* ಕಾಂಗ್ರೆಸ್ ವಿರುದ್ದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಭಟ್ ಕಿಡಿ
* ಇಟಲಿ ಹೆಂಗಸಿನ ಪಾದ ತೊಳೆದು ತೀರ್ಥ ಅಂತ ಕುಡಿತಾರಲ್ವಾ?
* ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಲ್ಲಡ್ಕ ಭಟ್ ತಿರುಗೇಟು
ಮಂಗಳೂರು, (ಮೇ.30): ಆರ್ ಎಸ್ ಎಸ್ ಸಂಘಟನೆ ನಪುಂಸಕ ಎಂಬ ಕಾಂಗ್ರೆಸ್ ಹೇಳಿಕೆ ವಿರುದ್ದ ಆರ್‌ಎಸ್‌ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ್ ಕೆಂಡಾಮಂಡಲರಾಗಿದ್ದು, ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಇಂದು(ಸೋಮವಾರ) ಕಲ್ಕಡ್ಕದಲ್ಲಿ ಮಾತನಾಡಿದ ಕಲ್ಕಡ್ಕ ಪ್ರಭಾಕರ್ ಭಟ್, ಕಳೆದ 97 ವರ್ಷಗಳಿಂದ ಕ್ಕೋಸ್ಕರ ಬದುಕುತ್ತಿರುವ ಏಕೈಕ ಸಂಘಟನೆ ಆರ್ ಎಸ್ ಎಸ್. ದೇಶದ್ರೋಹಿ, ನಪುಂಸಕ ಅಂತ ಹೇಳೋಕೆ ಅರ್ಥ ಬೇಕಲ್ಲ. ನಾಲಗೆ ಇದೆ ಅಂತ ಒಟ್ಟಾರೆ ಹೇಳಿಕೊಂಡು ಹೋದ್ರೆ ಆಗುತ್ತಾ? ದೇಶದ ಕೆಲಸ ಮಾಡುತ್ತ ದಿನನಿತ್ಯ ಭಾರತ್ ಮಾತಾ ಕೀ ಜೈ ಹೇಳೋದು ನಾವು ಮಾತ್ರ. ಇವರೆಲ್ಲಾ ಈಗ ಎಲ್ಲಿ ಭಾರತ್ ಮಾತಾ ಕೀ ಜೈ ಹೇಳ್ತಾರೆ? ಇಟಲಿಯಿಂದ ಬಂದವರಿಗೋ ಅಥವಾ ಇನ್ಯಾರಿಗೋ ಜೈ ಹೇಳ್ತಾರೆ, ಭಾರತ್ ಮಾತಾ ಕೀ ಜೈ ಹೇಳೋದು ನಾವು ಮಾತ್ರ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ದೇಶ ವಿಭಜನೆ ಮಾಡಿದ್ದು ಆರ್ ಎಸ್ ಎಸ್, ವಿಎಚ್ ಪಿ ಅಲ್ಲ. ಇದೇ ನೆಹರೂ, ಗಾಂಧೀಜಿ ಒಪ್ಪಿಗೆ ಕೊಟ್ಟು ದೇಶ ವಿಭಜನೆ ಆಗಿದ್ದು. ದೇಶ ವಿಭಜನೆ ಇವತ್ತು ನಮಗೆ ನಿತ್ಯ ಆತಂಕ ತಂದಿಟ್ಟಿದೆ. ಹೊರಗಿನಿಂದ ಆಕ್ರಮಣ, ಒಳಗೆ ಪಾಕಿಸ್ತಾನ್ ಜಿಂದಾಬಾದ್. ಇದಕ್ಕೆ ಕಾರಣ ಕಾಂಗ್ರೆಸ್ ಅನ್ನೋದನ್ನ ಅವರು ಒಪ್ಪಲಿ. ಚೀನಾ ಆಕ್ರಮಣ ಮಾಡಿದಾಗ ನೆಹರೂ ಮಾತನಾಡಲಿಲ್ಲ, ಆಗ ಸಂಘದ ಹಿರಿಯರಾದ ಗುರೂಜಿ ಅವರಿಗೆ ಎಚ್ಚರಿಕೆ ಕೊಟ್ಟರು ಎಂದರು.
'ಸರಳ ಪ್ರಶ್ನೆಗೆ RSSನಲ್ಲಿ ಉತ್ತರ ಇಲ್ಲ ಎನ್ನುವುದೇ ಈ ಸಂಘಟನೆಯ ಡೋಂಗಿತನಕ್ಕೆ ಸಾಕ್ಷಿ'
ಹೆಡ್ಗೆವಾರ್ ಇವರಿಗೆ ಸಮಸ್ಯೆ ಆಗಿದೆ, ಅದು ದೊಡ್ಡ ವಿಷಯ ಆಗಿದೆ. ನೆಹರೂ, ಗಾಂಧೀಜಿ, ಇಂದಿರಾ ಬಗ್ಗೆ ಬಂದಾಗ ಅದನ್ನ ಓದಿದವ್ರು ಕಾಂಗ್ರೆಸ್ ಆದ್ರೆ ಹೆಡ್ಗೆವಾರ್ ಹೇಳಿದ ವ್ಯಕ್ತಿಪೂಜೆ ಮಾಡಬೇಡಿ ಅನ್ನೋದು ಸತ್ಯ.ಅದನ್ನ ಓದಿದ್ರೆ ಆರ್ ಎಸ್ ಎಸ್ ಆಗೋದಾದ್ರೆ ನೆಹರೂ ಓದಿದ್ರೆ ಕಾಂಗ್ರೆಸ್ ಆಗ್ತಾರಾ? ಒಂದು ಕಡೆ ನಾವು ಗಲಾಟೆ ಮಾಡ್ತೀವಿ ಅಂತಾರೆ, ಮತ್ತೊಂದೆಡೆ ನಪುಂಸಕ ಅಂತಾರೆ. ಇಟಲಿಯ ಹೆಂಗಸಿನ ಪಾದಪೂಜೆ ಮಾಡಿ ಅದರ ನೀರನ್ನ ತೀರ್ಥ ಅಂತ ಕುಡಿತಾರಲ್ಲ ಮಾರ್ರೆ. ಅಂಥದ್ದನ್ನ ಪೂಜೆ ಮಾಡೋರು ನಪುಂಸಕರಾ? ಅಥವಾ ದೇಶವನ್ನು ಪೂಜಿಸೋರಾ? ಎಂದು ಪ್ರಶ್ನಿಸಿದರು.
ಈವರೆಗಿನ ಪಠ್ಯದಲ್ಲಿ ಘೋರಿ ಮಹಮ್ಮದ್, ಘಜ್ನಿ ಮಹಮ್ಮದ್, ಬಾಬರ್ ಬಗ್ಗೆ ಇತ್ತು. ನೀವು ಯೇಸು, ಪೈಗಂಬರ್ ಕೊಡಿ, ಆದ್ರೆ ಮೊದಲು ರಾಮ, ಕೃಷ್ಣರ ಬಗ್ಗೆ ಕೊಡಬೇಕಲ್ಬಾ? ಮಳಲಿ ಮಸೀದಿ ಇಷ್ಟು ಸಮಯದಿಂದ ನಮಗೆ ಗೊತ್ತಾಗದ್ದೇ ಆಶ್ಚರ್ಯ. ಇಲ್ಲಿನ ಮುಸ್ಲಿಮರು ಮತ್ತು ಕ್ರೈಸ್ತರು ಹಿಂದಿನವರ ಜೊತೆ ಅವರನ್ನ ಜೋಡಿಸಿಕೊಳ್ಳಬಾರದು. ಇವರೆಲ್ಲಾ ಭಾರತೀಯರೇ, ಯಾವುದೋ ಕಾರಣಕ್ಕೆ ಇಸ್ಲಾಂ ಪೂಜಿಸಿ ಅಲ್ಲಾನನ್ನ ಪ್ರಾರ್ಥಿಸ್ತಾರೆ. ಈ ಬಗ್ಗೆ ನಮ್ಮ ಯಾವುದೇ ಅಭಿಪ್ರಾಯ ವ್ಯತ್ಯಾಸಗಳು ಇಲ್ಲ ಎಂದು ತಿಳಿಸಿದರು.