ರಾಜ್ಯ ರಾಜಕಾರಣದಲ್ಲಿ ಅತ್ಯಂತ ಭ್ರಷ್ಟ ಶಾಸಕನಿದ್ದರೆ ಅದು ಕುಮಾರ ಬಂಗಾರಪ್ಪ. ಜನರ ವಿಶ್ವಾಸ ಗಳಿಸಲು ವಿಫಲರಾಗಿರುವ ಅವರು ಕಮಿಷನ್ ಹಣಕ್ಕಾಗಿಯೇ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಮ್ಮ ಸಹೋದರನ ವಿರುದ್ಧ ಹರಿಹಾಯ್ದರು.
ಸೊರಬ (ಫೆ.14): ರಾಜ್ಯ ರಾಜಕಾರಣದಲ್ಲಿ ಅತ್ಯಂತ ಭ್ರಷ್ಟ ಶಾಸಕನಿದ್ದರೆ ಅದು ಕುಮಾರ ಬಂಗಾರಪ್ಪ. ಜನರ ವಿಶ್ವಾಸ ಗಳಿಸಲು ವಿಫಲರಾಗಿರುವ ಅವರು ಕಮಿಷನ್ ಹಣಕ್ಕಾಗಿಯೇ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ತಮ್ಮ ಸಹೋದರನ ವಿರುದ್ಧ ಹರಿಹಾಯ್ದರು.
ಪಟ್ಟಣದ ಬಂಗಾರಧಾಮದಲ್ಲಿ ಕಾಂಗ್ರೆಸ್ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು, ಪ್ರತಿ ಕಾಮಗಾರಿಯಲ್ಲೂ ಶಾಸಕರ ಭ್ರಷ್ಟತೆಯಿಂದ ಸಿಡಿದೆದ್ದ ಬಿಜೆಪಿ ಇಬ್ಭಾಗವಾಗಿ ಒಂದು ಬಣ ನಮೋ ವೇದಿಕೆ ಹುಟ್ಟು ಹಾಕಿಕೊಂಡು ಕುಮಾರ ಬಂಗಾರಪ್ಪನವರ ಭ್ರಷ್ಟಮುಖವಾಡ ಬಯಲು ಮಾಡುತ್ತಿದ್ದಾರೆ. ಅವರು ಗೆಲುವು ಸಾಧಿಸಿರುವುದು ಕಮಿಷನ್ ಹಣಕ್ಕಾಗಿಯೇ ಹೊರತು, ಕ್ಷೇತ್ರದ ಅಭಿವೃದ್ಧಿಗೆ ಅಲ್ಲ. ತಂದೆ-ತಾಯಿಯನ್ನು ಮನೆಯಿಂದ ಹೊರಹಾಕಿದಾಗಲೇ ಸೊರಬ ತಾಲೂಕಿನ ಜನತೆ ಎಚ್ಚೆತ್ತುಕೊಳ್ಳಬೇಕಿತ್ತು ಎಂದರು.
undefined
ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೆಸೆಯಿರಿ: ಪ್ರಜಾಧ್ವನಿ ಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕರೆ
ಶಿವಮೊಗ್ಗದಲ್ಲಿ ಸಾವಿರಾರು ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಆಗಿರುವ ವಿಮಾನ ನಿಲ್ದಾಣದಲ್ಲಿ ವಿಮಾನಗಳು ಹಾರುವುದೇ ಅನುಮಾನ. ರಾಜ್ಯದಲ್ಲಿಯೇ ಪ್ರಥಮವಾಗಿ ಅನುಮೋದನೆಗೊಂಡಿರುವ ವಿಸ್ತಾರ ಯೋಜನೆ ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲ. ಈ ಯೋಜನೆ ಮಂಜೂರಾತಿ ದೊರೆತಿರುವುದೇ ಕುಮಾರ ಬಂಗಾರಪ್ಪನವರ ಜೋಳಿಗೆ ತುಂಬಿಸಲು.
ಜನರ ಸಂಕಷ್ಟಗಳಿಗೆ ಸ್ಪಂದಿಸದವರೂ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲು ಸಾಧ್ಯವೇ? ಅವರ ಗೆಲುವಿಗಾಗಿ ಶ್ರಮಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರನ್ನು ಕಡೆಗಣಿಸಿದ್ದಾರೆ. ನಂಬಿದವರ ಬೆನ್ನ ಹಿಂದೆಯೇ ಕತ್ತಿ ಮಸೆಯುವ ಜಾಯಮಾನದವರಾದ ಶಾಸಕರು ನಂಬಿಕೆ ಅರ್ಹ ವ್ಯಕ್ತಿಯಲ್ಲ ಎಂದು ಮೂದಲಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟಸೇರಿದಂತೆ ಮುಖಂಡರು ಕಾರ್ಯರ್ಕರು ಹಾಜರಿದ್ದರು.
ಅರಬಾವಿ, ಗೋಕಾಕ ಗೆಲುವಿನ ಜವಾಬ್ದಾರಿ ನಿಮ್ಮದು: ರಮೇಶ ಜಾರಕಿಹೊಳಿ
ಸಿನಿಮಾ ರಂಗದಲ್ಲಿ ಉತ್ತಮ ನಟನೆ ಮಾಡಿದ್ದರೆ ತಮ್ಮ ಸಂಸ್ಥೆಗೂ ಒಂದಿಷ್ಟುಕಾಸು ಸಿಗುತ್ತಿತ್ತು. ಆದರೆ ಸಿನಿಮಾದಲ್ಲೂ ಹೀರೊ ಆಗಲಿಲ್ಲ, ಶಾಸಕನಾಗಿಯೂ ಜನರ ವಿಶ್ವಾಸಗಳಿಸುವಲ್ಲಿ ವಿಫಲನಾಗಿ ಜೀರೋ ಆಗಿದ್ದಾರೆ. ಆದರೆ ಭ್ರಷ್ಟಾಚಾರದಲ್ಲಿ ನಿಪುಣನಾಗಿದ್ದಾರೆ. ಯಾವುದೇ ಕ್ಷೇತ್ರದಲ್ಲಿ ಅವರ ಹಣೆಬರಹದಲ್ಲಿ ಸ್ವಂತ ಶಕ್ತಿಯಿಂದ ಗೆದ್ದ ದಾಖಲೆಗಳೇ ಇಲ್ಲ
- ಮಧು ಬಂಗಾರಪ್ಪ, ಕಾಂಗ್ರೆಸ್ ಮುಖಂಡ