ಐಟಿ ದಾಳಿ ಬೆನ್ನಲ್ಲೇ ಖರ್ಗೆ ಪತ್ರಿಕಾಗೋಷ್ಠಿ, ಕಾಂಗ್ರೆಸ್ ಸೇರಿ ಎರಡೇ ವಾರಕ್ಕೆ ಚವ್ಹಾಣ್‌ ಅಕ್ರಮ ಆಸ್ತಿ ಮಾಡಿದ್ರಾ?

By Gowthami K  |  First Published May 7, 2023, 12:30 PM IST

ಆಪ್ತನ ಮೇಲೆ ಐಟಿ ದಾಳಿ ಬೆನ್ನಲ್ಲೇ ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಪ್ರಿಯಾಂಕ ಖರ್ಗೆ ಸುದ್ದಿಗೋಷ್ಟಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಕಲಬುರಗಿ (ಮೇ.7): ಆಪ್ತನ ಮೇಲೆ ಐಟಿ ದಾಳಿ ಬೆನ್ನಲ್ಲೇ ಕಲಬುರಗಿ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಪ್ರಿಯಾಂಕ ಖರ್ಗೆ ಸುದ್ದಿಗೋಷ್ಟಿ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡ ಅರವಿಂದ್ ಚವ್ಹಾಣ್‌ ಮನೆ, ಹೊಟೆಲ್, ಕ್ರಷರ್ ಮೇಲೆ ಐಟಿ ದಾಳಿ ವಿಚಾರವಾಗಿ ಮಾತನಾಡಿರುವ ಅವರು ಕಲಬುರಗಿ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಬಿಜೆಪಿ ಸೋಲುತ್ತಿದೆ. ಜಗಳ ಹಚ್ಚಿ, ವೈಯಕ್ತಿಕ ನಿಂದನೆ ಮಾಡೋದನ್ನು ಬಿಜೆಪಿ ಅವರು ಮಾಡುತ್ತಾ ಬಂದಿದ್ದಾರೆ. ಚುನಾವಣೆಯಲ್ಲಿ ಸೋಲುತ್ತೇವೆ  ಎಂದು ಗೊತ್ತಾದ್ರೆ ಹೆದರಿಸೋದು, ಬೆದರಿಸೋದು ಮಾಡುತ್ತಾರೆ. ಸೋಲುತ್ತಿದ್ದ ಬಿಜೆಪಿ ಅವರು ಈ ರೀತಿ ಸರ್ಕಾರಿ ಏಜನ್ಸಿಗಳನ್ನು ದುರ್ಬಳಕೆ ಮಾಡುತ್ತಾರೆ. ಈಗ ಐಟಿ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರವಿಂದ್ ಚವ್ಹಾಣ್‌ ಅವರ ಮನೆ, ಹೊಟೇಲ್, ಕ್ರಷರ್ ಮೇಲೆ ರೇಡ್ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ನೋಡಿದ್ರೆ ವಿರೋಧ ಪಕ್ಷದವರು ಬಿಜೆಪಿ ಪಕ್ಷ ಸೇರಿದ್ರೆ ವೈಟ್ ವಾಷ್ ಆಗ್ತಾರೆ. ಆದ್ರೆ ವಿರೋಧ ಪಕ್ಷದಲ್ಲಿದ್ದಾಗ ಟಾರ್ಗೆಟ್ ಮಾಡ್ತಾರೆ. ಅರವಿಂದ ಚವ್ಹಾಣ್‌ ಅವರು ಬಿಜೆಪಿ ಬಿಟ್ಟು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಂದು ಎರಡು ವಾರ ಆಯ್ತು. ಎರಡೇ ವಾರದಲ್ಲಿ ಅರವಿಂದ್ ಚವ್ಹಾಣ್ ಅಕ್ರಮ ಮಾಡಿದ್ರಾ, ಅಕ್ರಮ ಆಸ್ತಿಗಳಿಸಿದ್ರಾ ? ಕಾಂಗ್ರೆಸ್ ನಲ್ಲಿ ಫುಲ್ ಆಕ್ಟಿವ್ ಆದ್ರೆ ಐಟಿ, ಇಡಿ ರೇಡ್ ಮಾಡ್ತಿವಿ ಅಂತಾ ಅರವಿಂದ್ ಅವರಿಗೆ ಈಗಾಗಲೇ ಸಂದೇಶ ಕೊಟ್ಟಿದ್ದಾರೆ. ಈ ರೀತಿ ಏನೇ ಬಿಜೆಪಿ ಮಾಡಿದ್ರು ನಾವು ಹೆದರುವುದಿಲ್ಲ.

Latest Videos

undefined

ಕಾಂಗ್ರೆಸ್ ಮುಖಂಡರ ವಿರುದ್ಧ ನಿಲ್ಲದ ಐಟಿ ದಾಳಿ, ಖರ್ಗೆ ಆಪ್ತ ಸೇರಿ ಹಲವು ಮುಖಂಡರಿಗೆ ಐಟಿ ಶಾಕ್!

ಕೆಕೆಆರ್ ಡಿಬಿ ಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತಾ ನಿಮ್ಮ ಸರ್ಕಾರವೇ ವರದಿ ತಯಾರು ಮಾಡಿದೆ. ಬಿಜೆಪಿ ಅವರು ಪ್ರಾಮಾಣಿಕರಾಗಿದ್ರೆ, ಆದರೂ ಕೆಕೆಆರ್ ಡಿ ಬಿ ಅಧ್ಯಕ್ಷರ ಅವರ ಮನೆ ಮೇಲೆ ಯಾಕೆ ರೇಡ್ ಮಾಡಿಲ್ಲ. ಚಿಂಚೋಳಿ ಕ್ಷೇತ್ರದಲ್ಲಿ ಒಂದೇ ರಸ್ತೆ ಮೇಲೆ ಕೊಟ್ಯಾಂತರ ರೂಪಾಯಿ ಎತ್ತಿ ಹಾಕಿದ್ರು ಅವರ ಮೇಲೆ ಯಾಕೆ ರೇಡ್ ಆಗಲಿಲ್ಲ. ಸ್ಪಷ್ಟವಾಗಿ ಎದ್ದು ಕಾಣುತ್ತಿದೆ, ಕಾಂಗ್ರೆಸ್ ಗೆಲ್ಲುತ್ತಿರೋದ್ರಿಂದ ಬಿಜೆಪಿ ಅವರು ಹಾತಾಶರಾಗಿ ಈ ರೀತಿ ಮಾಡ್ತಿದ್ದಾರೆ. ನೀವು ಏನೇ ಮಾಡಿದ್ರು, ಹೆದರಿಸಿದ್ರು, ಬೆದರಿಸಿದ್ರು ನಾವು ಹೆದರೋದಿಲ್ಲ. ಈ ಬಾರಿ ಕಲಬುರಗಿ ಜಿಲ್ಲೆಯಲ್ಲಿ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಕಲಬುರಗಿ ಕೋಟೆ ಮೇಲೆ ಈ ಬಾರಿಯೂ ಕಾಂಗ್ರೆಸ್ ಬಾವುಟ ಹಾರಲಿದೆ ಎಂದಿದ್ದಾರೆ.

Karnataka It Raids: ಆಪ್ತ ಫೈನಾನ್ಶಿರ್​​ಗಳಿಗೆ ಸಂಕಷ್ಟ, ಬಿಜೆಪಿ ವಿರುದ್ಧ ಡಿಕೆಶಿ ಕೆಂಡ!

ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಬೆಂಬಲಿಗನ ಮೇಲೆ ಐಟಿ ದಾಳಿ ನಡೆದಿದ್ದು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚವ್ಹಾಣ್‌ ಮನೆ ಮೇಲೆ ಐಟಿ ದಾಳಿ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಬಿಟ್ಟು ಅರವಿಂದ್ ಚವ್ಹಾಣ್‌ ಕಾಂಗ್ರೆಸ್ ಸೇರಿದ್ದ. ಮೇ.6ರಂದು  ಸಾಯಂಕಾಲ ಮನೆ, ಹೋಟೆಲ್, ಸ್ಟೋನ್ ಕ್ರಷರ್ ಮೇಲೆ ಐಟಿ  ಅಧಿಕಾರಿಗಳ ದಾಳಿ  ನಡೆದಿದೆ. ರಾತ್ರಿ 11 ಗಂಟೆವರಗೆ ಪರಿಶೀಲನೆ ನಡೆಸಿ  ಐಟಿ  ಅಧಿಕಾರಿಗಳು ತೆರಳಿದ್ದಾರೆ. ಎಲ್ಲ ಕಡೆ ದಾಖಲಾತಿ ಗಳ ಪರಿಶೀಲನೆ ನಡೆಸಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

BJP has reached the last stage of their Election Standard Operating Procedure.

They have deployed IT agencies to intimidate our leaders to submission. They have raided our Dist. Minority President Sh. Wajid Ali & Sh. Arvind Chavan’s house & offices.
BJP is losing state for sure.

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge)
click me!