ಬಿಜೆಪಿ ಅಂದ್ರೆ ಬಂಡಲ್‌ ಜನತಾ ಪಾರ್ಟಿ: ಪ್ರಿಯಾಂಕ್‌ ಖರ್ಗೆ

By Kannadaprabha News  |  First Published Feb 3, 2023, 10:30 PM IST

ಆಮದಾನಿ ಆಠಾಣೆ, ಖರ್ಚಾ ರುಪಿಯಾ, ಉದ್ಯಮಿಗಳಿಗೆ ತೆರಿಗೆ ಹೆಚ್ಚಿಸಲಿಲ್ಲ, ಬಡವರಿಗೆ ತೆರಿಗೆ ಬರೆ ತಪ್ಪಲಿಲ್ಲ, ರೈತರಿಗೆ ಹೆಚ್ಚು ಆದಾಯವಿಲ್ಲ: ಶಾಸಕ ಪ್ರಿಯಾಂಕ್‌ ಖರ್ಗೆ ಟೀಕೆ


ಕಲಬುರಗಿ(ಫೆ.03): ’ಆಮದಾನಿ ಆಠಣಾ, ಖರ್ಚಾ ರುಪಿಯಾ (ಎಂಟಾಣೆ ಆದಾಯ, ವೆಚ್ಚ 1 ರುಪಾಯಿ) ಅಂತಾರಲ್ಲ ಹಂಗೇ ಇದೆ ಕೇಂದ್ರದ ಬಜೆಟ್‌. ಬಜೆಟ್‌ನಲ್ಲಿ ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟದ್ದೇ ಅಧಿಕ, ನೂರಾರು ಯೋಜನೆ ಘೋಷಣೆ, ಅದಕ್ಕೆಲ್ಲ ಹಣದ ಮೂಲ ಯಾವುದೆಂಬುದೇ ಸ್ಪಷ್ಟವಿಲ್ಲ’. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಕೇಂದ್ರದ ಬಜೆಟ್‌ಗೆ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ, ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಮೇಲಿನಂತೆ ಲೇವಡಿ ಮಾಡಿದ್ದಾರೆ.

ಕಲಬುರಗಿಯ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೀಷ್ಠಯಲ್ಲಿ ಮಾತನಾಡಿದ ಅವರು, ಏನೇನೋ ಬಣ್ಣ ಬಳಿದು ತೋರಿಸಿರುವ ಬಜೆಟ್‌ನಲ್ಲಿ ಆದಾಯದ ಮೂಲವೇ ಸರಿಯಾಗಿ ತೋರಿಸಿಲ್ಲ. ಉದ್ಯಮಿಗಳಿಗೆ ತೆರಿಗೆ ಹೆಚ್ಚಿಸಲಿಲ್ಲ, ಬಡವರಿಗೆ ತೆರಿಗೆ ಬರೆ ತಪ್ಪಲಿಲ್ಲ, ರೈತರ ಆದಾಯ ಡಬಲ್‌ ಮಾಡಲಿಲ್ಲ, ಹೊಸ ಉದ್ಯೋಗ ಸೃಷ್ಟಿಇಲ್ಲದ ಬಜೆಟ್‌ ಎಂದು ಟೀಕಿಸಿದರು.

Latest Videos

undefined

ಕಲಬುರಗಿ: ಕಲ್ಯಾಣದ ಬೇಡಿಕೆಗಳಿಗೆ ದೊರಕದ ಸ್ಪಂದನೆ

ಕಾರ್ಮಿಕರಂದರೆ ಬಿಜೆಪಿಗೆ ಅಲರ್ಜಿ, ಈ ಇಲಾಖೆಗೆ ಬಜೆಟ್‌ನಲ್ಲಿ ಶೇ.0.1ರಷ್ಟುಅನುದಾನ ನೀಡಿದ್ದಾರೆ. ಯುಪಿಎ ಸರ್ಕಾರದ ಕೊಡುಗೆಯಾದ ಉದ್ಯೋಗ ಖಾತ್ರಿಗೂ ಅನುದಾನ ಕಡಿತ ಮಾಡಲಾಗಿದ್ದು ಹಿಂದಿದ್ದ 98, 468 ಕೋಟಿ ರು.ಗಳ ಜಾಗದಲ್ಲಿಂದು 60 ಸಾವಿರ ಕೋಟಿ ರು. ನೀಡಿದ್ದಾರೆ. ಇವರು ಕಾರ್ಮಿಕ ಪರ ಇದ್ದಾರಾ? ಎಂದು ಪ್ರಶ್ನಿಸಿದರು.

ರಸಗೊಬ್ಬರ, ಅಡುಗೆ ಅನಿಲ ಸಬ್ಸಿಡಿಗೂ ಕತ್ತರಿ ಹಾಕಿದ್ದಾರೆ. ಪೆಟ್ರೋಲ್‌, ಡೀಸಲ್‌ ಬೆಲೆ ಗಗನಕ್ಕೇರುತ್ತಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಪಿಎಂ ಆವಾಸ್‌ ಯೋಜನಾ ಶೇ.11ರಷ್ಟುಅನುದಾನ ಕಡಿತ ಮಾಡಿದ್ದಾರೆ. ಯುವಕರಿಗೆ ಉದ್ಯೋಗ ನೀಡುವ ಒಂದೂ ದೂರದೃಷ್ಟಿಯೋಜನೆ ಇಲ್ಲವೆಂದು ಅಂಕಿ-ಸಂಖ್ಯೆ ಸಮೇತ ಕೇಂದ್ರ ಬಜೆಟ್‌ ಬಗ್ಗೆ ಅಸಮಾಧಾನ ಹೊರಹಾಕಿದರು. ಬಿಜೆಪಿಯ ದೂರದೃಷ್ಟಿಇಲ್ಲದ ಯೋಜನೆಗಳಿಂದ ಮಧ್ಯಮ ವಗÜರ್‍ವೇ ಹಾಳಾಗಿ ಹೋಗಿದೆ ಎಂದರು.

ರಾಜಕೀಯ ಜಿದ್ದಾಜಿದ್ದಿ: ಶುರುವಾದ ಪಕ್ಷಾಂತರ ಪರ್ವ..!

ಬಿಜೆಪಿ ಅಂದ್ರೆ ಬಂಡಲ್‌ ಜನತಾ ಪಾರ್ಟಿ:

ಕೇಂದ್ರ ಬಜೆಟ್‌ ಬಿಜೆಪಿಯ ರಾಜ್ಯ ನಾಯಕರು, ಇಲ್ಲಿನ ಕೆಲಸಕ್ಕೆ ಬಾರದ 256 ಎಂಪಿಗಳು ದೊಡ್ಡದಾಗಿ ಹೇಳಿಕೆ ಕೊಟ್ಟು ಸ್ವಾಗತಿಸಿದ್ದಾರೆ. ಆದರೆ, ಇವರೆಲ್ಲರೂ ಸೇರಿ ರಾಜ್ಯಕ್ಕೆ ಇನ್ನೂ ಹೆಚ್ಚಿನ ಯೋಜನೆ ತಾರದೆ ಅವರು ಕೊಟ್ಟಿದ್ದೇ ಹೆಚ್ಚಾಯ್ತು ಎಂಬಂತೆ ಧೋರಣೆ ತಾಳಿರೋದು ದುರಾದೃಷ್ಟವೆಂದು ಬಿಜೆಪಿ ನಾಯಕರು, ಸಂಸದರನ್ನು ಖರ್ಗೆ ಟೀಕಿಸಿದರು. ಬಿಜೆಪಿ ಕಳೆದ ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನೇ ಈಡೇರಿಸಲಾಗಿಲ್ಲ. ಹೀಗಾಗಿ ಬಂಡಲ್‌ ಬಿಜೆಪಿಯ ವಿಜಯ ಸಂಕಲ್ಪ ಬರೀ ಕನಸಾಗಲಿದೆ. ಜನರೇ ಇವರನ್ನು ಮನೆಗೆ ಕಳುಹಿಸಲಿದ್ದಾರೆಂದರು.

ರಾಜ್ಯದಲ್ಲೀ ಬಿಜೆಪಿ, ಬೊಮ್ಮಾಯಿ ಬಚಾವೋ ಬಜೆಟ್‌:

ಕಳೆದ ಬಾರಿಯ ರಾಜ್ಯ ಬಜೆಟ್‌ನ 391 ಘೋಷಣೆಗಳಲ್ಲಿ 163ಕ್ಕೆ ಮಾತ್ರ ಸರ್ಕಾರದ ಆದೇಶವಾಗಿದೆ. ಅಂದರೆ ಶೇ.53ರಷ್ಟುಮಾತ್ರ ಆದೇಶವಾಗಿವೆಯೇ ಹೊರತು ಉಳಿದೆಲ್ಲವೂ ಹಾಗೇ ಕುಳಿತಿವೆ. ಬಜೆಟ್‌ ಘೋಷಣೆಗಳ ಮರು ಪರಿಶೀಲನೆಯಾಗಬೇಕೆಂದು ಸಿಎಂ ಬೊಮ್ಮಾಯಿಯವರೇ ಹೇಳಿದ್ದಾರೆ. ಇದೆಲ್ಲ ನೋಡಿದರೆ ಫೆ.17ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ ಕೂಡಾ ಬೊಮ್ಮಾಯಿ ಬಚಾವೋ , ಬಿಜೆಪಿ ಬಚಾವೋ ಬಜೆಟ್‌ ಆಗಿರಲಿದೆ ಎಂದರು.
ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್‌, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್‌, ಚೇತನ ಗೋನಾಯಕ್‌, ಶಿವಾನಂದ ಪಾಟೀಲ್‌, ಲತಾ ರಾಠೋಡ ಇದ್ದರು.

click me!