* ಕರ್ನಾಟಕ ವಿಧಾನಸಭೆ ಚುನಾವಣೆ 2023
* ಕೋಲಾರ ಜಿಲ್ಲೆಯ ಮೇಲೆ ಸಿದ್ದರಾಮಯ್ಯನವರಿಗೂ ಒಲವು
* ಸಿದ್ದು ಸ್ಪರ್ಧೆಗಾಗಿ ಹೆಚ್ಚಿದ ಒತ್ತಡ..!
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ, (ಮೇ.30) : ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ನಡೆಸಿವೆ. ಇನ್ನು ನಾಯಕರು ಸಹ ಕ್ಷೇತ್ರದಲ್ಲಿ ಬೀಡುಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
undefined
ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೇರೆಡು ಕ್ಷೇತ್ರಗಳಲ್ಲಿ ಸ್ಪರ್ದಿಸಿ, ಬಾದಾಮಿ ಕ್ಷೇತ್ರದಲ್ಲಿ ಗೆಲುವು ಸಾಧಿಸು ಚಾಮುಂಡೇಶ್ವರಿಯಲ್ಲಿ ಸೋಲುಕಂಡಿದ್ರು, ಇದೀಗ ಈ ಬಾರಿ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವುದು ಮಾತ್ರ ತೀವ್ರ ಕುತೂಹಲ ಮೂಡಿಸಿದೆ. ಈಗಿರುವ ಸಿದ್ದರಾಮಯ್ಯ ಮತ್ತೊಂದು ಹೊಸ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು,ಕಾರ್ಯಕರ್ತರು ಸಹ ಇಲ್ಲೇ ಸ್ಪರ್ಧೆ ಮಾಡಿ ಅಂತ ಒತ್ತಡ ಹಾಕ್ತಿದ್ದಾರೆ. ಯಾವುದಾ ಕ್ಷೇತ್ರ ಅನ್ನೋ ಕುತೂಹಲಕ್ಕೆ ಈ ಸ್ಟೋರಿ ನೋಡಿ...
Congress ಟಿಕೆಟ್ ಹಂಚಿಕೆ ವಿಚಾರದಲ್ಲಿ ಡಿಕೆಶಿ ಸಿದ್ದು ನಡುವೆ ಶೀತಲ ಸಮರ, ಕಾಂಗ್ರೆಸ್ ತಳಮಳ!
ಸತತ ಐದು ವರ್ಷಗಳ ಕಾಲ ಯಶಸ್ವಿಯಾಗಿ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದ ಸಿದ್ದರಾಮಯ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತಗಳಲ್ಲಿ ಸ್ಪರ್ಧೆ ಮಾಡಿ ಒಂದು ಕಡೆ ಸೋತು, ಮತ್ತೊಂದು ಕಡೆ ಅಲ್ಪ ಅಂತರದಲ್ಲಿ ಜಯಗಳಿಸಿದ್ರು. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಜಿ.ಟಿ ದೇವೇಗೌಡ ವಿರುದ್ಧ ಹೀನಾಯ ಸೋಲು ಕಂಡ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದಲ್ಲಿ ಅಲ್ಪ ಮತದಿಂದ ಮತ್ತೆ ಶಾಸಕರಾಗಿ ಆಯ್ಕೆ ಆಗಿದ್ರು. ಇದೆ ವಿಚಾರ ಇಂದಿಗೂ ವಿರೋಧ ಪಕ್ಷಗಳಿಗೆ ಆಹಾರವಾಗಿದ್ದು,ಅವಕಾಶ ಸಿಕ್ಕಾಗೆಲ್ಲ 5 ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ಹೀನಾಯವಾಗಿ ಸೋತಿದ್ದಾರೆ ಎಂದು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಟೀಕೆ ಮಾಡ್ತಿವೆ.ಇದೀಗ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದ್ದು ಮತ್ತೆ ಸಿದ್ದರಾಮಯ್ಯ ಕ್ಷೇತ್ರ ಬದಲಾಯಿಸುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಹೌದು.... ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಗೆದ್ದು ಮತ್ತೆ ಅಧಿಕಾರ ಇಡಿಯಬೇಕು ಅನ್ನೋ ಉದ್ದೇಶದಲ್ಲಿದೆ.ಈಗಾಗಿ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ನಿರ್ಧರಿಸುತ್ತಿದ್ದು,ಪ್ರತಿ ಕ್ಷೇತ್ರಕ್ಕೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬಿಡುಬಿಲ್ಲದೆ ಪ್ರವಾಸ ಮಾಡಬೇಕು ಅಂತ ತೀರ್ಮಾನ ಮಾಡಿಕೊಂಡಿದ್ದಾರೆ. ಈಗಾಗಿಯೇ ಕಾಂಗ್ರೆಸ್ ಗೆ ನೆಲೆ ಇರುವ ಹಾಗೂ ಸುಲಭವಾಗಿ ಗೆಲ್ಲುವ ಕ್ಷೇತ್ರದ ಮೇಲೆ ಸಿದ್ದರಾಮಯ್ಯ ಅರ್ಜಿ ಹಾಕಿ ರಾಜ್ಯ ಪ್ರವಾಸ ಮಾಡಲು ತೀರ್ಮಾನ ಮಾಡಿದ್ದಾರೆ.
ಈಗಾಗಿ ಮೊದಲಿನಿಂದಲೂ ಕಾಂಗ್ರೆಸ್ ಗೆ ನೆಲೆ ಇರುವ ಕೋಲಾರ ವಿಧಾನಸಭಾ ಕ್ಷೇತ್ರದ ಮೇಲೆ ಸಿದ್ದರಾಮಯ್ಯ ಒಂದು ಕಣ್ಣಿಟ್ಟಿದ್ದು, ಕಾರ್ಯಕರ್ತರು ಸಹ ಸಿದ್ದರಾಮಯ್ಯನವರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಇದ್ರು ಸಹ 15 ವರ್ಷಗಳಿಂದ ಸರಿಯಾದ ಅಭ್ಯರ್ಥಿ ಸಿಗದೆ ಕಾಂಗ್ರೆಸ್ ಪಕ್ಷ ಸೋಲು ಕಾಣುತ್ತ ಬಂದಿದೆ. ಇಲ್ಲಿ ಮುಸ್ಲಿಂ,ಕುರುಬರು, ದಲಿತರು ಹಾಗೂ ಒಕ್ಕಲಿಗ ಸಮುದಾಯದ ಮತದಾರರು ನಿರ್ಣಾಯಕವಾಗಿದ್ದು ಸಿದ್ದರಾಮಯ್ಯ ಆಯಾಸವಿಲ್ಲದೆ ಗೆಲುವು ಸಾಧಿಸಬಹುದು ಅನ್ನೋ ರಾಜಕೀಯ ಲೆಕ್ಕಾಚಾರ.
ಪ್ರತಿ ಬಾರಿಯೂ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡುತ್ತಾ ಬರಲಾಗಿದ್ದು,ಮುಸ್ಲಿಂ ಮತಗಳು ಛಿದ್ರಗೊಂಡು ಇದರ ಲಾಭವನ್ನು ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ಪಡೆದು ಶಾಸಕರಾಗುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಒಂದು ವೇಳೆ ಇಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರೆ ಮತಗಳು ಛಿದ್ರಗೊಳ್ಳದೆ, ಕನಿಷ್ಠ 80 ಸಾವಿರ ಮತಗಳ ಅಂತರದಲ್ಲಿ ಜಯಗಳಿಸುತೀರ ಎಂದು ಸಿದ್ದರಾಮಯ್ಯನವರಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ಮನವೊಲಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.ಇದಕ್ಕೆ ಸಿದ್ದರಾಮಯ್ಯ ಸಹ ನೋಡೋಣ ಅಂತ ಕೋಲಾರ ವಿಧಾನಸಭಾ ಕ್ಷೇತ್ರದ ಮೇಲೆ ಒಂದು ಕಣ್ಣಿಟ್ಟಿದ್ದಾರೆ.
ಒಟ್ನಲ್ಲಿ ಒಂದು ವೇಳೆ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರೆ,ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಗೆಲುವು ಶತಸಿದ್ದ,ಎದುರಾಳಿ ಅಭ್ಯರ್ಥಿಗಳು ಎಷ್ಟೇ ಹಣ ಖರ್ಚು ಮಾಡಿದ್ರು ಗೆಲ್ಲೋದಿಲ್ಲ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆ ಶುರುವಾಗಿದೆ. ನಿಜಕ್ಕೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡ್ತಾರಾ ಅನ್ನೋದನ್ನು ಅವರೇ ಸ್ಪಷ್ಟಪಡಿಸಬೇಕಾಗಿದೆ.