ಜಾತಿ ಆಧಾರದ ಮೇಲೆಯೇ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ

By Kannadaprabha NewsFirst Published Oct 9, 2023, 12:19 PM IST
Highlights

ಕಾಂಗ್ರೆಸ್ ನವರು ಒಂದು ಕಡೆ ತಮ್ಮದು ಜಾತ್ಯತೀತ ಪಕ್ಷ ಎನ್ನುತ್ತಾರೆ, ಇನ್ನೊಂದು ಕಡೆ ಜಾತಿ ಗಣತಿ ವರದಿ ಇಟ್ಟುಕೊಂಡು ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ರಾಮನಗರ (ಅ.09): ಕಾಂಗ್ರೆಸ್ ನವರು ಒಂದು ಕಡೆ ತಮ್ಮದು ಜಾತ್ಯತೀತ ಪಕ್ಷ ಎನ್ನುತ್ತಾರೆ, ಇನ್ನೊಂದು ಕಡೆ ಜಾತಿ ಗಣತಿ ವರದಿ ಇಟ್ಟುಕೊಂಡು ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಡದಿ ಸಮೀಪದ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿಗಣತಿ ವರದಿ ವಿಚಾರ ಇಟ್ಟುಕೊಂಡು ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಕಿಡಿ ಕಾರಿದರು.

ಕಾಂತರಾಜು ಎಂಬುವವರಿಂದ ವರದಿ ಕೊಡಿಸಿದ್ದೀವಿ. ಆದರೆ, ಕುಮಾರಸ್ವಾಮಿ ಅವರು ಒಪ್ಪಲಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಸದಸ್ಯ ಕಾರ್ಯದರ್ಶಿ ಸಹಿ ಇಲ್ಲದೆ ಆ ವರದಿಯನ್ನು ಸ್ವೀಕಾರ ಮಾಡುವುದು ಹೇಗೆ? ಎನ್ನುವ ಅರಿವು ಸಿಎಂ ಆದವರಿಗೆ ಇಲ್ಲ ಎಂದು ತಿರುಗೇಟು ನೀಡಿದರು. ಮಾತೆತ್ತಿದರೆ ನನ್ನ ಕಡೆ ಬೆರಳು ತೋರಿಸುವ ಅವರು, ಆ ಸಂದರ್ಭದಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಒಮ್ಮೆಯಾದರೂ ಕಾಂತರಾಜು ವರದಿ ಬಗ್ಗೆ ಚರ್ಚೆ ಮಾಡಲಿಲ್ಲ. ಪ್ರತಿ ಸಭೆಯಲ್ಲಿಯೂ ಟವೆಲ್ ಕೊಡವಿ ಎದ್ದು ಹೋಗುತ್ತಿದ್ದರು. ನಾನು ಸಿಎಂ ಆಗಿದ್ದಾಗ 14 ತಿಂಗಳಲ್ಲಿ ನನ್ನ ಜೊತೆ ಒಮ್ಮೆಯೂ ಚರ್ಚೆ ನಡೆಸಲೇ ಇಲ್ಲ ಎಂದು ಕಿಡಿಕಾರಿದರು.

BBK 10: ಮೊದಲ ದಿನವೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎಂಎಲ್ಎ ಪ್ರದೀಪ್ ಈಶ್ವರ್‌: ಸ್ಫರ್ಧಿಗಳಿಗೆ ಶಾಕ್‌!

ಜಮೀರ್‌ ರಾಜಕೀಯ ದ್ರೋಹಿ: ಹತ್ತಿದ ಏಣಿಯನ್ನೇ ಕಾಲಲ್ಲಿ ಒದೆಯುವ ವಸತಿ ಸಚಿವ ಜಮೀರ್‌ ಅಹ್ಮದ್‌ ಮನಸ್ಥಿತಿ ಸರಿಯಲ್ಲ. ಅವರದು ರಾಜಕೀಯ ದ್ರೋಹದ ಮನೋಭಾವ ಎಂದು ಜೆಡಿಎಸ್‌ ಮುಖಂಡ ಹಾಗೂ ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಹರಿಹಾಯ್ದಿದ್ದಾರೆ. ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಬದುಕಿನ ಆರಂಭದ ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜತೆಗಿದ್ದು ಅವರಿಂದ ರಾಜಕೀಯ ಲಾಭ ಪಡೆದುಕೊಂಡಿದ್ದಾರೆ. 

ರಾಜಕೀಯ ಏಳ್ಗೆಯಾಗಿ ಈಗ ವ್ಯಕ್ತಿಗತವಾಗಿ ನಿಂದಿಸುವ ಮಟ್ಟಕ್ಕೆ ಜಮೀರ್‌ ಅಹ್ಮದ್‌ ಹೋಗಿರುವುದು ಅವರ ಅರ್ಹತೆಯನ್ನು ತೋರಿಸುತ್ತದೆ. ಜಮೀರ್‌ ಅಹ್ಮದ್‌ ಖಾನ್‌ ನೀಡಿರುವ ಕ್ಷುಲ್ಲಕ ಮಾತುಗಳು ಅವರ ಘನತೆಗೆ ತಕ್ಕದ್ದಲ್ಲ ಎಂದು ವಾಗ್ದಾಳಿ ನಡೆಸಿದರು. ಅಲ್ಪಸಂಖ್ಯಾತರ ಬಗ್ಗೆ ಕುಮಾರಸ್ವಾಮಿ ಎಂದಿಗೂ ಅಗೌರವದ ಮಾತಾಡಿಲ್ಲ. ಚನ್ನಪಟ್ಟಣದಲ್ಲಿ ತಾವು ಗೆಲ್ಲಲು ಅಲ್ಪಸಂಖ್ಯಾತರೂ ಕಾರಣ ಎಂದಿದ್ದಾರೆ. ಅನಗತ್ಯವಾಗಿ ಅವರ ಹೇಳಿಕೆಯನ್ನು ತಿರುಚುವುದು ಬೇಡ. ಅಲ್ಪಸಂಖ್ಯಾತರು ತಮ್ಮ ಸ್ವತ್ತು ಎಂದು ತಿಳಿದು, ಅವರನ್ನು ಗುತ್ತಿಗೆ ಪಡೆದವರಂತೆ ವರ್ತಿಸುವುದು ಜಮೀರ್ ಅಹ್ಮದ್‌ಗೆ ಘನತೆ ತರುವುದಿಲ್ಲ ಎಂದರು.

ರಾಜಕಾರಣ ನಿಂತ ನೀರಲ್ಲ. ಕಾಲಾಂತರದಲ್ಲಿ ಬದಲಾಗುತ್ತದೆ. ಆದರೆ, ಹತ್ತಿದ ಏಣಿಯನ್ನೇ ಕಾಲಲ್ಲಿ ಒದೆಯುವ ಜಮೀರ್‌ ಅಹ್ಮದ್‌ ಮನಸ್ಥಿತಿ ಸರಿಯಲ್ಲ. ಇದು ರಾಜಕೀಯ ದ್ರೋಹದ ಮನೋಭಾವ. ಈ ಹಿಂದೆ ರಾಜಕೀಯವಾಗಿ ಕಣ್ಣು ಬಿಡುವಾಗ ಕುಮಾರಸ್ವಾಮಿ ಅವರನ್ನು ತಮ್ಮದೇ ಬಸ್‌ನಲ್ಲಿ ಕೂರಿಸಿಕೊಂಡು ತಾವೇ ಚಾಲನೆ ಮಾಡಿಕೊಂಡು ಹೋದಾಗ ಯಾವ ಚಡ್ಡಿ ಹಾಕಿದ್ದರೋ, ಈಗಲೂ ಅಂತಹದ್ದೇ ಚಡ್ಡಿ ಹಾಕಿದ್ದಾರೆ. ಆಗ ಜಮೀರ್‌ ಅಹ್ಮದ್‌ ಅವರಿಗೆ ಪರಿವೇ ಇರಲಿಲ್ಲವೇ? ಕುಮಾರಸ್ವಾಮಿ ಎಂದಿಗೂ ಬದಲಾಗಿಲ್ಲ. ನಂಬಿದ ತತ್ವ ಸಿದ್ಧಾಂತದಲ್ಲಿ ರಾಜೀ ಮಾಡಿಕೊಂಡು ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ ಎಂದು ಶರವಣ ತೀಕ್ಷ್ಣವಾಗಿ ಹೇಳಿದರು.

ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರ್ಕಾರ ಹೋಗಿದ್ದು ಕನಕಪುರದ ಬಂಡೆಯಿಂದ: ಎಚ್‌ಡಿಕೆ

ರಾಜಕೀಯವಾಗಿ ಅನಾಮಿಕರಾಗಿದ್ದ ಜಮೀರ್‌ ಅವರನ್ನು ಕುಮಾರಸ್ವಾಮಿ ಗುರುತಿಸಿ, ಸಚಿವ ಸ್ಥಾನ ಕೊಟ್ಟು ಅವರಿಗೆ ಅಸ್ತಿತ್ವವನ್ನು ತಂದು ಕೊಟ್ಟರು. ಅವರಿಗೆ ಜೆಡಿಎಸ್‌ ರಾಜಕೀಯ ಬದುಕು ಕೊಟ್ಟಿದ್ದು, ಅದನ್ನೇ ಮರೆತು ಪಕ್ಷದ ನಾಯಕರ ಬಗ್ಗೆ ಮನಬಂದಂತೆ ಹೇಳಿಕೆ ನೀಡುತ್ತಿರುವ ಜಮೀರ್‌ ಅಹ್ಮದ್ ನಡೆ ಖಂಡನಾರ್ಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!