ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿರುವ ಮಧ್ಯೆ ದಿಲ್ಲಿಯತ್ತ ಸಿದ್ದರಾಮಯ್ಯ

By Suvarna NewsFirst Published Feb 27, 2021, 10:40 PM IST
Highlights

ಮೈಸೂರು ಮೇಯರ್ ಸಂಬಂಧ ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಇದರ ಮಧ್ಯೆ ಸಿದ್ದರಾಮಯ್ಯ ಅವರು ದಿಲ್ಲಿ ಪ್ರವಾಸ ಕೈಗೊಂಡಿರುವುದು ಕುತೂಹಲ ಮೂಡಿಸಿದೆ.

ಬೆಂಗಳೂರು, (ಫೆ.27): ಕೆಲ ನಾಯಕರ ನಿರ್ಧಾರದಿಂದ ಮೈಸೂರು ಮಹಾನಗರ ಮೇಯರ್ ಚುನಾವಣೆಯಲ್ಲಿ ತಮಗೆ ಹಿನ್ನಡೆಯಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ.

ಈ ಬೇಸರದಿಂದಲೇ ಸಿದ್ದರಾಮಯ್ಯನವರು ರೆಸಾರ್ಟ್‌ ಮೊರೆ ಹೋಗಿದ್ದರು. ಇದೀಗ ರೆಸಾರ್ಟ್‌ನಿಂದ ಸಿದ್ದರಾಮಯ್ಯ ಅವರು ದಿಢೀರ್ ನವದೆಹಲಿಯತ್ತ ಮುಖ ಮಾಡಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚನಲ ಮೂಡಿಸಿದೆ.

ಹೌದು...ಮೈಸೂರು ಪಾಲಿಕೆ ಮೇಯರ್ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಅಸಮಾಧಾನಗೊಂಡಿರುವ ಸಿದ್ದರಾಮಯ್ಯ ಅವರು ನಾಳೆ (ಫೆ.28) ದೆಹಲಿಗೆ ತೆರಳಲಿದ್ದಾರೆ.

ರೆಸಾರ್ಟ್​ನತ್ತ ಮುಖ ಮಾಡಿದ ಸಿದ್ದರಾಮಯ್ಯ: ಸಂಚಲನ ಮೂಡಿಸಿದ ಟಗರು ನಡೆ

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸುರ್ಜೆಚಾಲ ಪುತ್ರನ ವಿವಾಹ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ದೆಹಲಿಗೆ ಪ್ರಯಾಣ ಮಾಡಲಿದ್ದಾರೆ. ಈ ಮದ್ವೆ ನೆಪದಲ್ಲಿ ದೆಹಲಿಯಲ್ಲಿ ಹೋಗಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಭೇಟಿ ವೇಳೆ ಸಿದ್ದರಾಮಯ್ಯ ಅವರು ಮೈಸೂರು ಪಾಲಿಕೆ ಚುನಾವಣೆಗೆ ತಮಗೆ ಹಿನ್ನಡೆಯಾಗಿರುವ ಬಗ್ಗೆ ಹೈಕಮಾಂಡ್​​​ಗೆ ದೂರು ನೀಡುವ ಸಾಧ್ಯತೆ ಇದೆ. 

ಒಟ್ಟಿನಲ್ಲಿ ಮೈಸೂರು ಮೇಯರ್ ದಂಗಲ್ ಮಧ್ಯೆ ಸಿದ್ದರಾಮಯ್ಯ ಅವರು ನವದೆಹಲಿಗೆ ಹೊರಟಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ.

click me!