
ಬೆಂಗಳೂರು( ನ. 22) ವಿಧಾನ ಪರಿಷತ್ ಗೆ (Legislative Council Election) ಕಾಂಗ್ರೆಸ್ (Congress) ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಪ್ರತಿಕ್ರಿಯೆ ನೀಡಿದ್ದಾರೆ ನಮ್ಮ ಪಟ್ಟಿ ಬಿಡುಗಡೆ ಆಗಿದೆ. ಸಕ್ರಿಯ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದ್ದೇವೆ ಹಿಂದಿನ ಸಾರಿಗಿಂತ ಈ ಬಾರಿ ನಮ್ಮ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಕ್ಷದ ಹೊರಗಿನವರಿಗೆ ಟಿಕೆಟ್ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳಿಯ ನಾಯಕರು ಹೇಳಿದಂತೆ ಕೇಳ ಬೇಕಾಗುತ್ತೆ. ರಾಜ್ಯಸಭಾ ಚುನಾವಣೆಯಲ್ಲಿ ನಾವು ನೋಡಿದ್ದೇವೆ ಹೀಗಾಗಿ ಇದು ಅನಿವಾರ್ಯ ಎಸ್ ಆರ್ ಪಾಟೀಲ್ (SR Patil) ಅವರನ್ನಾನ್ನು ನಾವು ಕೈ ಬಿಡುವ ಪ್ರಶ್ನೆಯೇ ಇಲ್ಲ. ಅವರಿಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ತಿಳಿಸಿದರು.
ಬೇರೆ ತಂತ್ರಗಾರಿಕೆ ನಡೆಯುತ್ತಿದೆ. ಕೊಂಡಯ್ಯ ವಿಚಾರದಲ್ಲಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಹೈಕಮಾಂಡ್ ಹೇಳಿದ್ದನ್ನ ಕೇಳಬೇಕಾಗುತ್ತದೆ ಎಂದು ರಾಜಕಾರಣದ ವ್ಯವಸ್ಥೆಯನ್ನು ವಿವರಿಸಿದರು.
ಬಿಜೆಪಿ ಪಟ್ಟಿಯಲ್ಲಿ ಅಚ್ಚರಿ ಹೆಸರುಗಳು
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ಜತೆ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ಮಾತನಾಡಿದ್ದರು. ಎಐಸಿಸಿ(AICC) ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಸಂಜೆ ಬಿಡುಗಡೆ ಮಾಡಿತ್ತು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿ, ಬೆಂಗಳೂರು ಮಟ್ಟದಲ್ಲಿ ಲಾಬಿ ಮಾಡಿ ಹೆಬ್ಬಾಳ್ಕರ್, ಸಹೋದರ ಚನ್ನರಾಜ್ ಹಟ್ಟಿಹೊಳಿ ಟಿಕೆಟ್ ಕನ್ ಫರ್ಮ್ ಮಾಡಿಸಿದ್ದಾರೆ.
ಎಸ್ ಎಂ ಕೃಷ್ಣ ಅವರ ಮೂಲಕ ಮಂಡ್ಯದಿಂದ ದಿನೇಶ್ ಅವರಿಗೆ ಟಿಕೆಟ್ ಸಿಕ್ಕಿದೆ. ಕೃಷ್ಣ ಬಿಜೆಪಿಯಲ್ಲಿ ಇದ್ದರೂ ಕಾಂಗ್ರೆಸ್ ಪಾಳಯದಮೇಲೆ ಪ್ರಭಾವ ಬೀರಿದ್ದು ಡಿಕೆ ಶಿವಕುಮಾರ್ ಅವರ ಮನವೊಲಿಸಿ ದಿನೇಶ್ ಅವರಿಗೆ ಟಿಕೆಟ್ ಕೊಡಿಸಿದ್ದಾರೆ.
ಹಿಂದೆ ಸರಿದ ಧರ್ಮಸೇನ; ಮೈಸೂರು ಕ್ಷೇತ್ರದ ಸ್ಪರ್ಧೆಯಿಂದ ಧರ್ಮಸೇನ ಹಿಂದೆ ಸರಿದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ ಧರ್ಮಸೇನ ಬದಲು ತಿಮ್ಮಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಪಕ್ಕಾ ಆಗಿತ್ತು. ಸ್ಪರ್ಧೆಗೆ ಹಿಂದ ಸರಿದ ಹಿನ್ನೆಲೆಯಲ್ಲಿ ತಿಮ್ಮಯ್ಯಗೆ ಟಿಕೆಟ್ ಕೊಡಲು ಕೈ ನಾಯಕರ ನಿರ್ಧಾರ ಮಾಡಿದ್ದರು.
ಉತ್ತರ ಕನ್ನಡ: ಶಿರಸಿ ಸಿದ್ದಾಪುರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಕಾಗೇರಿ ವಿರುದ್ಧ ಸೋಲು ಕಂಡು ನಂತರ ಯಲ್ಲಾಪುರ ಉಪಚುನಾವಣೆಯಲ್ಲಿಯೂ ಹೆಬ್ಬಾರ್ ವಿರುದ್ಧ ಸೋಲು ಕಂಡಿದ್ದ ಭೀಮಣ್ಣ ನಾಯ್ಕ್ ಅವರಿಗೆ ಇನ್ನೊಂದು ಅವಕಾಶ ಮಾಡಿಕೊಡಲಾಗಿದೆ. ಉತ್ತರ ಕನ್ನಡದ ಅಭ್ಯರ್ಥಿಯಾಗಿ ಭೀಮಣ್ಣ ನಾಯ್ಕ ಹೆಸರು ಘೋಷಣೆಯಾಗಿದೆ. .
ಕಾಂಗ್ರೆಸ್ ಸಹ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮ ಮಾಡಿದೆ. ಕಾಂಗ್ರೆಸ್ ನಲ್ಲಿ ಇಬ್ಬರು ನಾಯಕರ ನಡುವೆ ಶೀತಲ ಸಮರ ಇದೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಲೆ ಇರುತ್ತವೆ. ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಒಟ್ಟಾಗಿಯೇ ಪ್ರಚಾರ ಮಾಡಿದ್ದರು.
ಪರಿಷತ್ನ 25 ಕ್ಷೇತ್ರಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆ ದಿನ.
ರಾಜಕೀಯ ಜಿದ್ದಾಜಿದ್ದಿ; ಉಪಚುನಾವಣೆ ನಂತರ ವಿಧಾನ ಪರಿಷತ್ ಚುನಾವಣೆ ಸಹ ಕರ್ನಾಟಕದಲ್ಲಿ ರಾಜಕಾರಣ ಜಿದ್ದಾಜಿದ್ದಿಗೆ ವೇದಿಕೆ ಮಾಡಿಕೊಟ್ಟಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿ ಒಂದು ಹಂತದಲ್ಲಿ ಮುಂದೆ ಇದ್ದು ಇದೀಗ ಕಾಂಗ್ರೆಸ್ (Congress)ಮತ್ತು ಜೆಡಿಎಸ್(JDS) ಯಾವ ತಂತ್ರಗಾರಿಕೆ ಅನುಸರಿಸಲಿದೆ ಎಂದು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.