆವೆಲ್‌ನಲ್ಲಿ ಇರುತ್ತಿದ್ರು. ಪ್ರಾಮಾಣಿಕರಾಗಿರೋದ್ರಿಂದ ಜನ ಬೆಂಬಲ ಇದೆ. 46 ವರ್ಷದಲ್ಲಿ ಯಾರೂ ಈ ರೀತಿ ಆರೋಪ ಮಾಡ್ತಿರಲಿಲ್ಲ. ಅವರಿಗೆ ಸ್ವಲ್ಪವಾದ್ರೂ ನೈತಿಕತೆ ಇರ್ತಿತ್ತು.
ಸಿಎಂ ಸಿದ್ದರಾಮಯ್ಯರನ್ನ ಕೆಳಗಿಳಿಸೋದು ಕನಸಿನ ಮಾತು: ವಿಜಯೇಂದ್ರಗೆ ಡಾ ಯತೀಂದ್ರ ತಿರುಗೇಟು
ಆದರೆ ಈಗ ಬಿಜೆಪಿ ಜೆಡಿಎಸ್ಗೆ ಅದ್ಯಾವುದೂ ಇಲ್ಲ. ಸುಳ್ಳು ಆರೋಪ ಮಾಡಿ, ತೇಜೋವಧೆ ಮಾಡಿ, ನೈತಿಕತೆಯಿಂದ ಅಧಿಕಾರಕ್ಕೆ ಬರಬೇಕು ಅಂತಿದ್ದಾರೆ. ಅವರ ನೀಚ ರಾಜಕಾರಣ ಹಿಂದೆ ಯಾರೂ ನೋಡಿಲ್ವ?. ಕುಟುಂಬದಲ್ಲಿ ಈ ವಿಚಾರ ಒಟ್ಟಿಗೆ ಕೂತು ಮಾತಾಡಿದ್ದೇವೆ. ತಪ್ಪು ಮಾಡಿರದ ಕಾರಣ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ. ಸೈಟ್ ವಾಪಸ್ ಕೊಟ್ರೆ ನಾವು ತಪ್ಪು ಮಾಡಿದ್ದೇವೆ ಅಂತ ಒಪ್ಪಿಕೊಂಡಂತಾಗುತ್ತೆ. ಸಾರ್ವಜನಿಕ ವಿಚಾರದಲ್ಲಿ ಮನಸ್ಸು ಮಾಡಿದ್ರೂ, ಈಗ ನ್ಯಾಯಾಂಗ ತನಿಖೆಯಲ್ಲಿ ಇದೆ. ಈಗಿರುವಾಗ ಆ ಸೈಟ್‌ಗಳು ನಮ್ಮ ಬಳಿ ಇಲ್ಲ. ಅದನ್ನು ನಾವು ಈಗ ಮಾರೊಕಾದ್ರೂ, ಮನೆ ಕಟ್ಟೋಕಾದ್ರೂ ಆಗಲ್ಲ. ಕಾನೂನು ಹೋರಾಟದ ಬಗ್ಗೆ ದೊಡ್ಡ ದೊಡ್ಟ ಕಾನೂನು ತಜ್ಞರು ಸಲಹೆ ಕೊಟ್ಟಿದ್ದಾರೆ. ಕೋರ್ಟ್ ಮೇಲೆ ನಂಬಿಕೆ ಇದೆ. ಆದರೆ ಈ ಹಿಂದಿನ ಪ್ರಕರಣಗಳಲ್ಲಿ ಕೋರ್ಟ್ ಮೇಲೆ ಕೇಂದ್ರ ಪ್ರಭಾವ ಬೀರಿರೋದನ್ನ ನೋಡಿದ್ದೇವೆ. ಅಲ್ಲೂ ನ್ಯಾಯ ಸಿಗದಿದ್ರೆ ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಚಿಂತನೆ ಮಾಡಿದ್ದೇವೆ ಎಂದರು.