ಕಾಂಗ್ರೆಸ್ ಟಿಕೆಟ್ ಮಾಜಿ ಶಾಸಕ ರಫೀಕ್ ಅಹಮದ್ ಕೈ ತಪ್ಪಿದ್ದಕ್ಕೆ ಅಸಮಧಾನ ಭುಗಿಲೆದ್ದಿದೆ . ತುಮಕೂರಿನ ಎಚ್.ಎಂ.ಎಸ್ ಕಾಲೇಜಿನಲ್ಲಿ ಬೆಂಬಲಿಗರ ಸಭೆ ನಡೆಸಿದ ಶಫೀ ಅಹಮದ್ ಹಾಗೂ ರಫೀಕ್ ಅಹಮದ್ ಡಾ.ಜಿ.ಪರಮೇಶ್ವರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ಏ.7): ನಗರದ ಕಾಂಗ್ರೆಸ್ ಟಿಕೆಟ್ ಮಾಜಿ ಶಾಸಕ ರಫೀಕ್ ಅಹಮದ್ ಕೈ ತಪ್ಪಿದ್ದಕ್ಕೆ ಅಸಮಧಾನ ಭುಗಿಲೆದ್ದಿದೆ . ನಗರದ ಎಚ್.ಎಂ.ಎಸ್ ಕಾಲೇಜಿನಲ್ಲಿ ಬೆಂಬಲಿಗರ ಸಭೆ ನಡೆಸಿದ ಶಫೀ ಅಹಮದ್ ಹಾಗೂ ರಫೀಕ್ ಅಹಮದ್ ಡಾ.ಜಿ.ಪರಮೇಶ್ವರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಶಫೀ ಕುಟುಂಬಕ್ಕೆ ಕಳೆದ 40 ವರ್ಷದಿಂದ ಟಿಕೆಟ್ ನೀಡಲಾಗುತ್ತಿತ್ತು. ಆದ್ರೆ ಈ ಭಾರಿ ತುಮಕೂರು ನಗರ ಕಾಂಗ್ರೆಸ್ ಟಿಕೆಟ್ ಅನ್ನು ಹೊಸ ಅಲ್ಪಸಂಖ್ಯಾತ ಮುಖಂಡ ಇಕ್ಬಾಲ್ ಅಹಮದ್ ಗೆ ನೀಡಲಾಗಿದೆ. ಈ ಮೂಲಕ ಶಫೀ ಕುಟುಂಬಕ್ಕೆ ನೀಡಲಾಗುತ್ತಿದ್ದ ಟಿಕೆಟ್ ಗೆ ಬ್ರೇಕ್ ಹಾಕಿ ಹೊಸ ಭಾಷ್ಯ ಬರೆಯಲಾಗಿದೆ.
undefined
ಇದ್ರಿಂದ ರೊಚ್ಚಿಗೆದ್ದ ಶಫೀ ಅಹಮದ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಬೆಂಬಲಿಗರ ಸಭೆ ನಡೆಸಿ, ಮುಂದಿನ ನಿರ್ಧಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ಶಫೀ ಅಹಮದ್ , ಸುದ್ದಿಗೋಷ್ಠಿಯುದ್ದಕ್ಕೂ ಜಿ.ಪರಮೇಶ್ವರ ವಿರುದ್ದ ಹರಿಹಾಯ್ದದಿದ್ದಾರೆ. 40 ವರ್ಷದಿಂದ ಪಕ್ಷಕ್ಕಾಗಿ ದುಡಿದ್ದೇನೆ, ಎಂತಹ ಸಮಸ್ಯೆ ಬಂದರು ಲಕ್ಕಪ್ಪನವರ ಮಾರ್ಗದರ್ಶನದಲ್ಲಿ ದುಡಿದಿದ್ದೇವೆ. ಸಕ್ರೀಯ ಕಾರ್ಯಕರ್ತನಾಗಿ ಪಕ್ಷದ ಆದೇಶಗಳನ್ನು ಪಾಲಿಸಿದ್ದೇನೆ, ಪಕ್ಷದಿಂದ ಒಂದು ಪೈಸಾ ಅಪೇಕ್ಷೆ ಮಾಡಿಲ್ಲ, ಕೈಯಿಂದ ಖರ್ಚು ಮಾಡಿದ್ದೇವೆ. ಇಷ್ಟೇಲ್ಲಾ ಮಾಡಿದ್ರು, ಜಿ.ಪರಮೇಶ್ವರ್ ನಮಗೆ ವಿಶ್ವಾಸ ಘಾತುಕ ಮಾಡಿದರು. ತುಮಕೂರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ನಾಯಕರು ಬೆಳೆಯಬಾರದು ಎಂಬುದು ಪರಮೇಶ್ವರ್ ಅವರ ಉದ್ದೇಶ.
ಡಾ.ರಫೀಕ್ ಅಹಮದ್ ಗೆ ಟಿಕೆಟ್ ನೀಡಿ ಅವರನ್ನು ಗೆಲ್ಲಿಸುತ್ತೇವೆ ಅಂತ ಪರಮೇಶ್ವರ್ ಗೆ ಮನವಿ ಮಾಡಿದ್ದೊ, ಸುರ್ಜೇವಾಲಾ, ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವು, ಅವರೆಲ್ಲಾ ಹೇಳಿದ್ರು, ಡಾ.ರಫೀಕ್ ಅಹಮದ್ ಅವರ ಭವಿಷ್ಯ ನಿಮ್ಮ ಜಿಲ್ಲೆಯ ನಾಯಕ ಡಾ. ಜಿ.ಪರಮೇಶ್ವರ್ ಕೈಯಲ್ಲಿದೆ ನೀವು ಅವರನ್ನು ಭೇಟಿ ಮನವಿ ಸಲ್ಲಿಸಿ ಅಂತ ಎಲ್ಲಾ ನಾಯಕರು ಹೇಳಿದ್ರು. ಬಳಿಕ ಪರಮೇಶ್ವರ್ ಬಳಿನೂ ಮನವಿ ಮಾಡಿದ್ವಿ, ಡಾ.ರಫೀಕ್ ಅಹಮದ್‌ಗೆ ಟಿಕೆಟ್ ನೀಡಿದ್ರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದ್ದೆವು.
ಕೊಡಗಿನ ಎರಡು ಕ್ಷೇತ್ರಕ್ಕೆ ಅಳೆದು ತೂಗಿ ಟಿಕೆಟ್ ನೀಡಿದ ಕಾಂಗ್ರೆಸ್ ಗೆ ಬಂಡಾಯದ ಬಿಸಿ!
ಡಾ.ಪರಮೇಶ್ವರ್ ಅವ್ರು ಗೋರಿ ಮೇಲೆ ಆಣೆ ಮಾಡಿದ್ರು, ಡಾ.ರಫೀಕ್ ಅವರಿಗೆ ಟಿಕೆಟ್ ಸಿಗುವಂತೆ ಮಾಡ್ತೀನಿ ಅಂತ ಹೇಳಿದ್ರು, ಇಂತಹ ನಾಯಕರು ಆಶ್ವಾಸನೆ ನೀಡಿದ್ದಾರೆ ಅಂತ ನೂರಕ್ಕೆ ನೂರಷ್ಟು ನಂಬಿದ್ವಿ, ಆದರೆ ಪರಮೇಶ್ವರ್ ವಿಶ್ವಾಸ ಘಾತುಕ ಕೆಲಸ ಮಾಡಿದ್ರು. ಡಾ. ರಫೀಕ್ ಅವರು ಕೂಡ ದೆಹಲಿಯಲ್ಲಿ ಪಕ್ಷದ ಹೈ ಕಮಾಂಡ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ರು, ಅವರೆಲ್ಲಾರು ಟಿಕೆಟ್ ಕೊಡುವ ಭರವಸೆ ನೀಡಿದ್ದರು. ಆದರೆ ಪರಮೇಶ್ವರ್ ಅವರು ಸೆಲೆಕ್ಷನ್ ಕಮಿಟಿ ಸದಸ್ಯರಾಗಿದ್ದರು, ಸಭೆಯಲ್ಲಿ ಡಾ.ರಫೀಕ್ ಅಹಮದ್ ಅವರಿಗೆ ಟಿಕೆಟ್ ನೀಡಿದ್ರೆ ನಾನು ವಾಕ್ ಔಟ್ ಮಾಡ್ತಿನಿ ಅಂತ ಬೆದರಿಸಿದ್ದಾರೆ.
ಬಿಜೆಪಿ-ಕಾಂಗ್ರೆಸ್ ನಡುವೆ ಮಾರಾಮಾರಿ, 18 ಮಂದಿ ಅರೆಸ್ಟ್, ಸುರಪುರ ಮತಕ್ಷೇತ್ರ ಬೂದಿ
ಹೀಗಾಗಿ ನಮಗೆ ಟಿಕೆಟ್ ಲಭಿಸಿಲ್ಲ, ಅಲ್ಪಸಂಖ್ಯಾತರಿಗೆ ಯಾವ ರೀತಿ ಪ್ರೀತಿ ವಿಶ್ವಾಸವಿದೆ ಅಂತ ತೋರಿಸುತ್ತದೆ. ಅವರಿಂದ ನಮಗೆ ಪಕ್ಷದ ಟಿಕೆಟ್ ವಂಚನೆಯಾಗಿದೆ. ನಮ್ಮ ಮೇಲೆ ಅವರಿಗೆ ಏನು ಸಿಟ್ಟಿತ್ತೋ ಅವರು ತೀರಿಸಿಕೊಂಡಿದ್ದಾರೆ. ಇವತ್ತು ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಡ್ತೀನಿ. ನಮಗೆ ಟಿಕೆಟ್ ಕೈ ತಪ್ಪಲು ಜಿ.ಪರಮೇಶ್ವರ್ ಅವರೇ ನೇರ ಹೊಣೆ, ನಾಳೆ ಮತ್ತೇ ಸಭೆ ಸೇರಿಸಿ, ನಮ್ಮ ಮುಂದಿನ ನಿರ್ಣಯ ತಿಳಿಸುತ್ತೇವೆ ಎಂದು ಶಫೀ ಅಹಮದ್ ತಿಳಿಸಿದರು. ಅಲ್ಲದೆ ಇಕ್ಬಾಲ್ ಅಹಮದ್ ಗೆ ನಮ್ಮ ಬೆಂಬಲ ಇಲ್ಲ ಅಂತ ತಿಳಿಸಿದ್ರು.
ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.