
ಬೆಳಗಾವಿ, (ಫೆ.27): ಬೆಳಗಾವಿ ಗಡಿ ಭಾಗದ ಕನ್ನಡಿಗರನ್ನ ಮಹಾರಾಷ್ಟ್ರದವರು ಕೆಣಕುತ್ತಿದ್ರೆ, ತೆಪ್ಪಗೆ ಕುಳಿತುಕೊಳ್ಳುವ ಸಚಿವ ರಮೇಶ್ ಜಾರಕಿಹೊಳಿ ಇದೀಗ ಕನ್ನಡ ಪ್ರೇಮದ ಬಗ್ಗೆ ಕಥೆಯೊಂದನ್ನು ಹೇಳಿದ್ದಾರೆ.
ಹೌದು... ಗೋಕಾಕ್ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ನಾಲ್ಕು ಜನರು ಮುಂದೆ ಕನ್ನಡದ ಬಗ್ಗೆ ಉದ್ದೂದ್ದ ಭಾಷಣ ಮಾಡಿದ್ದಾರೆ.
ಮಹದಾಯಿ ವಿವಾದ ವಿಚಾರವಾಗಿ ದೆಹಲಿಯಲ್ಲಿ ಸಭೆ ಇತ್ತು. 3 ದಿನಗಳ ಹಿಂದೆ ಸಭೆ ಇತ್ತು. ಸಭೆಯಲ್ಲಿ ನನಗೆ ಇಂಗ್ಲಿಷ್ನಲ್ಲಿ ಪ್ರಶ್ನೆ ಕೇಳಲು ಮುಂದಾದರು. ನಾನು ಸರ್ಕಾರಿ ಶಾಲೆಯಲ್ಲಿ ಓದಿದವ, ನನಗೆ ಇಂಗ್ಲಿಷ್ ಬರಲ್ಲ. ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದರು.
ಕನ್ನಡ ತುಳಿಯುವ ಹೊಸ ತಂತ್ರ: ಮತ್ತೆ ಕನ್ನಡಿಗರ ಸ್ವಾಭಿಮಾನ ಕೆಣಕಿದ ಉದ್ಧವ್...!
ನಮ್ಮ ಮನೆಯಲ್ಲಿ ಎಲ್ಲರೂ ಸರ್ಕಾರಿ ಶಾಲೆಯಲ್ಲಿ ಓದಿದವರು. ನಾವೆಲ್ಲರೂ ಸರ್ಕಾರಿ ಆಸ್ಪತ್ರೆಯಲ್ಲೇ ಹುಟ್ಟಿದ್ದೇವೆ. ನನ್ನ ಮೊಮ್ಮಗ ಕೂಡ ಸರ್ಕಾರಿ ಆಸ್ಪತ್ರೆಯಲ್ಲೇ ಜನಿಸಿದ್ದಾನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಯಾವುದೇ ಕೆಲಸವಿರಲಿ ಜನರು ಮನವಿ ಮಾಡುವ ಅಗತ್ಯವಿಲ್ಲ. ಗೋಕಾಕ್ ಜನರು ನನಗೆ ಮನವಿ ಮಾಡುವ ಜರೂರತ್ ಇಲ್ಲ. ಯಾವುದೇ ಕೆಲಸ ಇರಲಿ ಆದೇಶ ಮಾಡುವ ಹಕ್ಕು ಜನರಿಗಿದೆ ಎಂದರು.
ನಿಮ್ಮ ಆಶೀರ್ವಾದದಿಂದ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದೇನೆ. ಗೋಕಾಕ್ ಜನ ಮನವಿ ಮಾಡಿದರೆ ನನಗೆ ಅಪಮಾನ ಆಗುತ್ತೆ. ಗೋಕಾಕ್ನಲ್ಲಿ ಕನ್ನಡ ಸಾಹಿತ್ಯ ಭವನ, ಸಭಾಭವನ ನಿರ್ಮಿಸಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.