ಲಿಂಗಾಯತ, ದಲಿತರನ್ನು ಕಡೆಗಣಿಸಿದ ಕಾಂಗ್ರೆಸ್‌: ಬಿಜೆಪಿ ಆರೋಪ

By Kannadaprabha NewsFirst Published May 19, 2023, 1:53 PM IST
Highlights

ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಇಬ್ಬರೂ ಸಹ ದಕ್ಷಿಣ ಕರ್ನಾಟಕಕ್ಕೆ ಸೇರಿದವರಾಗಿದ್ದಾರೆ. ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್‌ ಮತ್ತು ದಲಿತ ಸಮುದಾಯದ ಜಿ. ಪರಮೇಶ್ವರ್‌ ಅವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗಿದೆ: ಅಮಿತ್‌ ಮಾಳವೀಯ 

ನವದೆಹಲಿ(ಮೇ.19):  ಡಿ.ಕೆ.ಶಿವಕುಮಾರ್‌ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಗೆಲುವಾಗಿದೆ ಎಂದು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಟೀಕಿಸಿದ್ದಾರೆ. 

ಈ ಬಾರಿ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನವನ್ನು ಪ್ರದೇಶವಾರು ಹಂಚಿಕೆ ಮಾಡಿಲ್ಲ ಅಥವಾ ಪ್ರಮುಖ ಸಮುದಾಯದವರಿಗೂ ಅವಕಾಶವನ್ನು ನೀಡಿಲ್ಲ. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಇಬ್ಬರೂ ಸಹ ದಕ್ಷಿಣ ಕರ್ನಾಟಕಕ್ಕೆ ಸೇರಿದವರಾಗಿದ್ದಾರೆ. ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್‌ ಮತ್ತು ದಲಿತ ಸಮುದಾಯದ ಜಿ. ಪರಮೇಶ್ವರ್‌ ಅವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗಿದೆ ಎಂದು ಮಾಳವೀಯ ಹೇಳಿದ್ದಾರೆ.

Latest Videos

ಲಿಂಗಾಯತರಿಗೆ ಪ್ರಾಶಸ್ತ್ಯ ನೀಡದಿದ್ದರೆ ಕಾಂಗ್ರೆಸ್‌ಗೆ ತಕ್ಕ ಪಾಠ: ಡಾ.ಜಾಮದಾರ ಎಚ್ಚರಿಕೆ

ಡಿ.ಕೆ.ಶಿವಕುಮಾರ್‌ ಅವರು ಗಾಂಧಿ ಕುಟುಂಬದ ಓಲೈಕೆ ಮಾಡಲು ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲಿದ್ದಾರೆ. ಕೊನೆಯ ಚುನಾವಣೆಯಾದ ಕಾರಣ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಯಾವುದೇ ಸಾಧನೆ ಮಾಡುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.

click me!