
ಹುಬ್ಬಳ್ಳಿ (ಏ.7) : ಈ ದೇಶದಲ್ಲಿ ದಲಿತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್‌ಗೆ ಸಂಸತ್ತಿಗೆ ಬಾರದಂತೆ ತಡೆಹಿಡಿಯಿತು. ಅಂತಹ ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi) ಮನವಿ ಮಾಡಿದರು.
ನಗರದಲ್ಲಿ ಪರಿಶಿಷ್ಟಸಮುದಾಯಗಳ ಒಕ್ಕೂಟ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್(Congress) ಸುಡುವ ಮನೆ. ಅಲ್ಲಿಗೆ ದಲಿತರು ಹೋಗಬೇಡಿ ಎಂದು ಅಂಬೇಡ್ಕರ್(Dr BR Ambedkar) ಹೇಳಿದ್ದರು. ಬಾಬು ಜಗಜೀವನರಾಮ್(Babu jagajeevanram) ಅವರಿಗೆ ಮೋಸ ಮಾಡಿದ್ದು ಕಾಂಗ್ರೆಸ್(Congress) ಎಂದ ಅವರು, ಕರ್ನಾಟಕದಲ್ಲೂ ಜಿ.ಪರಮೇಶ್ವರ(G Parameshwar), ಮುನಿಯಪ್ಪ(Muniyappa), ಮಲ್ಲಿಕಾರ್ಜುನ ಖರ್ಗೆ(Mallikarjun kharge), ಅಖಂಡ ಶ್ರೀನಿವಾಸ ಮೂರ್ತಿ(Akhanda shrinivasmurthy) ಅವರನ್ನು ಮುಳುಗಿಸಿದ್ದು ಕಾಂಗ್ರೆಸ್. ನಾವು ಮೀಸಲಾತಿ ತಂದರೆ, ಅವರು ಮೀಸಲಾತಿ ತೆಗೆಯುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬೆಳಗಾವಿ ರಾಜಕಾರಣ ಹುಬ್ಬಳ್ಳಿಗೆ ಶಿಫ್ಟ್: ರಹಸ್ಯ ಸಭೆಯಲ್ಲಿ ನಡೆದಿದ್ದೇನು?
ನಿಮಗೆ ಮೀಸಲಾತಿ ಕೊಡುವವರು ಬೇಕೋ? ಮೀಸಲಾತಿ ತೆಗೆಯುವವರು ಬೇಕೋ ಎಂದು ನಿರ್ಧರಿಸಿ ಎಂದ ಅವರು, ನೀವು ಈ ಬಾರಿ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಅವರಿಗೆ ಆಶೀರ್ವಾದ ಮಾಡಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್(Jagadish shettar) ಮಾತನಾಡಿ, ಮೀಸಲಾತಿಯನ್ನು ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿತ್ತು. 2016ರಲ್ಲಿ ಇದೇ ಮೈದಾನದಲ್ಲಿ ಒಳಮೀಸಲಾತಿ ಸಂಬಂಧಪಟ್ಟಂತೆ ದೊಡ್ಡ ಸಮಾವೇಶ ನಡೆದಿತ್ತು. ಆಗ ಒಳಮೀಸಲಾತಿ ಜಾರಿಗೊಳಿಸುವ ಕುರಿತು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಕಾರ ಕೂಡ ಎತ್ತಲಿಲ್ಲ. ಬಿಜೆಪಿ ಸರ್ಕಾರ ಬಂದರೆ ಒಳಮೀಸಲಾತಿ ಜಾರಿಗೊಳಿಸುವುದಾಗಿ ಅವತ್ತೇ ನಾನು ಹೇಳಿದ್ದೆ. ಅದರಂತೆ ಇದೀಗ ಒಳಮೀಸಲಾತಿಯನ್ನು ಘೋಷಿಸಿದ್ದೇವೆ. ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದೇವೆ ಎಂದರು.
ಟಿಕೆಟ್ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡದಂತೆ ಸವದಿ, ಕುಮಟಳ್ಳಿಗೆ ಸೂಚನೆ ನೀಡಿದ ಕೇಂದ್ರ ಸಚಿವ ಜೋಶಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.