* ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕಿವಿ ಮಾತು ಹೇಳಿದ ರೇಣುಕಾಚಾರ್ಯ
* ಸರ್ಕಾರ ಹಾಗೂ ಸಂಘಟನೆ ವಿರುದ್ಧ ಮಾತನಾಡುವುದನ್ನು ಬಿಡಿ ಯತ್ನಾಳ್
* ಕ್ಷದ ನಾಲ್ಕು ಗೋಡೆ ನಡುವೆ ಮಾತನಾಡಬೇಕು ಎಂದು ಯತ್ನಾಳ್‌ಗೆ ಕಿವಿ ಮಾತು
ದಾವಣಗೆರೆ, (ಮೇ.30) ಯತ್ನಾಳ್ ಏನ್ ಹೇಳಿದ್ದಾರೋ ನನಗೆ ಮಾಹಿತಿ ಇಲ್ಲ. ಬಿಜೆಪಿಯ ಯಾವುದೇ ನಾಯಕರು ಆರೋಪ ಮಾಡುತ್ತಿರುವುದು ಉರುಳಿಲ್ಲ. ನಮ್ಮ ಎಲ್ಲಾ ನಾಯಕರು ಮಂತ್ರಿಗಳು ಉತ್ತಮವಾದ ಆಡಳಿತ ಕೊಡುತ್ತಿದ್ದಾರೆ. ಈ ರೀತಿ ಪಕ್ಷದ ವಿರುದ್ದ ಮಾತನಾಡುವುದು ಸರಿಯಲ್ಲ ಏನೇ ಇದ್ದರೂ ಪಕ್ಷದ ನಾಲ್ಕು ಗೋಡೆ ನಡುವೆ ಮಾತನಾಡಬೇಕು ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಯತ್ನಾಳ್ ಗೆ ಕಿವಿ ಮಾತು ಹೇಳಿದ್ದಾರೆ.
ಇಂದು(ಸೋಮವಾರ) ಹೊನ್ನಾಳಿಯಲ್ಲಿ ಮಾತನಾಡಿದ ರೇಣುಕಾಚಾರ್ಯ ಈ ಹಿಂದೆ ಕೂಡ ಯತ್ನಾಳ್ ಪಕ್ಷದ ವಿರುದ್ದ ಮಾತನಾಡಿಲ್ಲ. 2500 ಕೋಟಿನೀಡಿದರೆ ಸಿಎಂ ಸ್ಥಾನ ಸಿಗುತ್ತೆ ಎಂದು ಬ್ರೋಕರ್ಸ್ ಗಳು ಹೇಳಿದ್ದಾರೆ ಎಂದು ಹೇಳಿದ್ದಾರೆ ಅಷ್ಟೇ. ನನಗೂ ಕೂಡ ಹಲವು ಬ್ರೋಕರ್ಸ್ ಗಳು ಬಂದು ಹಣ ನೀಡಿ ನಿಮ್ಮನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ಹೇಳಿದ್ದು,. ನನಗೆ ಅವರು ಗೊತ್ತು ಇವರು ಗೊತ್ತು ಎಂದು ಹೇಳಿಕೊಂಡು ಬಂದಿದ್ದರು. ಆದರೆ ಬಿಜೆಪಿಯಲ್ಲಿ ಸಚಿವ ಸ್ಥಾನ ಮಾರಾಟಕ್ಕೆ ಇಲ್ಲ ಎಂದು ಹೇಳಿ ಛೀಮಾರಿ ಹಾಕಿ ಕಳಿಸಿದ್ದೆ ಎಂದರು.
'ಸರಳ ಪ್ರಶ್ನೆಗೆ RSSನಲ್ಲಿ ಉತ್ತರ ಇಲ್ಲ ಎನ್ನುವುದೇ ಈ ಸಂಘಟನೆಯ ಡೋಂಗಿತನಕ್ಕೆ ಸಾಕ್ಷಿ'
ಕಾಂಗ್ರೆಸ್ ನಲ್ಲಿ ಹಣ ಕೊಟ್ಟು ಬಿ ಪಾರ್ಮ್, ಸಚಿವ ಸ್ಥಾನ ಖರೀದಿ ಮಾಡುತ್ತಾರೆ. ನಮ್ಮ ಬಿಜೆಪಿ ಪಕ್ಷದಲ್ಲಿ ಯಾವುದೇ ಅವಕಾಶ ಇಲ್ಲ ಸಾಮಾನ್ಯ ಕಾರ್ಯಕರ್ತರನ್ನು ಬಿಜೆಪಿ ಪಕ್ಷ ಬೆಳೆಸುತ್ತದೆ ಮಧ್ಯ ವರ್ತಿಗಳು ಬಂದು ಕೇಳಿದ್ದಾರೆ, ಅವರನ್ನು ಒದ್ದು ಜೈಲಿಗೆ ಹಾಕುಸ್ತಿನಿ ಎಂದು ಹೇಳಿ ಕಳಿಸಿದ್ದೇ. ಜೈಲಿಗೆ ಹೋದ ಯುವರಾಜ್ ನನ್ನ ಧರ್ಮಪತ್ನಿಗೆ ಕಾಲ್ ಮಾಡಿ ನಿಮ್ಮ ಮನೆಯವರಿಗೆ ಸಚಿವ ಸ್ಥಾನ ಎಂದು ಹೇಳಿದ್ದ. ಮೋದಿ ಅಮಿತ್ ಶಾ ಜೊತೆ ಪೋಟೋ ಹೊಡೆಸಿಕೊಳ್ಳುವುದು ನನಗೆ ಅವರು ಗೊತ್ತು ಎಂದು ಹೇಳಿಕೊಳ್ಳುತ್ತಾರೆ ಬಿಜೆಪಿ ಅಲ್ಲದವರು ಈ ರೀತಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ನಪಂಸಕ ಎಂಬ ಕಾಂಗ್ರೆಸ್ ಹೇಳಿಕೆಗೆ ರೇಣುಕಾ ಕಿಡಿ
ಯಾರು ಆರ್ ಎಸ್ ಎಸ್ ನ ನಪಂಸಕ ಎಂದು ಹೇಳ್ತಾರೋ ಅವರೇ ನಪಂಸಕರು ದೇಶದ್ರೋಹಿಗಳು. ಆರ್ ಎಸ್ಎಸ್ ನವರು ಭಾರತ್ ಮಾತಾಕಿ ಜೈ ಅಂತಾರೆ. ರಾಷ್ಟ್ರೀಯ ವಿಕೋಪದಂತಹ ಸಂದರ್ಭದಲ್ಲಿ ಅನ್ನ ಆಹಾರ ಕೊಟ್ಟು ಕೆಲಸ ಮಾಡಿದ್ದಾರೆ.. ಗೋ ಮಾತೆಯನ್ನು ಪೂಜೆ ಮಾಡುತ್ತೇವೆ.. ಅದು ತಾಯಿ ಸಮಾನ ಅಂತಹುಗಳನ್ನ ಕಡಿಯಲು ಕಾಂಗ್ರೆಸ್ ಸಹಕೊಡುತ್ತೇ. ಆದರೆ ಕಾಂಗ್ರೆಸ್ ನವರು ಭಯೋತ್ಪಾದರಿಗೆ ಉಗ್ರಗಾಮಿಗಳನ್ನು ಬಳಸಿಕೊಂಡು ಪಾಕಿಸ್ತಾನಕ್ಕೆ ಜೈ ಅಂತಾರೆ. ಟಿಪ್ಪು ಜಯಂತಿ ಆಚರಣೆ ಮಾಡುತ್ತಾರೆ ಅವರು ರಾಷ್ಟ್ರ ಪ್ರೇಮಿಗಳೋ ಇಲ್ಲ ಬಿಜೆಪಿ ಆರ್ ಎಸ್ ಎಸ್ ರಾಷ್ಟ್ರ ಪ್ರೇಮಿಗಳೋ ಎಂದು ರಾಜ್ಯದ ಜನತೆಗೆ ಗೊತ್ತಿದೆ ಎಂದು ತಿಳಿಸಿದರು.
ಹಿಜಾಬ್ ಭುಗಿಲೇಳಲು ಕಾರಣ ಕಾಂಗ್ರೆಸ್. ಕೋರ್ಟ್ ತೀರ್ಪು ನೀಡಿದರೂ ರಾಜ್ಯ ಬಂದ್ ಗೆ ಕರೆ ಕೊಡ್ತಾರೆ. ಮತಾಂದ ಟಿಪ್ಪು ಜಯಂತಿ ಆಚರಣೆ ಮಾಡಿ ಐದಾರು ಹಿಂದುಗಳ ಹತ್ಯೆ ಆಯ್ತು ಶಿವಮೊಗ್ಗ ದಲ್ಲಿ ಹರ್ಷನ ಕೊಲೆ ಆಯ್ತು ಇದಕ್ಕೆಲ್ಲ ಕಾರಣ ಕಾಂಗ್ರೆಸ್, ಬಿಜೆಪಿ ಬಗ್ಗೆ ಮಾತನಾಡಲು ಕಾಂಗ್ರೇಸ್ ಗೆ ನೈತಿಕ ಹಕ್ಕು ಇಲ್ಲ.. ಗೋವು ತಾಯಿ ಸಮಾನ, ಅಂತಹ ಗೋವು ಗಳನ್ನು ಕಡಿಯುವವರಿಗೆ ಬೆಂಬಲ ನೀಡಿದ ಇವರು ದೇಶದ್ರೋಹಿಗಳು. ಆರ್ ಎಸ್ ಎಸ್ ನ ಯಾರು ಟೀಕೆ ಮಾಡ್ತಾರೋ ಅವರು ದೇಶದ್ರೋಹಿ ಗಳು ಎಂದು ಕಿಡಿಕಾರಿದರು.
ಯಡಿಯೂರಪ್ಪ ಎಲ್ಲೇ ಇದ್ರು ಹುಲಿನೇ..
ಯಡಿಯೂರಪ್ಪನವರು ಎಲ್ಲಿ ಇದ್ರು ಹುಲಿನೇ ಎಂದು ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಯಡಿಯೂರಪ್ಪ ಯೂಸ್ ಅಂಡ್ ಥ್ರೋ ಅಲ್ಲ. ಅವರ ಶಕ್ತಿ ಸಾಮರ್ಥ್ಯ ವನ್ನು ಬಳಸಿಕೊಂಡು ಪಕ್ಷ ಮುನ್ನಡೆಯುತ್ತದೆ. ಅವರ ಶಕ್ತಿಯನ್ನು ಬಳಸಿಕೊಳ್ಳುವುದಾಗಿ ನಮ್ಮ ರಾಷ್ಟ್ರೀಯ ನಾಯಕರು ಹೇಳಿದ್ದಾರೆ.. ಅವರ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆ ಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರ ವಿರುದ್ಧ ಹಗುರವಾಗಿ ಮಾತನಾಡುವುದು ಸಲ್ಲದು ಎಂದರು.