
ಮಂಡ್ಯ (ಡಿ.15): ಲೋಕಸಭಾ ಸಾರ್ವತ್ರಿಕ ಚುನಾವಣೆ (Loksabha Election) ಮತ್ತು ಕೆ.ಆರ್.ಪೇಟೆ (KR Pete) ಉಪ ಚುನಾವಣೆಯ (By Election) ಸೋಲಿನ ಪ್ರತೀಕಾರವಾಗಿ ವಿಧಾನ ಪರಿಷತ್ ಚುನಾವಣಾ (MLC Election) ಹೋರಾಟವನ್ನು ಕೈಗೆತ್ತಿಕೊಂಡಿದ್ದ ಜೆಡಿಎಸ್ (JDS) ಮತ್ತೊಮ್ಮೆ ಸೋಲನುಭವಿಸುವ ಮೂಲಕ ತನ್ನ ಭದ್ರಕೋಟೆಯನ್ನು ಛಿದ್ರಗೊಳಿಸಿಕೊಂಡಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರ ಸಂಖ್ಯಾ ಬಲವನ್ನು ಹೆಚ್ಚು ಹೊಂದಿದ್ದರೂ ಕಾಂಗ್ರೆಸ್‌ಗೆ (Congress) ಶರಣಾಗಿರುವುದು ಜೆಡಿಎಸ್ ನಾಯಕರ ಅಸಂಘಟಿತ ಹೋರಾಟಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ 6 ಮಂದಿ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಸ್ಥಳೀಯವಾಗಿ ಅಧಿಕಾರ ಪ್ರಾಬಲ್ಯವನ್ನು ಹೊಂದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ವಿರುದ್ಧ 97 ಮತಗಳಿಂದ ಪರಾಭವಗೊಂಡಿರುವುದು ದಳಪತಿಗಳ ಅತಿಯಾದ ಆತ್ಮವಿಶ್ವಾಸವೋ ಅಥವಾ ನಾಯಕತ್ವದ ಕೊರತೆಯೋ ಎನ್ನುವುದು ಪ್ರಶ್ನೆಯಾಗಿದೆ.
ಜೆಡಿಎಸ್ ಆರಂಭಿಕ ಹಂತದಿಂದಲೂ ನಾಯಕತ್ವದ ಸವಾಲನ್ನು ಎದುರಿಸುತ್ತಲೇ ಬಂದಿತ್ತು. ಚುನಾವಣಾ (Election) ಮಧ್ಯಭಾಗದಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸಾರಥ್ಯದಲ್ಲಿ ಚುನಾವಣೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದವು. ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಶಾಸಕರಾದ ಸಿ.ಎಸ್. ಪುಟ್ಟರಾಜು ಮತ್ತು ಡಿ.ಸಿ.ತಮ್ಮಣ್ಣ ಅವರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದರು. ಆದರೂ ಪಕ್ಷದೊಳಗೆ ನಾಯಕತ್ವದ ವಿಚಾರ ಹೊಗೆಯಾಡುತ್ತಲೇ ಇತ್ತು.
ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಜೆಡಿಎಸ್ (JDS) ಮತದಾರರನ್ನು ಹಿಡಿದಿಟ್ಟುಕೊಂಡಿದ್ದರೆ ಜೆಡಿಎಸ್ ಸುಲಭವಾಗಿ ಗೆಲುವು ಸಾಧಿಸಬಹುದಿತ್ತು. ಒಟ್ಟು ಮತದಾರರಲ್ಲಿ ಶೇ. 55ರಷ್ಟು ಮತದಾರರು ಜಾ.ದಳದವರೇ ಆಗಿದ್ದರು ಎಂಬುದನ್ನು ಪಕ್ಷದ ನಾಯಕರು ಪ್ರಚಾರ ಸಭೆಯಲ್ಲಿ ಹೇಳುತ್ತಿದ್ದರು. ಹಾಗಿದ್ದರೆ ಜಾ.ದಳ (JDS) ಮತಗಳು ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿ ಎನ್. ಅಪ್ಪಾಜಿ ಗೌಡರ ಪರವಾಗಿ (Appaji Gowda) ಬಂದಿಲ್ಲವೇ ಎಂಬ ಅನುಮಾನಗಳು ಫಲಿತಾಂಶದ ನಂತರ ಕಾಡುತ್ತಿದೆ.
ನಾಗಮಂಗಲ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್. ಅಪ್ಪಾಜಿಗೌಡ ಅವರನ್ನು ಬಲವಂತವಾಗಿ ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸಲಾಯಿತು. ಜೆಡಿಎಸ್ ಶಾಸಕರು ಮತ್ತು ಮುಖಂಡರಲ್ಲಿ ಈ ಹಿಂದೆ ಇದ್ದ ಉತ್ಸಾಹ ಈ ಚುನಾವಣೆಯಲ್ಲಿ ಕಂಡುಬರಲಿಲ್ಲ. ಜೆಡಿಎಸ್‌ನೊಳಗೆ (JDS) ಭಿನ್ನಮತದ ಬೆಂಕಿ ಹೊಗೆಯಾಡುತ್ತಿದ್ದದ್ದು ಕೂಡ ಅಪ್ಪಾಜಿಗೌಡರ ಸೋಲಿಗೆ ಕಾರಣವಾಯಿತೇ ಎಂಬ ಅನುಮಾನ ಕಾಡುತ್ತಿದೆ.
ಕಾಂಗ್ರೆಸ್ ಸರಿಸಮನಾಗಿಯೇ ಚುನಾವಣಾ ವೆಚ್ಚವನ್ನು ಜೆಡಿಎಸ್ ಅಭ್ಯರ್ಥಿ ಎನ್. ಅಪ್ಪಾಜಿ ಗೌಡ (Appaji Gowda) ಅವರ ಭರಿಸಿದ್ದರೂ ನಿರೀಕ್ಷಿತ ಗೆಲುವು ಕಾಣ ದಿರುವುದು ಪಕ್ಷದ ಕಾರ್ಯಕರ್ತರ ಹತಾಶೆಗೆ ಕಾರಣವಾಗಿದೆ. ಮುಂದಿನ ವಿಧಾನ ಸಭಾ ಚುನಾವಣೆ (Assembly Election) ವೇಳೆಗೆ ಇನ್ನಷ್ಟು ದುರ್ಬಲ ವಾಗುವುದೇ? ಅಥವಾ ಪಕ್ಷಾಂತರ ಪ್ರಕ್ರಿಯೆ ತೀವ್ರಗೊಳ್ಳುವುದೇ ಎಂಬ ವದಂತಿಗಳು ಹಬ್ಬುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.