
ಹಾವೇರಿ (ಮೇ.7) : ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮೋದಿ, ಭಜರಂಗಬಲಿ ಘೋಷಣೆ ಮುಗಿಲು ಮುಟ್ಟಿದ್ದವು. ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಮೋದಿ.. ಮೋದಿ... ಜೈ ಬಜರಂಗಬಲೀ.. ಬಜರಂಗಬಲೀ.. ಎಂಬ ಘೋಷಣೆ ಮೊಳಗಿದವು.
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಸಂಜೆ 5.10ಕ್ಕೆ ವೇದಿಕೆ ಆಗಮಿಸುತ್ತಿದ್ದಂತೆ ಮೋದಿ.. ಮೋದಿ.. ಕೂಗು ಮೊಳಗಿತು. ಮಾತು ಆರಂಭಿಸಿದ ಮೋದಿ, ಭಾರತ್ ಮಾತಾ ಕಿ, ಬಜರಂಗಬಲಿ ಕೀ ಎಂದು ತಲಾ ಮೂರು ಬಾರಿ ಹೇಳಿದಾಗ ಜನರಿಂದ ಒಮ್ಮೆಲೇ ಜೈಘೋಷ ಕೇಳಿಬಂದವು.
ಬ್ಯಾಡಗಿಯಲ್ಲಿ ಬಿಜೆಪಿ- ಕಾಂಗ್ರೆಸ್ ಭರ್ಜರಿ ಕಾಳಗ
ಬಳಿಕ ಸರ್ವಜ್ಞ ಮತ್ತು ಕನಕದಾಸರ ನಾಡು ಹಾವೇರಿ ಜನತೆಗೆ ನನ್ನ ನಮಸ್ಕಾರಗಳು. ಹಾವೇರಿ ಜಿಲ್ಲೆ ಭಕ್ತ ಕನಕದಾಸರ ಜನ್ಮಸ್ಥಳ. ಭಕ್ತಿಯ ಮೂಲಕ ಸಾಮಾಜಿಕ ಸದ್ಭಾವನೆಗೆ ಭಕ್ತ ಕನಕದಾಸರು ಶ್ರಮಿಸಿದ್ದರು. ನಾವೂ ಅದೇ ಹಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಇಷ್ಟುದೊಡ್ಡ ಸಂಖ್ಯೆಯಲ್ಲಿ ಬಂದಿರುವುದಕ್ಕೆ ನಿಮಗೆ ಹೃದಯಪೂರ್ವಕ ನಮನ ತಿಳಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಡಬಲ್ ಎಂಜಿನ್ ಸರ್ಕಾರ ಮೂರೂವರೆ ವರ್ಷ ಉತ್ತಮ ಕೆಲಸ ಮಾಡಿದೆ. ಹಾವೇರಿ ವಿಕಾಸದ ಹಾದಿಯಲ್ಲಿ ಡಬಲ್ ಎಂಜಿನ್ ಸರ್ಕಾರ ಮೆಡಿಕಲ್ ಕಾಲೇಜ್, ಎಂಜಿನಿಯರಿಂಗ್ ಕಾಲೇಜ್, ವಿಶ್ವÜವಿದ್ಯಾಲಯ, ಮೆಗಾ ಡೇರಿ, ರಸ್ತೆ-ರೈಲು ಸಂಪರ್ಕದ ಕೆಲಸ ಮಾಡಿದೆ. ಚಿತ್ರದುರ್ಗ-ದಾವಣಗೆರೆ ನಡುವೆ ಆರು ಪಥದ ಹೆದ್ದಾರಿ ನಿರ್ಮಿಸಿದೆ. ವಿಕಾಸದ ಈ ಕಾರ್ಯವನ್ನು ಕಾಂಗ್ರೆಸ್ ಸಹ ಮಾಡಬಹುದಿತ್ತು. ಆದರೆ ಅವರು ಏನೂ ಮಾಡಲಿಲ್ಲ ಎಂದು ಟೀಕಿಸಿದರು.
ಗೊಬ್ಬರದಲ್ಲೂ ಲೂಟಿ:
ಕಾಂಗ್ರೆಸ್‌ನ ಶೇ. 85 ಸರ್ಕಾರ ರೈತರ ಯೂರಿಯಾ ಗೊಬ್ಬರದ ಹೆಸರಲ್ಲೂ ಲೂಟಿ ಮಾಡಿದೆ. ರೈತರ ಹೆಸರಿನಲ್ಲಿ ಲೂಟಿ ಹೊಡೆಯಿತು. ಬಿಜೆಪಿ ಸರ್ಕಾರ ಇದನ್ನೆಲ್ಲ ತಪ್ಪಿಸುವ ಕೆಲಸ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಯೂರಿಯಾ ಬೆಲೆ . 50 ಇದೆ. ಅದನ್ನು ನಾವು ರೈತರಿಗೆ . 5ಕ್ಕೆ ಕೊಡುತ್ತಿದ್ದೇವೆ. ಇದಕ್ಕಾಗಿ ಪ್ರತಿವರ್ಷ . 2 ಲಕ್ಷ ಕೋಟಿ ಖರ್ಚು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ . 450 ಕೋಟಿಗೂ ಅಧಿಕ ಹಣ ಹಾವೇರಿ ಜಿಲ್ಲೆಯ ರೈತರಿಗೆ ಬರುತ್ತಿದೆ ಎಂದು ಮೋದಿ ಹೇಳಿದರು.
ಮನೆಗೆ ಹೋಗಿ ಹೇಳಿ:
ನನ್ನ ವೈಯಕ್ತಿಕ ಕೆಲಸ ಇದೆ. ಎಲ್ಲರೂ ಮಾಡ್ತಿರಾ ಎಂದು ಕೇಳಿದ ಮೋದಿ, ಎಲ್ಲರೂ ಮೊಬೈಲ್ ಟಾಚ್‌ರ್ ಹಚ್ಚುವಂತೆ ಕೋರಿದರು. ಎಲ್ಲರೂ ಮನೆ-ಮನೆಗೆ ಹೋಗಿ ಮೋದಿಜಿ ಹಾವೇರಿಗೆ ಬಂದಿದ್ದರು. ನಿಮಗೆ ನಮಸ್ಕಾರ ಹೇಳಿದ್ದಾರೆ ಅಂತಾ ಎಲ್ಲೆಡೆ ಹೇಳಿ ನನಗೆ ಆಶೀರ್ವಾದ ಮಾಡಿಸಿ. ನೀವು ಆಶೀರ್ವಾದ ಮಾಡಿದರೆ ನನಗೆ ಶಕ್ತಿ ಬರುತ್ತೆ. ನಾನು 24ಗಂಟೆ ಕೆಲಸ ಮಾಡುತ್ತೇನೆ ಎಂದು ಮೋದಿ ಮನವಿ ಮಾಡಿದರು.
ಬಜರಂಗಬಲೀ ಘೋಷಣೆ:
ಕಾರ್ಯಕ್ರಮದುದ್ದಕ್ಕೂ ಭಾರತ್ ಮಾತಾ ಕೀ ಜೈ, ನರೇಂದ್ರ ಮೋದಿ ಕೀ ಜೈ, ಭಜರಂಗಬಲೀ ಕೀ ಜೈ ಎಂದು ಕಾರ್ಯಕರ್ತರು ಘೋಷಣೆಗಳನ್ನು ಮೊಳಗಿಸಿದರು. ಮೋದಿ, ಯಡಿಯೂರಪ್ಪನವರ ಭಾವಚಿತ್ರ ಹಾಗೂ ಬಿಜೆಪಿಯ ಬಾವುಟಗಳು ರಾರಾಜಿಸಿದವು.ಲಕ್ಷಾಂತರ ಕಾರ್ಯಕರ್ತರು ಒಂದೆಡೆ ಸೇರಿ ಜಿಲ್ಲೆಯ ಎಲ್ಲ ಬಿಜೆಪಿ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಜಾರಕಿಹೊಳಿ ಸಾಹೇಬ್ರು ಜನರ ಕೈಗೆ ಸಿಗುವುದು ವಿರಳ : ಅಮಿತ್ ಶಾ ಲೇವಡಿ
ಕಂಬಳಿ ಹೊದಿಸಿ ಸನ್ಮಾನ:
ಪ್ರಧಾನಿ ಮೋದಿ ಅವರಿಗೆ ಕಂಬಳಿ ಹೊದಿಸಿ, ಏಲಕ್ಕಿ ಹಾರ, ರುದ್ರಾಕ್ಷಿ ಮಾಲೆ ಮತ್ತು ಪೇಟ ತೊಡಿಸಿ, ಜಗಜ್ಯೋತಿ ಬಸವಣ್ಣನ ಮೂರ್ತಿ ಮತ್ತು ಹನುಮಾನ್ ಚಾಲೀಸಾ ಪುಸ್ತಕ ಕೊಟ್ಟು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.