ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುವ ಬದಲು, ಸಿದ್ದರಾಮಯ್ಯ ಕಾನೂನುಬದ್ಧವಾಗಿ ಹೋರಾಟ ಮಾಡಬೇಕು ಮತ್ತು ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಒತ್ತಾಯಿಸಿದ್ದಾರೆ.
ನವದೆಹಲಿ (ಆ.19): ರಾಜ್ಯದಲ್ಲಿ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿದೆ. ಆದರೆ ತಪ್ಪು ಮಾಡಿದವರೇ ಪ್ರತಿಭಟನೆ ಮಾಡುವುದು ಖಂಡನೀಯ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿಕಾರಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಬಿಜೆಪಿಯವರು ಪ್ರತಿಭಟನೆ ಮಾಡೋದ್ರಲ್ಲಿ ಅರ್ಥ ಇದೆ. ಆದರೆ, ಕಾಂಗ್ರೆಸ್ ನವರೇ ಪ್ರತಿಭಟನೆ ಮಾಡುತ್ತಿದ್ದಾರೆ. ಅವರೇ ತಪ್ಪು ಮಾಡಿ ಅವರೇ ಪ್ರತಿಭಟನೆ ಮಾಡೋದು ಖಂಡನೀಯ. ರಾಜ್ಯಪಾಲರು ರಾಜ್ಯದ ಮುಖ್ಯಸ್ಥರು. ನಮ್ಮ ರಾಜ್ಯಪಾಲರು ಈವರೆಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ತೆರೆದ ಪುಸ್ತಕದಂತೆ ಕೆಲಸ ಮಾಡಿದವರು. ತನಿಖೆ ಆದೇಶ ಮಾಡಿದ್ದೇ ತಪ್ಪು ಎಂದು ಹೇಳುವ ಯಾವುದೇ ನೈತಿಕತೆ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದು ಹೇಳಿದರು.
ದಿನ ಬೆಳಗ್ಗೆ 6 ಗಂಟೆಗೆ ಹಿಂದಿ ಕ್ಲಾಸ್‌ಗೆ ಹೋಗ್ತಿನಿ, 6 ತಿಂಗಳಲ್ಲಿ ಮಾತಾಡ್ತೀನಿ: ಸಂಸದ ಸೋಮಣ್ಣ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ದ ಅಂದಿನ ರಾಜ್ಯಪಾಲರು ಒಂದು ಗಂಟೆಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದರು. ನೈತಿಕತೆ ಬಹಳ ದೊಡ್ಡದು, ಅಧಿಕಾರ ಮುಖ್ಯವಲ್ಲ. ಆಡಳಿತ ನಡೆಸೋರು ರಾಜ್ಯಪಾಲರ ವಿರುದ್ದ ರಸ್ತೆಗೆ ಬಂದು ಪ್ರತಿಭಟನೆ ಮಾಡೋದು ಸರಿ ಅಲ್ಲ. ಸಿದ್ದರಾಮಯ್ಯ ಅವರನ್ನು ನಾನು ರಾಜೀನಾಮೆ ಕೊಡಿ ಅನ್ನಲ್ಲ, ಆದರೆ ಕಾನೂನು ಬದ್ದವಾಗಿ ಹೋರಾಟ ಮಾಡಿ ಎಂದು ಆಗ್ರಹಿಸುತ್ತೇನೆ. ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ನಿಮ್ಮ ಮೇಲಿರುವ ಆರೋಪದ ವಿರುದ್ಧ ಹೋರಾಟ ಮಾಡಲು ನ್ಯಾಯಾಲಯಕ್ಕೆ ಹೋಗಿ. ಅಲ್ಲಿ ತೀರ್ಮಾನ ಆದಮೇಲೆ ನೀವೇ ಮುಖ್ಯಮಂತ್ರಿಯಾಗಿ. ಕಾಂಗ್ರೆಸ್‌ನವರೂ ನಡೆದುಕೊಳ್ಳುವ ರೀತಿ ಅಸಹ್ಯವಾಗಿದೆ. ನೀವು ತಪ್ಪು ಮಾಡಿದ್ದರಾ ಅನ್ನೋದು ನಿಮ್ಮ ಗಲಾಟೆಯಿಂದ ಗೊತ್ತಾಗುತ್ತದೆ. ಪ್ರತಿಭಟನೆ ಬಿಡಿ, ಕಾನೂನು ಹೋರಾಟ ಮಾಡಿ ಎಂದು ಸಚಿವ ಸೋಮಣ್ಣ ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧದ ಹೋರಾಟಕ್ಕೆ ಜಾತಿ ಲೇಪನ ಬೇಡ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮಾತನಾಡಿ, ಸಿಎಂ ಸಿದ್ದರಾಮಯ್ಯ ವಕೀಲರು. ರಾಜ್ಯಪಾಲರಿಗೆ ದಾಖಲೆ ಸಿಕ್ಕಿದರೆ ನೋಟೀಸ್ ಕೂಡ ಕೊಡುವ ಅಗತ್ಯವಿಲ್ಲ. ತಕ್ಷಣ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಬಹುದು. ಆದರೂ ರಾಜ್ಯಪಾಲರು ಸಿದ್ದರಾಮಯ್ಯರಿಗೆ ಅವಕಾಶ ನೀಡಿದ್ದರು. ಆದರೆ, ಸರ್ಕಾರ ಕ್ಯಾಬಿನೆಟ್‌ನಲ್ಲಿ ಖಂಡನಾ ನಿರ್ಯಣ ಮಾಡಿದರು. ರಾಜ್ಯಪಾಲರು ಅತ್ಯಂತ ಕಾನೂಮಾತ್ಮಕವಾಗಿ ನಡೆದುಕೊಂಡಿದ್ದಾರೆ. ಸಿಎಂ ತನ್ನ ಕೈಕೆಳಗಿನವರಿಂದ ತನಿಖೆ ಮಾಡಿಸಲು ಹೊರಟಿದ್ದಾರೆ. ವಿವರಣೆ ಕೇಳಿ ರಾಜ್ಯಪಾಲರು ನೋಟಿಸ್ ಕೊಟ್ಟಿದ್ದರು. ಎಂದಾದರೂ ಹಿಂದೆ ಈ ರೀತಿ ಮಾಡಿದ್ದು ನೋಡಿದ್ದೀರಾ.? ಗೌರವದಿಂದ ಸಿದ್ದರಾಮಯ್ಯ ಕೆಳಗಿಳಿಯಬೇಕು ಎಂದು ತಿಳಿಸಿದರು.