ಕಾಂಗ್ರೆಸ್ನ ರೆಸಾರ್ಟ್ ರಾಜಕೀಯ ಒಂದು ಹಂತಕ್ಕೆ ಅಂತ್ಯವಾಗಿದೆ. ಆದರೆ ರೆಸಾರ್ಟ್‌ನಲ್ಲಿ ಏಟು ತಿಂದ ಆನಂದ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು(ಜ. 21) ಆನಂದ್ ಸಿಂಗ್ ದೇಹವನ್ನು ಸ್ಕ್ಯಾನ್ ಮಾಡಿದ್ದ ವೈದ್ಯರು ಬೆಚ್ಚಿ ಬಿದ್ದಿದ್ದರು. ತಲೆಯಲ್ಲಿ ಆಂತರಿಕ ರಕ್ತ ಸ್ರಾವವಾಗಿದ್ದು ಪತ್ತೆಯಾಗಿತ್ತು. ಪಕ್ಕೆಲುಬು ಸಹ ಮುರಿದಿದೆ ಎಂದು ವೈದ್ಯರು ಹೇಳಿದ್ದರು.
ಇದೀಗ ಆನಂದ್ ಸಿಂಗ್ ಆಸ್ಪತ್ರೆಯಲ್ಲಿರುವ ಫೋಟೋ ಒಂದು ಲಭ್ಯವಾಗಿದೆ. ಆನಂದ್ ಸಿಂಗ್ ಅವರ ಬಲಗಣ್ಣು ಸಂಪೂರ್ಣವಾಗಿ ಊದಿಕೊಂಡಿದೆ. ಮುಖದ ಭಾಗವೂ ಊದಿಕೊಂಡಿದ್ದು ಎರಡು ಕಣ್ಣಿನ ಭಾಗಗಳು ಕಪ್ಪಾಗಿವೆ.
ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ಮಾರಾಮಾರಿಗೆ ಅಸಲಿ ಕಾರಣವೇನು..?
ಆನಂದ್ ಸಿಂಗ್ ಅವರಿಗೆ ಪ್ರಜ್ಞೆ ಇದ್ದರೂ ಕಣ್ಣು ತೆರೆಯಲು ಸಾಧ್ಯವಾಗದಷ್ಟು ಊತ ಇದೆ. ಈಗಲ್ ಟನ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ಶಾಸಕರ ನಡುವೆ ಮಾರಾಮಾರಿ ನಡೆದುದ್ದು ವರದಿಯಾಗಿತ್ತು. ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಹಲ್ಲೆ ಮಾಡಿದ್ದರು ಎಂಬುದನ್ನು ಆ ಪಕ್ಷದ ನಾಯಕರೇ ಒಪ್ಪಿಕೊಂಡಿದ್ದರು.
ರೆಸಾರ್ಟ್ ನಲ್ಲಿ 'ಕೈ' ಶಾಸಕರ ಮಾರಾಮಾರಿ: ತಾರಕಕ್ಕೇರಿದ ಬಾಟಲಿ ಬ್ಯಾಟಲ್!
ಆನಂದ್ ಸಿಂಗ್ ಮೇಲೆ ಹಲ್ಲೆ: ಶಾಸಕ ಗಣೇಶ್ ಹೇಳಿದ್ದೇನು?