ದಾವಣಗೆರೆಯಲ್ಲಿ ಸಿದ್ದರಾಮೋತ್ಸವ, ಸ್ಥಳ ವೀಕ್ಷಣೆ ಮಾಡಿದ ಕಾಂಗ್ರೆಸ್

By Suvarna NewsFirst Published Jul 10, 2022, 8:27 AM IST
Highlights

 ಸಿದ್ದರಾಮಯ್ಯನವರ 75ನೇ ವರ್ಷದ ಜನ್ಮ ದಿನ ಆಚರಣೆ  ಕಾರ್ಯಕ್ರಮ ಆಗಸ್ಟ್ 3 ರಂದು ದಾವಣಗೆರೆ ಎನ್ ಹೆಚ್ 4 ನ  ಅರಮನೆ ಮೈದಾನದಲ್ಲಿ ನಡೆಯಲಿದೆ.  ಈ ಹಿನ್ನಲೆಯಲ್ಲಿ   ಸ್ಥಳ ವೀಕ್ಷಣೆ ಹಾಗೂ ಪೂರ್ವ ಸಿದ್ಧತೆ ಸಭೆ ನಡೆಸಿದೆ.

ವರದಿ; ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜುಲೈ 10):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ವರ್ಷದ ಜನ್ಮ ದಿನ ಆಚರಣೆ ಹಾಗು ಅಮೃತ ಮಹೋತ್ಸವ ಕಾರ್ಯಕ್ರಮ ಆಗಸ್ಟ್ 3 ರಂದು ದಾವಣಗೆರೆ ಎನ್ ಹೆಚ್ 4 ನ  ಅರಮನೆ ಮೈದಾನದಲ್ಲಿ ನಡೆಯಲಿದೆ.  ಈ ಹಿನ್ನಲೆಯಲ್ಲಿ ಕಾರ್ಯಕ್ರಮದ ಅಮೃತ ಮಹೋತ್ಸವ ಸಮಿತಿ ದಾವಣಗೆರೆಯಲ್ಲಿ  ಸ್ಥಳ ವೀಕ್ಷಣೆ ಹಾಗೂ ಪೂರ್ವ ಸಿದ್ಧತೆ ಸಭೆ ನಡೆಸಿದೆ.  ಕಾಂಗ್ರೆಸ್ ಮುಖಂಡರಾದ  ಮಾಜಿ ಸಚಿವರಾದ ಬಸವರಾಜ ರಾಯರೆಡ್ಡಿ, ಎಚ್.ಸಿ. ಮಹದೇವಪ್ಪ, ಕೆ ಎನ್ ರಾಜಣ್ಣ,   ಶ್ರೀಮತಿ ಡಾ. ಜಯಮಾಲಾ, ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಬಿ.ಎಲ್. ಶಂಕರ್,  ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ ಹೆಚ್ ಆಂಜನೇಯ, ಎಸ್ ಎಸ್ ಮಲ್ಲಿಕಾರ್ಜುನ್  ಭೈರತಿ ಸುರೇಶ್ ,ಅಪ್ಪಾಜಿ ನಾಡಗೌಡ, ಮೋಹನ್ ಕೊಂಡಜ್ಜಿ ಅಬ್ದುಲ್ ಜಬ್ಬಾರ್,ಹೆಚ್.ಪಿ ರಾಜೇಶ್. ಬಿ.ಎಲ್ ಶಂಕರ್  ಭಾಗಿಯಾಗಿದ್ದಾರೆ.  ಆಗಸ್ಟ್ 3 ರಂದು ನಡೆಯುವ ಅಮೃತ ಮಹೋತ್ಸವ ಕಾರ್ಯಕ್ರಮವನ್ನು  ಎನ್ ಹೆಚ್ 4 ರಸ್ತೆ 45 ಎಕರೆ ವಿಸ್ತೀರ್ಣದ ಶಾಮನೂರು ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಸಲು  ಉದ್ದೇಶಿಸಲಾಗಿದೆ.  ಕಾರ್ಯಕ್ರಮ ಅಂದಾಜು 5 ರಿಂದ 6 ಲಕ್ಷ ಜನ ಸೇರುವ ನಿರೀಕ್ಷೆ ಇದೆ.   
 
ಸಿದ್ದರಾಮಯ್ಯ 75 ಕಾರ್ಯಕ್ರಮ ವ್ಯಕ್ತಿ ಕೇಂದ್ರಿತ ಅಲ್ಲ: ಬಿ ಎಲ್  ಶಂಕರ್ 
ಈ ಸಂದರ್ಭದಲ್ಲಿ ಮಾತನಾಡಿದ ಬಿ ಎಲ್ ಶಂಕರ್ . ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಸಿದ್ದರಾಮಯ್ಯ 75 ವರ್ಷ ಈ ಹಿನ್ನೆಲೆಯಲ್ಲಿ ಅಮೃತಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 12 ಕ್ಕೆ ನಡೆಯಲಿದೆ.  ರಾಜ್ಯ ದೇಶಕ್ಕೆ ಕಾಂಗ್ರೆಸ್ ಮುಖಂಡರ ಕೊಡುಗೆ ಆಪಾರ.  ಭಾರತದ ಸಂವಿಧಾನ ಎದುರಿನ  ಸವಾಲುಗಳು,   ಸಂವಿಧಾನದ ಅಡಿಯಲ್ಲಿ ರಚನೆಯಾದ ಸ್ವಾಯತ್ತ ಸಂಸ್ಥೆ ಬಂದಿರುವ ಅಪಾಯದ ಬಗ್ಗೆ ಚಿಂತನ ಮಂಥನ ನಡೆಯಲಿದೆ.

Latest Videos

ಇಲ್ಲಿ ಯಾವುದೇ ಗೊಂದಲವಿಲ್ಲ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ ಇದು ಸಿದ್ದರಾಮಯ್ಯನವರ   ವ್ಯಕ್ತಿ ವೈಭವ ವಿಜೃಂಭಣೆಯಿಲ್ಲ.ದೇಶದ ಜನರ ಬದುಕು ಹಸನುಗೊಳಿಸುವ ಕೆಲಸ ಇದು. ಜುಲೈ 23  ರಂದು  ಸಿದ್ದರಾಮಯ್ಯನವರ ಬಗ್ಗೆ ಬರೆಯಲಾದ ಪುಸ್ತಕವನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಲಾಗುವುದು.ಆದಿಚುಂಚನಗಿರಿ ಶ್ರೀ ,ಖರ್ಗೆ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.  ವ್ಯಕ್ತಿ ಕೇಂದ್ರಿತ ಅಲ್ಲ ವಿಷಯ ಕೇಂದ್ರಿತ ಕಾರ್ಯಕ್ರಮ ಇದಾಗಿದೆ ಎಂದರು.

ರಾಜಕೀಯ ಸಂದೇಶಕ್ಕಾಗೇ ಸಿದ್ದರಾಮೋತ್ಸವ: Siddaramaiah ಸ್ಪಷ್ಟನೆ

 ರಾಹುಲ್ ಗಾಂಧಿ ಕೆಪಿಸಿಸಿ  ಅದ್ಯಕ್ಷರು ಕಾರ್ಯಕ್ರಮದ ಅತಿಥಿಗಳು: ಕೆ ಎನ್  ರಾಜಣ್ಣ
ಅಮೃತ ಮಹೋತ್ಸವ ಸಮಿತಿ ಅದ್ಯಕ್ಷ ಕೆ.ಎನ್ ರಾಜಣ್ಣ  ಮಾತನಾಡಿ ಕಾರ್ಯಕ್ರಮ ಆಗಸ್ಟ್ 3 ರಂದು ನಡೆಯಲಿದೆ .ನಮ್ಮ ದೇಶದ ಕಾಂಗ್ರೆಸ್ ನ ರಾಹುಲ್ ಗಾಂಧಿ ಕೆಪಿಸಿಸಿ ಅಧ್ಯಕ್ಷ  ಡಿಕೆಶಿ, ಖರ್ಗೆ,ಹರಿಪ್ರಸಾದ್,ವೇಣುಗೋಪಾಲ್ ಆಗಮಿಸುವರು.  ಜು.13 ಕ್ಕೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಸಲಹೆ ಸಹಕಾರ ಪಡೆಯಲಾಗುವುದು.

ಸಿದ್ದರಾಮೋತ್ಸವ ಅಲ್ಲ ಇದು ಅಮೃತಮಹೋತ್ಸವ ಇದು .ಜನರಲ್ಲಿ ಗೊಂದಲ ಉಂಟು ಮಾಡಬಾರದು. ಪಕ್ಷದ ವೈಭವೀಕರಣ ಅಲ್ಲ. ಈ ಕಾರ್ಯಕ್ರಮಕ್ಕೆ  ಸಿದ್ದರಾಮಯ್ಯ ಆಸಕ್ತಿ ತೋರಲಿಲ್ಲ ಆದರೆ ಇಬ್ಬ ವ್ಯಕ್ತಿ ಜೀವನಪರ್ಯಂತ ಬಡವರು ಜನರಿಗಾಗಿ ರಾಜಕೀಯವಾಗಿ ಶ್ರಮಿಸಿದ್ದಾರೆ ಆದ್ದರಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು. 

ಸಿದ್ದು ಬಗ್ಗೆ 27 ಲೇಖಕರು ವಿಮರ್ಶೆ ಮಾಡಿರುವ ಬೃಹತ್‌ ಕೃತಿ ಜು.23ಕ್ಕೆ ರಿಲೀಸ್

 ಸಿದ್ದರಾಮಯ್ಯನವರನ್ನು ಸಿಎಂ ಮಾಡುವ ಸಮಾವೇಶ  ಅಲ್ಲ: ರಾಯರೆಡ್ಡಿ 
ಬಸವರಾಜ ರಾಯರೆಡ್ಡಿ ಮಾತನಾಡಿ ಅಮೃತಮಹೋತ್ಸವ ಸಮಿತಿಯ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ನಿಯೋಜನೆ ಮಾಡಲಾಗಿದೆ.ಗೊಂದಲದ ಸೃಷ್ಠಿ ಬೇಡ.ವ್ಯಕ್ತಿ ಪೂಜೆ ಅಲ್ಲ ಸಿದ್ದರಾಮೋತ್ಸವ ಅಲ್ಲ ಇದು ಕೇವಲ ಅಮೃತಮಹೋತ್ಸವ. ಸಿದ್ದು ಆತ್ಮೀಯ ಸ್ನೇಹಿತರು ಹಾಗೂ ಅಭಿಮಾನಿಗಳು ಮಾಡುತ್ತಿದ್ದಾರೆ ಅವರು ಎಂದು ಜನ್ಮದಿನಾಚರಣೆ ಮಾಡಿಕೊಂಡವರಲ್ಲ. ಅವರು ಜನಪರ ನಾಯಕರು ಎಲ್ಲಾ ವರ್ಗದ ಜನರು ಅವರ ಅಭಿಮಾನಿಗಳು ಆಯೋಜಿಸಲು ಮುಂದಾಗಿದ್ದರು.

ಎಲ್ಲಾ ವರ್ಗ ಜಾತಿ ಜನಾಂಗದ ಎಲ್ಲಾ ವರ್ಗದ ಜನನಾಯಕ ಅದಕ್ಕಾಗಿ ಈ ಸಮಾರಂಭ ಮಾಡಲಾಗುತ್ತಿದೆ. ಯಾರು ಕರೆಯದೇ ಮೂರು ಲಕ್ಷ ಜನ ಸೇರಲಿದ್ದಾರೆ.ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ ಸಮಿತಿ ಯ ಕಾರ್ಯಕ್ರಮ ಸಾಹಿತಿಗಳು ಅಭಿಮಾನಿಗಳು ಈ ಕಮೀಟಿ ಯಲ್ಲಿದ್ದಾರೆ  ರಾಹುಲ್ ಗಾಂಧಿ ಉದ್ಘಾಟನೆ ಮಾಡಲಿದ್ದಾರೆ.ಕೇಂದ್ರ ಮುಖಂಡರು ಆಗಮಿಸಲಿದ್ದಾರೆ.ಜು.18 ಅಥವಾ 19 ರಂದು  ದೆಹಲಿಗೆ ತೆರಳಿ ಆಹ್ವಾನ ನೀಡಲಾಗುವುದು ಎಂದರು.

ಆಗಸ್ಟ್  3 ರಂದು 5 ರಿಂದ 6 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಎಸ್ ಎಸ್ ಗೆ ಸೇರಿದ 100 ಎಕರೆ ಜಮೀನಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಜು13  ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ.ಈ ಸಭೆಯಲ್ಲಿ ಪಕ್ಷದ ಎಲ್ಲಾ ಮುಖಂಡರು‌ ಆಗಮಿಸಲಿದ್ದಾರೆ.2 ಸಾವಿರ ಕ್ಕಿಂತ ಅಧಿಕ ಮುಖಂಡರು ಸಭೆಯಲ್ಕಿ ಭಾಗವಹಿಸಲಿದ್ದಾರೆ.ಡಿಕೆಶಿ,ಹರಿಪ್ರಸಾದ್ ಆಗಮಿಸಲಿದ್ದಾರೆ ಸಿದ್ದರಾಮಯ್ಯ ಅವರಿಗೂ ಆಹ್ವಾನ ನೀಡಿದ್ದೇವೆ ಅಂದು ಕಾರ್ಯಕ್ರಮದ ರೂಪುರೇಷು ಸಿದ್ದ ಪಡಿಸಲಾಗುವುದು. ಅರ್ಥಪೂರ್ಣ ಕಾರ್ಯಕ್ರಮ ಮಾಡಲಾಗುವುದು. ಇದು ಮಹತ್ವ ಘಟ್ಟ ಅವರ ಜನ್ಮದಿನಾಚರಣೆ ಮೂಲಕ  ರಾಜ್ಯದಲ್ಲಿ ನವ ವಿಚಾರ ಹೊರಬರಬೇಕು ಎಂಬ ಬಗ್ಗೆ ಚರ್ಚೆ ಯಾಗಲಿದೆ ಎಂದರು.

ಯಾರು ನೆಗೆಟೀವ್ ಆಗಿ ತೆಗೆದುಕೊಳ್ಳಬಾರದು ಸಿಎಂ ಮಾಡುವ ಸಮಾವೇಶ ಅಲ್ಲ ಸಿದ್ದರಾಮಯ್ಯ ಜನಪ್ರಿಯ ನಾಯಕ ಅವರು ಭ್ರಷ್ಟ ವ್ಯಕ್ತಿಯಲ್ಲ. ನಾಡು ಕಂಡ ಶ್ರೇಷ್ಠ ವ್ಯಕ್ತಿ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ.ನಮ್ಮ ಸಂಸ್ಕಾರ ಸಂಸ್ಕೃತಿಯಿಂದ ಕಾರ್ಯಕ್ರಮ ನಡೆಲಾಗುವುದು.ವ್ಯಕ್ತಿ ವಿಚಾರಗಳನ್ನು ಮುಂದಿನ ಪೀಳಿಗೆಗೆ ಇತಿಹಾಸ ತಿರುಚುವ ಕೆಲಸ ಮಾಡಲಾಗುತ್ತಿದೆ. ಅದಕ್ಕಾಗಿ ಸಿದ್ದರಾಮಯ್ಯ ಅವರ ಕುರಿತು ಜನತೆ ತಿಳಿಸಲಾಗುವುದು ಎಂದರು.ಸಕಾರಾತ್ಮಕ ಸಹಕಾರ ನೀಡಬೇಕೆಂದು ಮನವಿ ಮಾಡಿದರು. 

ಎಸ್ ಎಸ್ ಮಲ್ಲಿಕಾರ್ಜುನ್ ಮಾತನಾಡಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಬೇಕು.ಎಲ್ಲಾ ಮುಖಂಡರು ಸಭೆ ಸೇರಿ ದಾವಣಗೆರೆ ಯಲ್ಲಿ ಮಾಡುತ್ತಿದ್ದಾರೆ ಸಿದ್ದರಾಮಯ್ಯ ಅವರಿಗೆ ಸಲ್ಲುವ ಸೇವೆ ಇದು. ಸಿಎಂ ಆಗಿದ್ದಾಗ ಅವರ ಕಾರ್ಯಗಳು ಅನೇಕ.ಎಲ್ಲಾ ವರ್ಗದವರಿಗೂ ಅವರು ನೆರವು ನೀಡಿದ್ದರು.ಮಾಧ್ಯಮಗಳು ತಿರುಚದೇ ಸಕಾರಾತ್ಮಕ ಸ್ಪಂದನೆ ನೀಡಬೇಕು ಎಂದರು. 

ಸಮಾಜವಾದ ರೈತ ಚಳುವಳಿ ನಾಯಕನಿಗೆ ಅಭಿಮಾನಿಗಳ ಗೌರವದ ಕಾರ್ಯಕ್ರಮ; ಹೆಚ್ ಸಿ  ಮಹಾದೇವಪ್ಪ
ಹೆಚ್.ಸಿ ಮಹಾದೇವಪ್ಪ ಮಾತನಾಡಿ ಸಿದ್ದರಾಮಯ್ಯ ಜನ್ಮದಿನ ಆಚರಿಸಿಕೊಂಡವರಲ್ಲ ಹಾಗೂ ಕಾಂಗ್ರೆಸ್ ಯಾವ ನಾಯಕರ ಜನ್ಮದಿನ ಆಚರಿಸಿಲ್ಲ.ಸಿದ್ದರಾಮಯ್ಯ ಸಾರ್ವಜನಿಕ ಜೀವನಕ್ಕೆ ಬಂದು 40 ವರ್ಷವಾಗಿದೆ.ಯುವ ಜನರಲ್ಲಿ ಸಮಾಜವಾದ ಬಿತ್ತಿದವರು ರೈತ ಚಳುವಳಿಯಲ್ಲಿ ಭಾಗವಹಿಸಿದ್ದರು. ಜೆಪಿ ಚಳುವಳಿಯಲ್ಲಿದ್ದವರು.ಸಮಾಮಾಜ ನಿರ್ಮಾಣದ ಕನಸು ಹೊತ್ತವರು.ಸಾಮಾಜಿಕ ಚಳುವಳಿಗಳ ಮೂಲಕ ರಾಜಕೀಯಕ್ಕೆ ಬಂದವರು.ರಾಮಕೃಷ್ಣ ಹೆಗಡೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು.  ಸಿದ್ದರಾಮಯ್ಯ ನಡೆ ಸಮಾಜಮುಖಿ ಕೆಲಸವಾಗಿದೆ.ಜನ್ಮದಿನ ಆಚರಿಸಲು ಸ್ನೇಹಿತರಾದ ನಾವು ತೀರ್ಮಾನ ಮಾಡಿದ್ದೇವೆ.ವ್ಯಕ್ತಿ ಪೂಜೆ ಇದಲ್ಲ.

ಇದು ಅಮೃತಮಹೋತ್ಸವ.ಸಿದ್ದರಾಮೋತ್ಸವ ಮಾಡುತ್ತಿಲ್ಲ.ಸರ್ಕಾರದ ನಡೆ..ನಮ್ಮ ಅಧಿಕಾರದ ಅವಧಿಯಲ್ಲಿ ನಡೆದ ಯೋಜನೆ  ಸಂವಿಧಾನದ ರಕ್ಷಣೆ ರಾಜ್ಯವನ್ನು ಬಹುತ್ವ ಕಾಪಾಡುವ ನಿಟ್ಟಿನಲ್ಲಿ  ಉತ್ತಮ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಆರೋಗ್ಯ ಕರ ಸಮಾಜ ನಿರ್ಮಾಣ ಸಾಧ್ಯ.ರಾಜ್ಯ ಸರ್ಕಾರ ಇಂದು ಪಠ್ಯ ತಿರುಚಿ ಅನೇಕ ಗೊಂದಲ ಸೃಷ್ಠಿಸಿದೆ ಇದು ಸರಿಯಲ್ಲ ವ್ಯಕ್ರಿಗತ ಅಜಂಡ ಅಲ್ಲ ಸಂವಿಧಾನದ ಆಶಯಗಳನ್ನು ಬಲೊಡಿಸುವ ಉದ್ದೇಶ ಕೆಪಿಸಿಸಿ ಎಐಸಿಸಿ ಅನುಮತಿ ಪಡೆದು ಮಾಡುತ್ತಿರುವ ಕಾರ್ಯಕ್ರಮ ಇದಾಗಿದೆ.ಅಭಿಮಾನಿಗಳು ಯಾರು ಬೇಕಾದರೂ ಭಾಗವಹಿಸಬಹುದಾಗಿದೆ. ಐತಿಹಾಸಿಕ ಆಚರಣೆ ಮಾಡಿ ಇದರ ಉದ್ದೇಶ ಜನಸಾಮಾನ್ಯರಿಗೆ ಪ್ರಜಾಪ್ರಭುತ್ವ, ಸಮಾನತೆ  ಹೇಳುವ ಕಾರ್ಯಕ್ರಮ ಇದು  ಗುಂಪು ಗೊಂದಲ ವೈಮನಸ್ಸಿಗೆ ಆಸ್ಪದ ಇಲ್ಲ.

ಮಾಜಿ ಸಚಿವೆ ಜಯಮಾಲ ಮಾತನಾಡಿ ಮಹಿಳೆ ಧ್ವನಿಗೆ ಶಕ್ತಿ ತುಂಬಿದ್ದವರು ಸಿದ್ದರಾಮಯ್ಯ ಅವರು.ಮಹಿಳೆಯರಿಗೆ ಅವಕಾಶ ನೀಡಿದವರು.ಅನೇಕ ಹೆಣ್ಣುಮಕ್ಕಳಿಗೆ ಪ್ರೋತ್ಸಾಹ ನೀಡಿದ್ದಾರೆ.ಅಮೃತಮಹೋತ್ಸವ ಯಶಸ್ವಿಯಾಗಲಿ. 75 ವರ್ಷ ಬದುಕುವುದು ಸಹಜ ಸಿದ್ದರಾಮಯ್ಯ ಅವರ ರೀತಿ ಸಾರ್ಥಕತೆ ಪಡೆಯುವುದು ಮುಖ್ಯ ಜನರಿಗೆ ಸ್ಪಂದಿಸುವ ಜನರಿಗಾಗಿ ಅನೇಕ ಯೋಜನೆ ನೀಡಿದವರು.ಎಲ್ಲರನ್ನೂ ಸಶಕ್ತರನ್ನಾಗಿ ಮಾಡುವ ಯೋಜನೆ ನೀಡಿದವರು.ಸಂಭ್ರಮದ ಆಚರಣೆ ಇದಾಗಿದೆ.ನಮ್ಮೆಲ್ಲರ ಹೆಮ್ಮೆ ಈ ಜನ್ಮದಿನಾಚರಣೆ. ಕಾಂಗ್ರೆಸ್ ಪಕ್ಷದ ಋಣ ತೀರಿಸುವ ಸಮಯ ಇದಾಗಿದೆ ಎಂದರು.

click me!