ರಾಜ್ಯ, ಕೇಂದ್ರದಲ್ಲಿರುವುದು ಡಬಲ್‌ ದೋಖಾ ಸರ್ಕಾರಗಳು: ಖಂಡ್ರೆ

Published : Jul 10, 2022, 05:00 AM IST
ರಾಜ್ಯ, ಕೇಂದ್ರದಲ್ಲಿರುವುದು ಡಬಲ್‌ ದೋಖಾ ಸರ್ಕಾರಗಳು: ಖಂಡ್ರೆ

ಸಾರಾಂಶ

*   ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸರ್ಕಾರವಿದೆ *   40 ಪರ್ಸೆಂಟ್‌ ಕಮಿಷನ್‌ ಹಣ ನೀಡಿಕೆಗಳಂತಹ ಅನೇಕ ಹಗರಣಗಳ ಸರಮಾಲೆ ಬಿಜೆಪಿ ಸರ್ಕಾರದಲ್ಲಿದೆ *   ಬಿಜೆಪಿಗರು ಸರ್ಕಾರ ನಡೆಸಲು ಯೋಗ್ಯರಲ್ಲ. ಮುಂದಿನ ದಿನಗಳಲ್ಲಿ ಮತದಾರ ತಕ್ಕ ಪಾಠ ಕಲಿಸಲಿದ್ದಾನೆ

ಜಮಖಂಡಿ(ಜು.10): ಕೇಂದ್ರ ಮತ್ತು ರಾಜ್ಯದಲ್ಲಿನ ಸರ್ಕಾರಗಳು ಡಬಲ್‌ ಎಂಜಿನ್‌ ಸರ್ಕಾರಗಳಲ್ಲ. ಅವು ಡಬಲ್‌ ದೋಖಾ ಸರ್ಕಾರಗಳಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಈಶ್ವರ ಖಂಡ್ರೆ ವ್ಯಂಗ್ಯವಾಡಿದರು.
ಇಲ್ಲಿನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸರ್ಕಾರವಿದ್ದು, ಪಿಎಸ್‌ಐ, ಉಪನ್ಯಾಸಕರ ನೇಮಕಾತಿ ಹಗರಣಗಳು ಅಲ್ಲದೇ 40 ಪರ್ಸೆಂಟ್‌ ಕಮಿಷನ್‌ ಹಣ ನೀಡಿಕೆಗಳಂತಹ ಅನೇಕ ಹಗರಣಗಳ ಸರಮಾಲೆ ಬಿಜೆಪಿ ಸರ್ಕಾರದಲ್ಲಿದೆ. ಅವರು ಸರ್ಕಾರ ನಡೆಸಲು ಯೋಗ್ಯರಲ್ಲ. ಮುಂದಿನ ದಿನಗಳಲ್ಲಿ ಮತದಾರ ತಕ್ಕ ಪಾಠ ಕಲಿಸಲಿದ್ದಾನೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾತಿ-ಜಾತಿ, ಧರ್ಮ-ಧರ್ಮಗಳ ಮಧ್ಯ ವೈಷಮ್ಯ ಹುಟ್ಟಿಸಿ, ಸಮಾಜದಲ್ಲಿ ಕೋಮುವಾದ ಹೆಚ್ಚಾಗುವಂತೆ ಮಾಡಿ ಪ್ರಜಾಪ್ರಭುತ್ವವನ್ನು ಹಾಳುಗೆಡವಲಾಗಿದೆ. ಸಂವಿಧಾನ ಅಪಾಯದಲ್ಲಿದೆ ಎಂದು ಆರೋಪಿಸಿದರು.

 

ಅಗ್ನಿಪಥ್‌ ಯೋಜನೆ: ಬಿಜೆಪಿಯಿಂದ ಯುವಕರ ದುರ್ಬಳಕೆ, ಈಶ್ವರ ಖಂಡ್ರೆ

ಬಿಜೆಪಿ ಸಮಾಜವನ್ನು ಒಡೆಯಲು ಹೊರಟಿದೆ. ಇದನ್ನು ಖಂಡಿಸಿ ಕಾಂಗ್ರೆಸ್‌ ಭಾರತ ಜೋಡೊ ಎಂಬ ಸಮಾಜ ಜೋಡಿಸುವ ಅಭಿಯಾನ ಹಮ್ಮಿಕೊಂಡಿದೆ ಎಂದ ಅವರು, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕಗಳಲ್ಲಿ ಅಭಿವೃದ್ಧಿಗಾಗಿ ನವಸಂಕಲ್ಪ ಕಾರ್ಯಕ್ರಮ ಹಾಕಿಕೊಂಡು ಅಭಿವೃದ್ಧಿಗೆ ಹೋರಾಟ ನಡೆಸಿ, ಪ್ರತಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚಿಂತನ-ಮಂಥನ ಉಳ್ಳ ಪ್ರಣಾಳಿಕೆಯನ್ನು ಕಾಂಗ್ರೆಸ್‌ ರೂಪಿಸಲಿದೆ. ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಜೌದ್ಯೋಗಿಕವಾಗಿ ಸುಧಾರಣೆ ತರಲು ಕಾಂಗ್ರೆಸ್‌ ಪಾದಯಾತ್ರೆ ಮೂಲಕ ಜನವಿರೋಧಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಿದೆ ಎಂದು ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯನವರ ಜನ್ಮದಿನದ ಅಂಗವಾಗಿ ಸಿದ್ದರಾಮೋತ್ಸವವನ್ನು ಅವರ ಅಭಿಮಾನಿಗಳು ಆಚರಿಸುತ್ತಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!