Legislative Council; ಪರಿಷತ್‌ಗೆ 'ಕೈ' 17 ಜನರ ಅಂತಿಮ ಪಟ್ಟಿ.. ಹೆಬ್ಬಾಳ್ಕರ್ ಸಹೋದರಿನಿಗೆ ಚಾನ್ಸ್!

By Suvarna News  |  First Published Nov 22, 2021, 7:20 PM IST

* ಕರ್ನಾಟಕ ವಿಧಾನ ಪರಿಷತ್ ಚುನಾವಣೆ
*  ಕಾಂಗ್ರೆಸ್ ನಿಂದ ಮೊದಲ ಪಟ್ಟಿ
* ಸಿದ್ದರಾಮಯ್ಯ ಜತೆ ಮಾತನಾಡಿದ್ದ ಸುರ್ಜೆವಾಲಾ
* ಕಣದಿಂದ ಹಿಂದೆ ಸರಿದ ಧರ್ಮಸೇನಾ 


ಬೆಂಗಳೂರು(ನ. 22)  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಸುರ್ಜೇವಾಲಾ (Randeep Surjewala) ಕರೆ ಮಾಡಿ ವಿಧಾನ ಪರಿಷತ್ ಟಿಕೆಟ್ ಫೈನಲ್ ಬಗ್ಗೆ ಮಾತನಾಡಿದ್ದರು. ಈಗ ಎಐಸಿಸಿ(AICC) ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.  ಕಾಂಗ್ರೆಸ್ (Congress) ಹದಿನೇಳು ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ. ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕವರ ಅಂತಿಮ ಪಟ್ಟಿ ಇಲ್ಲಿದೆ. 

1. ದಕ್ಷಿಣ ಕನ್ನಡ - ಮಂಜುನಾಥ ಭಂಡಾರಿ

Latest Videos

2. ಚಿಕ್ಕಮಗಳೂರು - ಗಾಯತ್ರಿ ಶಾಂತೇಗೌಡ 

3. ಶಿವಮೊಗ್ಗ -  ಆರ್. ಪ್ರಸನ್ನಕುಮಾರ್

4. ಧಾರವಾಡ -  ಸಲೀಂ ಅಹ್ಮದ್

5. ಬೆಳಗಾವಿ - ಚನ್ನರಾಜ್ ಹಟ್ಟಿಹೊಳಿ

6. ಕಲ್ಬುರ್ಗಿ - ಶಿವಾನಂದ ಪಾಟೀಲ 

7. ಚಿತ್ರದುರ್ಗ  -ಸೋಮಶೇಖರ್ 

8.ಮೈಸೂರು - ಡಾ. ಡಿ ತಿಮ್ಮಯ್ಯ

9. ಹಾಸನ - ಶಂಕರ್ 

10. ಉತ್ತರ ಕನ್ನಡ - ಬೀಮಣ್ಣ ನಾಯ್ಕ್ 

11. ಬೀದರ್ - ಘೋಷಣೆ ಮಾಡಿಲ್ಲ

12. ಬೆಂಗಳೂರು - ಘೋಷಣೆ ಮಾಡಿಲ್ಲ

13. ಮಂಡ್ಯ - ದಿನೇಶ್ ಗೂಳಿಗೌಡ

14. ಕೋಲಾರ -ಘೋಷಣೆ ಮಾಡಿಲ್ಲ

15. ರಾಯಚೂರು - ಶರಣಗೌಡ ಪಾಟೀಲ

16. ಬೆಂಗಳೂರು ಗ್ರಾಮಾಂತರ - ಎಸ್ ರವಿ

17. ಬಳ್ಳಾರಿ -   ಕೆಸಿ. ಕೊಂಡಯ್ಯ

18. ತುಮಕೂರು - ಆರ್. ರಾಜೇಂದ್ರ

19. ವಿಜಯಪುರ-ಬಾಗಲಕೋಟೆ - ಸುನೀಲ್ ಗೌಡ ಪಾಟೀಲ

20. ಕೊಡಗು - ಮಂಥರ್ ಗೌಡ್

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.  ದೆಹಲಿ, ಬೆಂಗಳೂರು ಮಟ್ಟದಲ್ಲಿ ಲಾಬಿ ಮಾಡಿ ಹೆಬ್ಬಾಳ್ಕರ್, ಸಹೋದರ ಚನ್ನರಾಜ್ ಹಟ್ಟಿಹೊಳಿ ಟಿಕೆಟ್  ಕನ್ ಫರ್ಮ್ ಮಾಡಿಸಿದ್ದಾರೆ. 

ಎಸ್ ಎಂ ಕೃಷ್ಣ ಅವರ ಮೂಲಕ ಮಂಡ್ಯದಿಂದ ದಿನೇಶ್ ಅವರಿಗೆ ಟಿಕೆಟ್ ಸಿಕ್ಕಿದೆ. ಕೃಷ್ಣ ಬಿಜೆಪಿಯಲ್ಲಿ ಇದ್ದರೂ ಕಾಂಗ್ರೆಸ್ ಪಾಳಯದಮೇಲೆ ಪ್ರಭಾವ ಬೀರಿದ್ದು ಡಿಕೆ ಶಿವಕುಮಾರ್ ಅವರ ಮನವೊಲಿಸಿ ದಿನೇಶ್ ಅವರಿಗೆ ಟಿಕೆಟ್ ಕೊಡಿಸಿದ್ದಾರೆ.

ಹಿಂದೆ ಸರಿದ  ಧರ್ಮಸೇನ.; ಮೈಸೂರು ಕ್ಷೇತ್ರದ ಸ್ಪರ್ಧೆಯಿಂದ  ಧರ್ಮಸೇನ ಹಿಂದೆ ಸರಿದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ಧರ್ಮಸೇನ ಬದಲು ತಿಮ್ಮಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಪಕ್ಕಾ ಆಗಿತ್ತು. ಸ್ಪರ್ಧೆಗೆ ಹಿಂದ ಸರಿದ ಹಿನ್ನೆಲೆಯಲ್ಲಿ ತಿಮ್ಮಯ್ಯಗೆ ಟಿಕೆಟ್ ಕೊಡಲು ಕೈ ನಾಯಕರ ನಿರ್ಧಾರ ಮಾಡಿದ್ದರು.

ಉತ್ತರ ಕನ್ನಡ: ಶಿರಸಿ ಸಿದ್ದಾಪುರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಕಾಗೇರಿ ವಿರುದ್ಧ ಸೋಲು ಕಂಡು ನಂತರ ಯಲ್ಲಾಪುರ ಉಪಚುನಾವಣೆಯಲ್ಲಿಯೂ ಹೆಬ್ಬಾರ್ ವಿರುದ್ಧ ಸೋಲು ಕಂಡಿದ್ದ ಭೀಮಣ್ಣ ನಾಯ್ಕ್ ಅವರಿಗೆ ಇನ್ನೊಂದು ಅವಕಾಶ ಮಾಡಿಕೊಡಲಾಗಿದೆ. ಉತ್ತರ ಕನ್ನಡದ ಅಭ್ಯರ್ಥಿಯಾಗಿ ಭೀಮಣ್ಣ ನಾಯ್ಕ ಹೆಸರು ಘೋಷಣೆಯಾಗಿದೆ. ಬಂಗಾರಪ್ಪ ಸಂಬಂಧಿಯಾಗಿರುವ ಇವರು ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ಗೆ ಕರೆತರುವ ಕೆಲಸ ಮಾಡಿದ್ದರು. 

ಕುಮಾರಸ್ವಾಮಿ ಸ್ಮಾರ್ಟ್ ಮೂವ್. ಯಾರಿಗೆ ಬೆಂಬಲ?

ಕಾಂಗ್ರೆಸ್ ಸಹ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಮಾಡಿದೆ. ಕಾಂಗ್ರೆಸ್ ನಲ್ಲಿ ಇಬ್ಬರು ನಾಯಕರ ನಡುವೆ ಶೀತಲ ಸಮರ ಇದೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಲೆ ಇರುತ್ತವೆ. ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಒಟ್ಟಾಗಿಯೇ ಪ್ರಚಾರ ಮಾಡಿದ್ದರು. ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್  ಹಾನಗಲ್ ಕ್ಷೇತ್ರವನ್ನು ಗೆದ್ದುಕೊಂಡಿತ್ತು. 

ಪರಿಷತ್​​ನ 25 ಕ್ಷೇತ್ರಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆ ದಿನ.

ರಾಜಕೀಯ ಜಿದ್ದಾಜಿದ್ದಿ; ಉಪಚುನಾವಣೆ ನಂತರ ವಿಧಾನ ಪರಿಷತ್ ಚುನಾವಣೆ ಸಹ  ಕರ್ನಾಟಕದಲ್ಲಿ ರಾಜಕಾರಣ ಜಿದ್ದಾಜಿದ್ದಿಗೆ ವೇದಿಕೆ ಮಾಡಿಕೊಟ್ಟಿದೆ.  ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿ ಒಂದು ಹಂತದಲ್ಲಿ ಮುಂದೆ ಇದ್ದು ಇದೀಗ ಕಾಂಗ್ರೆಸ್ (Congress)ಮತ್ತು ಜೆಡಿಎಸ್(JDS) ಯಾವ ತಂತ್ರಗಾರಿಕೆ ಅನುಸರಿಸಲಿದೆ ಎಂದು ಕಾದು  ನೋಡಬೇಕಿದೆ.  ಕಾಂಗ್ರೆಸ್ ಪಟ್ಟಿ ಬಿಡುಗಡೆ ನಂತರ ಮತ್ತಷ್ಟು ತುರುಸು ಹೆಚ್ಚಲಿದೆ.

 

click me!