ಕಾಂಗ್ರೆಸ್ ಸರ್ಕಾರ ರಚನೆಗೆ ಇನ್ನೇನು ಸಕಲ ಸಿದ್ಧತೆಯಾಗಿದ್ದು, ಸಿದ್ದರಾಮಯ್ಯ ಸಿಎಂ ಆಗಿ ಹಾಗೂ ಡಿ.ಕೆ.ಶಿವಕುಮಾರ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ವೇಳೆಯಲ್ಲಿ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ದಟ್ಟವಾಗಿರುವುದರಿಂದ ಕೊಪ್ಪಳ ಜಿಲ್ಲೆಯ ಯಾರಿಗೆ ಅದೃಷ್ಟಎನ್ನುವ ಚರ್ಚೆ ಜೋರಾಗಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ (ಮೇ.19) ಕಾಂಗ್ರೆಸ್ ಸರ್ಕಾರ ರಚನೆಗೆ ಇನ್ನೇನು ಸಕಲ ಸಿದ್ಧತೆಯಾಗಿದ್ದು, ಸಿದ್ದರಾಮಯ್ಯ ಸಿಎಂ ಆಗಿ ಹಾಗೂ ಡಿ.ಕೆ.ಶಿವಕುಮಾರ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುವ ವೇಳೆಯಲ್ಲಿ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ದಟ್ಟವಾಗಿರುವುದರಿಂದ ಕೊಪ್ಪಳ ಜಿಲ್ಲೆಯ ಯಾರಿಗೆ ಅದೃಷ್ಟಎನ್ನುವ ಚರ್ಚೆ ಜೋರಾಗಿದೆ.
undefined
ಯಲುಬರ್ಗಾ ಕ್ಷೇತ್ರದ ಬಸವರಾಜ ರಾಯರಡ್ಡಿ,(Basavaraj rayaraddy MLA) ಕೊಪ್ಪಳ ಕ್ಷೇತ್ರದ ರಾಘವೇಂದ್ರ ಹಿಟ್ನಾಳ (Raghavendra Hitnal)ಹಾಗೂ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ(Shivaraj tangadagi) ಸಚಿವ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಭಾರಿ ಕಸರತ್ತು ನಡೆಸಿದ್ದು, ಎಲ್ಲ ಲೆಕ್ಕಾಚಾರದ ಮೇಲೆ ಹಂಚಿಕೆಯಾಗುವ ವೇಳೆಯಲ್ಲಿ ಯಾರಿಗೆ ಒಲಿಯಬಹುದು ಅದೃಷ್ಟಎನ್ನುವುದು ಸದ್ಯದ ಕುತೂಹಲ.
Govt formation in Karnataka: ಯಾರಾರಿಗೆ ಸಿಗಲಿದೆ ಸಚಿವಗಿರಿ? ಸೋತರೂ ಶೆಟ್ಟರ್ ಕೈ ಹಿಡಿಯಲಿದೆ ಲಕ್!
ಕೊಪ್ಪಳ ಜಿಲ್ಲೆಯ ಮೂವರು ಸಹ ಸಿದ್ದರಾಮಯ್ಯ ಬಣದಲ್ಲಿಯೇ ಗುರುತಿಸಿಕೊಂಡವರು. ಆದ್ಯತೆಯಲ್ಲಿ ಒಬ್ಬರಿಗೆ ಮಾತ್ರ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಸಿದ್ದರಾಮಯ್ಯ ಜನ್ಮ ದಿನಾಚರಣೆಯ ವೇಳೆಯಲ್ಲಿ ಮುತುವರ್ಜಿ ವಹಿಸಿದ್ದ ಬಸವರಾಜ ರಾಯರಡ್ಡಿ ಆಹ್ವಾನ ಪತ್ರಿಕೆಯನ್ನು ಖದ್ದು ತಾವೇ ಡಿಕೆಶಿ ಅವರಿಗೆ ಸಲ್ಲಿಸುವ ಮೂಲಕ ದೊಡ್ಡ ಸುದ್ದಿಯಾಗಿದ್ದರು. ಈ ಮೂಲಕ ತಾವು ಸಿದ್ದರಾಮಯ್ಯ ಬಣ ಎನ್ನುವುದನ್ನು ಸಾರಿ ಸಾರಿ ಹೇಳಿದ್ದರು. ಇದಾದ ಮೇಲೆಯೂ ಅವರು ಸಿದ್ದರಾಮಯ್ಯ ಅವರ ಪರವಾಗಿಯೇ ಬ್ಯಾಟ್ ಮಾಡುತ್ತಾರೆ ಮತ್ತು ಅವರ ಗುಂಪಿನಲ್ಲಿಯೇ ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಇವರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿದೆ.
ಆದರೆ, ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಮೂರು ಬಾರಿ ಸತತವಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಬಾರಿಸಿ, ಹಿರಿತನ ಸಂಪಾದಿಸಿದ್ದಾರೆ. ಇದಕ್ಕಿಂತ ಮಿಗಿಲಾಗಿ ಸಿದ್ದರಾಮಯ್ಯ ಮಾನಸಪುತ್ರ ಎನಿಸಿದ್ದಾರೆ. ಇವರಿಗೆ ಅದೃಷ್ಟಒಲಿಯುವುದೇ?
ಕನಕಗಿರಿ ಶಾಸಕ ಶಿವರಾಜ ತಂಗಡಗಿ ಸಹ ಸಿದ್ದರಾಮಯ್ಯ ಪರಮಾಪ್ತರಲ್ಲಿ ಒಬ್ಬರು. ಹೀಗಾಗಿ, ಇವರಿಗೂ ಅವಕಾಶ ದೊರೆಯುವ ಸಾಧ್ಯತೆ ಇದೆ. ಇದಕ್ಕಿಂತ ಮಿಗಿಲಾಗಿ ಭೋವಿ ಸಮಾಜ ಪ್ರತಿನಿಧಿಸುತ್ತಾರೆ. ಇದು ಸಹ ಇವರಿಗೆ ಪ್ಲಸ್ ಪಾಯಿಂಟ್.
ತೆರೆಮರೆಯಲ್ಲಿ ಪೈಪೋಟಿ:
ರಾಘವೇಂದ್ರ ಹಿಟ್ನಾಳ ಹಾಗೂ ಶಿವರಾಜ ತಂಗಡಗಿ ದೆಹಲಿಯಲ್ಲಿಯೇ ಇದ್ದು, ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದ್ದಾರೆ. ರಾಜಕೀಯ ಬೆಳವಣಿಗೆಯ ಪ್ರತಿ ಹಂತದಲ್ಲಿಯೂ ಇವರು ಜೊತೆಯಲ್ಲಿ ಇರುವ ಮೂಲಕ ಸಚಿವ ಸ್ಥಾನ ಪಡೆಯುವುದಕ್ಕೆ ಪರೋಕ್ಷ ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ.
Govt formation in Karnataka: ಹೊಸ ಸರ್ಕಾರಕ್ಕೆ ನೂರೆಂಟು ಸವಾಲು!
ಕೊಪ್ಪಳ ಜಿಲ್ಲೆಗೆ ಈ ಬಾರಿ ಎರಡು ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ. ಈಗಾಗಲೇ ಹಿರಿತನ ಮೇಲೆ ಬಸವರಾಜ ರಾಯರಡ್ಡಿ ಅವರಿಗೆ ಹಾಗೂ ಇವರಿಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ಪಕ್ಕಾ ಎಂದು ಹೇಳಲಾಗುತ್ತದೆ. ಇದಕ್ಕಿಂತ ಮಿಗಿಲಾಗಿ 6 ಬಾರಿ ಶಾಸಕರಾಗಿರುವ ಬಸವರಾಜ ರಾಯರಡ್ಡಿ ಅವರನ್ನು ಸಭಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಾಧ್ಯತೆಯೂ ಇದೆ.
ಮೂವರ ಫೋಟೋ ಬಳಸಿಕೊಳ್ಳಿ