Vidhan Parishat Election| ಕಾಂಗ್ರೆಸ್‌ಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಗ್ಯತೆ ಇಲ್ಲ: BSY

By Kannadaprabha News  |  First Published Nov 22, 2021, 2:43 PM IST

*  ಸಿದ್ದು, ಡಿಕೆಶಿ ತಿಕ್ಕಾಟದಿಂದಾಗಿ ಕಾಂಗ್ರೆಸ್‌ ಪಟ್ಟಿತಡ: ಬಿಎಸ್‌ವೈ
*  ಅಭ್ಯರ್ಥಿ ಘೋಷಿಸುವ ಯೋಗ್ಯತೆ ಸಿದ್ದುಗಿಲ್ಲವೇ?
*  ದೀನದಲಿತರನ್ನು ಗುಲಾಮರಂತೆ ಕಾಣುವ ಕಾಂಗ್ರೆಸ್‌
 


ಬೆಳಗಾವಿ(ನ.22):  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಡಿ.ಕೆ.ಶಿವಕುಮಾರ(DK Shivakumar) ಮಧ್ಯದ ಭಿನ್ನಾಭಿಪ್ರಾಯದಿಂದ ವಿಧಾ​ನ​ ಪ​ರಿ​ಷತ್‌ ಚುನಾವಣೆ​ಗೆ(Vidhan Parishat Election) ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಟೀಕಾ ಪ್ರಹಾರ ನಡೆಸಿದರು.

ರಾಜ್ಯದಲ್ಲಿ(Karnataka) ಅಕಾಲಿಕ ಮಳೆಯಾಗುತ್ತಿದೆ(Rain). ಇಂತಹ ವೇಳೆ ಬಿಜೆಪಿಯವರು(BJP) ಟೂರಿಂಗ್‌ ಟಾಕೀಸ್‌ ರೀತಿ ಜನ ಸ್ವರಾಜ್‌(JanSwaraj) ಯಾತ್ರೆ ಮಾಡುತ್ತಿದ್ದಾರೆ. ಇದು ಜನ ಬರ್ಬಾದ್‌ ಯಾತ್ರೆ ಎಂದು ಟೀಕಿಸಿದ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬಿಎಸ್‌ವೈ, ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌(Congress) ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡುವ ಯೋಗ್ಯತೆ ಇಲ್ಲ ನಿಮಗಿಲ್ಲವೇ ಎಂದು ನಾನು ಸಿದ್ದರಾಮಯ್ಯನವರನ್ನು ಕೇಳುತ್ತೇನೆ ಎಂದರು.

Tap to resize

Latest Videos

undefined

MLC Election | ಮೇಲ್ಮನೆ ದೋಸ್ತಿ : ಸ್ಪರ್ಧೆ ಮಾಡದ ಕ್ಷೇತ್ರಗಳಲ್ಲಿ ಬಿಜೆಪಿಗೆ ಜೆಡಿಎಸ್‌ ಬೆಂಬಲ

ಬೆಳಗಾವಿ(Belagavi) ಹಾಗೂ ಚಿಕ್ಕೋಡಿಯಲ್ಲಿ(Chikkodi) ನಡೆದ ಬಿಜೆಪಿ ಜನ ಸ್ವರಾಜ್‌ ಯಾತ್ರೆ ಉದ್ದೇಶಿಸಿ ಮಾತನಾಡಿದ ಅವರು, ನಾವು ಹೋದ ಎಲ್ಲ ಕಡೆಗಳಲ್ಲಿ ಅತಿವೃಷ್ಟಿಯ ವರದಿಯನ್ನು ಸಂಗ್ರಹ ಮಾಡುತ್ತಿದ್ದೇವೆ. ಎರಡು ದಿನದಲ್ಲಿ ರಾಜ್ಯದ ಅತಿವೃಷ್ಟಿವರದಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ರೈತರ(Farmers) ಬೆಳೆನಾಶ(Corp Loss) ಆಗಿದೆ. ಅವರಿಗೆ ಪರಿಹಾರ(Compensation)ಕೊಡುವ ನಿಟ್ಟಿನಲ್ಲಿ ಡಿಸಿಗಳ ಜತೆ ಸಿಎಂ ಸಭೆ ಮಾಡಿದ್ದಾರೆ. ತಕ್ಷಣ ಪರಿಹಾರ ಕೊಡುವ ಕೆಲಸವನ್ನು ಮಾಡುತ್ತೇವೆ ಎಂದ ಅವರು, ಜನ ಬೆಂಬಲ ಇಲ್ಲ ಎಂದು ಗೊತ್ತಾದ ಮೇಲೆ ಕಾಂಗ್ರೆಸ್ಸಿಗರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ದೀನದಲಿತರನ್ನು ಗುಲಾಮರಂತೆ ಕಾಣುವ ಕಾಂಗ್ರೆಸ್‌

ದೇಶದಲ್ಲಿ ಮುಳುಗುತ್ತಿರುವ ಹಡಗು ಆಗಿರುವ ಕಾಂಗ್ರೆಸ್‌ ಪಕ್ಷ ಈ ದೇಶದಲ್ಲಿರುವ ಅಲ್ಪಸಂಖ್ಯಾತರು(Minorities) ಮತ್ತು ದೀನದಲಿತರನ್ನು(Dalit) ಒತ್ತೆಯಾಳುಗಳ ರೀತಿಯಲ್ಲಿ, ಗುಲಾಮರ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದನ್ನು ಆ ಸಮುದಾಯಗಳ ವಿದ್ಯಾವಂತರು ಗಮನಿಸುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಹೇಳಿದ್ದಾರೆ.

ನಗರದಲ್ಲಿ ಶನಿವಾರ ಜನಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿದ ಅವರು, ದಲಿತರು ಹಾಗೂ ಮುಸ್ಲಿಮರು(Muslim) ಕಾಂಗ್ರೆಸ್‌ನ ಗುಲಾಮರಲ್ಲ ಎಂಬುದನ್ನು ಅರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಲಿ. ನಾವಂತೂ ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷವನ್ನು ವಿರೋಧಿ​ಸಿಕೊಂಡು ಬಂದವರು. ಆದರೆ ಸಿದ್ದರಾಮಯ್ಯನಂತವರು ಮಾತನಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂಬುದನ್ನು ಈಗಲಾದರೂ ತಿಳಿದುಕೊಳ್ಳಲಿ ಎಂದು ಹೇಳಿದರು.
ದೇಶದಲ್ಲಿ ಹಿಂದಿನ ಪರಿಸ್ಥಿತಿ ಈಗಿಲ್ಲ. ಕಾಂಗ್ರೆಸ್‌ ಮಾಡಿರುವ ದ್ರೋಹವನ್ನು ಜನರಿಗೆ ತಿಳಿಸುವ ಕೆಲಸ ಆರಂಭಗೊಂಡಿದೆ. ಅವಸಾನದ ಅಂಚಿನಲ್ಲಿರುವ ಕಾಂಗ್ರೆಸ್‌ ಪಕ್ಷ ಆಧಾರ ರಹಿತ ಆರೋಪಗಳನ್ನು ಮಾಡುವುದನ್ನು ಮೊದಲು ನಿಲ್ಲಿಸಲಿ ಎಂದು ಆಗ್ರಹಿಸಿದರು.

Jan Swaraj Yatra| ಸಿದ್ದು, ಡಿಕೆಶಿ ತಿಕ್ಕಾಟದ ಮಧ್ಯೆ ಸಿಎಂ ಆಗಲು ಪರಮೇಶ್ವರ್‌ ಯತ್ನ: ಶೆಟ್ಟರ್‌

ಸ್ವಯಂ ಘೋಷಿತ ಅಧ್ಯಕ್ಷರು:

ಪ್ರಧಾನಿ ಮೋದಿ, ಯಡಿಯೂರಪ್ಪ ಸೇರಿದಂತೆ ಎಲ್ಲರ ಕುರಿತು ಹೀನಾಯವಾಗಿ ಮಾತನಾಡುವ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತ ಅಧ್ಯಕ್ಷರಿಲ್ಲ. ಸ್ವಯಂ ಘೋಷಿತ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ​ಕುರ್ಚಿಗೆ ಅಂಟಿಕೊಂಡು ಕುಳಿತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಕಾರಜೋಳ, ರಾಜ್ಯದಲ್ಲಿಯೂ ಮೂರು ಗುಂಪಾಗಿ ಮೂರಾಬಟ್ಟೆಯಾಗಿರುವ ಪಕ್ಷ ಆರ್‌ಎಸ್‌ಎಸ್‌(RSS) ಬಗ್ಗೆ ಮಾತನಾಡುವ ನೈತಿಕತೆಯನ್ನು ಹೇಗೆ ಹೊಂದಲು ಸಾಧ್ಯ ಎಂದು ಪ್ರಶ್ನಿಸಿದರು.

ಸಾರಿಗೆ ಸಚಿವ ಶ್ರೀರಾಮುಲು(B Sriramulu) ಮಾತನಾಡಿ, ಗೊತ್ತು ಗುರಿಯಿಲ್ಲದ ಕಾಂಗ್ರೆಸ್‌ ಪಕ್ಷಕ್ಕೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಭವಿಷ್ಯವಿಲ್ಲವೆಂದು ತಿಳಿದು ವಿನಾಕರಣ ಗೊಂದಲ ಮೂಡಿಸುತ್ತಿದ್ದಾರೆ. ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಬಿಜೆಪಿಗೆ ಉತ್ತಮ ಭವಿಷ್ಯವಿದ್ದು ಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದ್ದಾರೆ. 
 

click me!