* ಕರ್ನಾಟಕ ವಿಧಾನ ಪರಿಷತ್ ಚುನಾವಣೆ
* ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿ
* ಸಿದ್ದರಾಮಯ್ಯ ಜತೆ ಮಾತನಾಡಿದ ಸುರ್ಜೆವಾಲಾ
* ಕಣದಿಂದ ಹಿಂದೆ ಸರಿದ ಧರ್ಮಸೇನಾ
ಬೆಂಗಳೂರು(ನ. 22) ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಸುರ್ಜೇವಾಲಾ (Randeep Surjewala) ಕರೆ ಮಾಡಿದ್ದಾರೆ. ದೂರವಾಣಿ ಮೂಲಕ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ. ಮೇಲ್ಮನೆ ಅಭ್ಯರ್ಥಿಗಳ (Legislative Council Election) ಆಯ್ಕೆ ಬಗ್ಗೆ ಚರ್ಚೆ ವಿಶೇಷ ಚರ್ಚೆ ನಡೆದಿದೆ. ಪಟ್ಟಿ ರಿಲೀಸ್ ಮಾಡುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸಲಹೆ ಪಡೆದುಕೊಳ್ಳಲಾಗಿದೆ. ಗೊಂದಲವಿದ್ದ ಕ್ಷೇತ್ರದ ಬಗ್ಗೆ ಸಿದ್ದು ಸಲಹೆ ಕೇಳಿದ್ದಾರೆ. ಸೋಮವಾರ ಸಂಜೆಯೊಳಗೆ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಹಿಂದೆ ಸರಿದ ಧರ್ಮಸೇನ.; ಮೈಸೂರು ಕ್ಷೇತ್ರದ ಸ್ಪರ್ಧೆಯಿಂದ ಧರ್ಮಸೇನ ಹಿಂದೆ ಸರಿದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ಧರ್ಮಸೇನ ಬದಲು ತಿಮ್ಮಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಪಕ್ಕಾ ಆಗಿದೆ.
undefined
ಸ್ಪರ್ಧೆಗೆ ಹಿಂದ ಸರಿದ ಹಿನ್ನೆಲೆಯಲ್ಲಿ ತಿಮ್ಮಯ್ಯಗೆ ಟಿಕೆಟ್ ಕೊಡಲು ಕೈ ನಾಯಕರ ನಿರ್ಧಾರ ಮಾಡಿದ್ದಾರೆ. ಪರಿಷತ್ ಚುನಾವಣೆಗೆ ಕಾಂಗ್ರೆಸ್ ಸಂಭವನಿಯರ ಪಟ್ಟಿ ಸಿದ್ಧವಾಗಿದೆ.
ಕುಮಾರಸ್ವಾಮಿ ಸ್ಮಾರ್ಟ್ ಮೂವ್. ಯಾರಿಗೆ ಬೆಂಬಲ?
ಕಾಂಗ್ರೆಸ್ ಸಹ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಮಾಡಿದೆ. ಕಾಂಗ್ರೆಸ್ ನಲ್ಲಿ ಇಬ್ಬರು ನಾಯಕರ ನಡುವೆ ಶೀತಲ ಸಮರ ಇದೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಲೆ ಇರುತ್ತವೆ. ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಒಟ್ಟಾಗಿಯೇ ಪ್ರಚಾರ ಮಾಡಿದ್ದರು. ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಹಾನಗಲ್ ಕ್ಷೇತ್ರವನ್ನು ಗೆದ್ದುಕೊಂಡಿತ್ತು.
ಸಂಭವನೀಯ ಪರಿಷತ್ ಪಟ್ಟಿ ಹೀಗಿದೆ:
ಕಲಬುರಗಿ : ಶಿವಾನಂದ ಪಾಟೀಲ್ ಮರ್ತೂರು
ಬೀದರ್ : ಭೀಮೂಗೌಡ ಪಾಟೀಲ್
ವಿಜಯಪುರ: ಸುನಿಲ್ ಗೌಡ ಪಾಟೀಲ್
ಚಿಕ್ಕಮಗಳೂರು : ಗಾಯತ್ರಿ ಶಾಂತೇಗೌಡ
ಕೋಲಾರ : ಅನಿಲ್ ಕುಮಾರ್
ಬೆಂಗಳೂರು ನಗರ : ಚೇತನ್ ಗೌಡ
ಬೆಂಗಳೂರು ಗ್ರಾಮಾಂತರ : ರವಿ
ಮಂಡ್ಯ : ದಿನೇಶ್ ಗೂಳಿಗೌಡ..
ಮೈಸೂರು : ತಿಮ್ಮಯ್ಯ
ಹಾಸನ : ಶಂಕರಪ್ಪ
ಕೊಡಗು : ಮಂಥರ್ ಗೌಡ
ಮಂಗಳೂರು : ರಾಜೇಂದ್ರ ಕುಮಾರ್
ಕಾರವಾರ : ಸಾಯಿ ಗಾಂವ್ಕರ್
ರಾಯಚೂರು : ಶರಣೇಗೌಡ ಬಯ್ಯಾಪುರ
ಶಿವಮೊಗ್ಗ : ಪ್ರಸನ್ನಕುಮಾರ್
ಬಳ್ಳಾರಿ : ಕೆ.ಸಿ ಕೊಂಡಯ್ಯ
ಬೆಳಗಾವಿ : ಚನ್ನರಾಜ್
ಧಾರವಾಡ: ಸಲೀಂ ಅಹಮದ್
ತುಮಕೂರು - ರಾಜೇಂದ್ರ
ಚಿತ್ರದುರ್ಗ - ಸೋಮಶೇಖರ್..
ದಕ್ಷಿಣ ಪದವೀಧರ ಕ್ಷೇತ್ರ- ಮಧು ಮಾದೇಗೌಡ
ಪರಿಷತ್ನ 25 ಕ್ಷೇತ್ರಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆ ದಿನ.
ರಾಜಕೀಯ ಜಿದ್ದಾಜಿದ್ದಿ; ಉಪಚುನಾವಣೆ ನಂತರ ವಿಧಾನ ಪರಿಷತ್ ಚುನಾವಣೆ ಸಹ ಕರ್ನಾಟಕದಲ್ಲಿ ರಾಜಕಾರಣ ಜಿದ್ದಾಜಿದ್ದಿಗೆ ವೇದಿಕೆ ಮಾಡಿಕೊಟ್ಟಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿ ಒಂದು ಹಂತದಲ್ಲಿ ಮುಂದೆ ಇದ್ದು ಇದೀಗ ಕಾಂಗ್ರೆಸ್ (Congress)ಮತ್ತು ಜೆಡಿಎಸ್(JDS) ಯಾವ ತಂತ್ರಗಾರಿಕೆ ಅನುಸರಿಸಲಿದೆ ಎಂದು ಕಾದು ನೋಡಬೇಕಿದೆ. ಕಾಂಗ್ರೆಸ್ ಪಟ್ಟಿ ಬಿಡುಗಡೆ ನಂತರ ಮತ್ತಷ್ಟು ತುರುಸು ಹೆಚ್ಚಲಿದೆ.
ಬಿಜೆಪಿ ನಾಯಕರು ಪಕ್ಷ ಸಂಘಟನೆ ಹೆಸರಿನಲ್ಲಿ ಜನ ಸ್ವರಾಜ್ ಯಾತ್ರೆ ನಡೆಸುದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ಮುಂದಿನ ವಿಧಾನಸಭೆ ಚುನಾವಣೆ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಮೇಲ್ಮನೆಗೆ ಅತಿ ಹೆಚ್ಚು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವುದು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.