* ಹಾಸನ ಗೆಲ್ಲುತ್ತೇವೆ
* 150+ ಗೆಲ್ಲಬೇಕೆಂದು ಕಾರ್ಯತಂತ್ರ ರೂಪಿಸಿದ್ದೇವೆ
* ಮುಂದಿನ ಚುನಾವಣೆಯಲ್ಲಿ ನಮಗೆ ಇಡೀ ರಾಜ್ಯವೇ ಫೋಕಸ್
ಹಾಸನ(ಜು.10): ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್‌ನೊಳಗೆ ನಡೆದಿರುವ ಒಳ ಜಗಳದಿಂದಲೇ ಮುಂದೆ ಕಾಂಗ್ರೆಸ್ ಎರಡು ಹೋಳಾಗುವುದರಲ್ಲಿ ಸಂಶಯವಿಲ್ಲ. ಗುಪ್ತಚರ ಇಲಾಖೆ ಮತ್ತು ಮಾಧ್ಯಮದವರ ಸಮೀಕ್ಷೆ ಪ್ರಕಾರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕಾಂಗ್ರೆಸ್ ನಾಯಕರ ಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಸಿದ್ದರಾಮಯ್ಯ ಗುಂಪಿಗೆ ಎಷ್ಟುಸೀಟು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗುಂಪಿಗೆ ಎಷ್ಟುಸೀಟು ಎನ್ನುವ ಚರ್ಚೆ ಆಗುತ್ತಿದೆ. ಅವರ ಒಳಜಗಳ ಬೀದಿಗೆ ಬಂದು ನಿಂತಿದೆ. ‘ಸಿದ್ದರಾಮೋತ್ಸವ’ ಮೂಲಕ ತಮ್ಮ ಇರುವಿಕೆ, ಅಸ್ತಿತ್ವ ತೋರಿಸಲು ಸಿದ್ದರಾಮಯ್ಯ ಜಾತ್ರೆ ಮಾಡುತ್ತಿದ್ದಾರೆ. ಇದರಿಂದ ಡಿ.ಕೆ.ಶಿವಕುಮಾರ್ ದುಃಖದಲ್ಲಿದ್ದಾರೆ. ಇದಕ್ಕೆ ವರಿಷ್ಠರು ತೇಪೆ ಹಾಕಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನ ಮುಖ್ಯಮಂತ್ರಿ ಹುದ್ದೆಯ ಜಗಳದಿಂದ ಮುಂದೆ ಕಾಂಗ್ರೆಸ್ ಎರಡು ಹೋಳಾಗಲಿದೆ. ಕಾಂಗ್ರೆಸ್ ಸ್ಪಷ್ಟವಾಗಿ ಎರಡು ತುಂಡಾಗಿ ಬಿಜೆಪಿಯು 150 ಸ್ಥಾನ ಗಳಿಸಲಿದೆ ಎಂದರು.
undefined
2023 ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 120+ ಸ್ಥಾನ ಬರುವ ಸಾಧ್ಯತೆ: ಆಂತರಿಕ ಸಮೀಕ್ಷಾ ವರದಿ
ಹಾಸನ ಗೆಲ್ಲುತ್ತೇವೆ:
ಮುಂದಿನ ಚುನಾವಣೆಯಲ್ಲಿ ನಮಗೆ ಇಡೀ ರಾಜ್ಯವೇ ಫೋಕಸ್. 150+ ಗೆಲ್ಲಬೇಕೆಂದು ಕಾರ್ಯತಂತ್ರ ರೂಪಿಸಿದ್ದೇವೆ. ವಿಶೇಷವಾಗಿ ಹಳೇಮೈಸೂರು, ಹಾಸನ ಈ ಭಾಗಗಳಲ್ಲಿ ನಮ್ಮ ಕಾರ್ಯ ಇನ್ನಷ್ಟುವಿಸ್ತಾರವಾಗಬೇಕು. ಅದಕ್ಕೆ ಪೂರಕವಾದ ಚರ್ಚೆಗಳನ್ನು ಹಾಸನದಲ್ಲಿ ನಡೆಯುತ್ತಿರುವ ಪದಾಧಿಕಾರಿಗಳ ಸಭೆಯಲ್ಲಿ ಚರ್ಚಿಸುತ್ತೇವೆæ. ಹಾಸನದಲ್ಲಿ ಈ ಹಿಂದೆ ಬಿಜೆಪಿ ನಾಲ್ಕು ಸ್ಥಾನ ಪಡೆದಿತ್ತು. ಈಗ ಮತ್ತೆ ನಾಲ್ಕೈದು ಸ್ಥಾನಗಳನ್ನು ಗೆಲ್ಲಲು ಪ್ರಯತ್ನ ಮಾಡುತ್ತೇವೆ ಎಂದರು.