ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರಿಂದ ಹಲ್ಲೆಗೊಳಗಾಗಿರುವ ಆನಂದ್ ಸಿಂಗ್ ಅವರ ಇಡೀ ದೇಹವನ್ನು ವೈದ್ಯರು ಎಂ.ಆರ್ ಐ ಸ್ಕ್ಯಾನಿಂಗ್ ಮಾಡಿದಾಗ ಆಘಾತಕಾರಿ ವಿಚಾರ ಪತ್ತೆ!ಆತಂಕ ಮೂಡಿಸಿದ ಶಾಸಕ ಆನಂದ ಸಿಂಗ್ ಹೆಲ್ತ್ ರಿಪೋರ್ಟ್! ಹಾಗಾದ್ರೆ ರಿಪೋರ್ಟ್ ನಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು, [ಜ.20]: ಕಾಂಗ್ರೆಸ್ನ ರೆಸಾರ್ಟ್ ರಾಜಕೀಯ ಇದೀಗ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಅದ್ರಲ್ಲೂ ಈಗಲ್ ಟನ್ ರೆಸಾರ್ಟ್ನಲ್ಲಿ ಬಳ್ಳಾರಿ ಕಾಂಗ್ರೆಸ್ ಶಾಸಕರು ಬಡಿದಾಡಿಕೊಂಡಿರುವ ಸುದ್ದಿ ಸಾಕಷ್ಟು ಚರ್ಚೆಗೆ ಗುರಿಯಾಗಿದೆ.
ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ಮಾರಾಮಾರಿಗೆ ಅಸಲಿ ಕಾರಣವೇನು..?
ಶನಿವಾರ ರಾತ್ರಿ ರೆಸಾರ್ಟ್ ನಲ್ಲಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರಿಂದ ಹಲ್ಲೆಗೊಳಗಾಗಿ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಹೊಸಪೇಟೆಯ ವಿಜಯನಗರ ಶಾಸಕ ಆನಂದ್ ಸಿಂಗ್ ಚಿಕಿತ್ಸೆ ಮುಂದುವರಿದಿದೆ.
ರೆಸಾರ್ಟ್ ನಲ್ಲಿ 'ಕೈ' ಶಾಸಕರ ಮಾರಾಮಾರಿ: ತಾರಕಕ್ಕೇರಿದ ಬಾಟಲಿ ಬ್ಯಾಟಲ್!
ಇಡೀ ದೇಹವನ್ನು ಎಂ.ಆರ್ ಐ ಸ್ಕ್ಯಾನಿಂಗ್ ಮಾಡಲಾಗಿದ್ದು, ಎಂ.ಆರ್.ಐ ಸ್ಕ್ಯಾನಿಂಗ್ ನ ವಿವರವನ್ನು ವೈದ್ಯರು ಆನಂದ್ ಸಿಂಗ್ ಕುಟುಂಬ ಸದಸ್ಯರಿಗೆ ನೀಡಿದ್ದಾರೆ.
ಇದೀಗ ಈ ಸ್ಕ್ಯಾನಿಂಗ್ ರಿಪೋರ್ಟ್ ಸುವರ್ಣನ್ಯೂಸ್ ಗೆ ಲಭ್ಯವಾಗಿದ್ದು, ಆಘಾತಕಾರಿ ವಿಚಾರ ಪತ್ತೆಯಾಗಿದೆ. ಹಾಗಾದ್ರೆ ಸ್ಕ್ಯಾನಿಂಗ್ ವರದಿಯಲ್ಲೇನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ಕ್ಯಾನಿಂಗ್ ರಿಪೋರ್ಟ್
* ಎಂ.ಆರ್. ಐ ಸ್ಕ್ಯಾನಿಂಗ್ ನಲ್ಲಿ ತೀವೃವಾಗಿ ರಕ್ತ ಸ್ರಾವವಾಗಿರುವುದು ಪತ್ತೆ.
* ತಲೆಯಲ್ಲಿ ಆಂತರೀಕವಾಗಿ ರಕ್ತ ಸ್ರಾವವಾಗಿದ್ದು, ರಕ್ತ ಹೆಪ್ಪುಗಟ್ಟುತ್ತಿದೆ.
* ಹೊಟ್ಟೆಯಲ್ಲೂ ರಕ್ತಸ್ರಾವವಾಗಿರುವ ಬಗ್ಗೆ ವೈದ್ಯರಿಗೆ ವಿವರ ಪತ್ತೆ.
* ಪಕ್ಕೆಲುಬು ಸಹ ಮುರಿದಿರುವ ಕುರಿತು ಸ್ಕ್ಯಾನಿಂಗ್ ನಲ್ಲಿ ವಿವರ ಪತ್ತೆ.