ರಾಮ ಮಂದಿರ ಉದ್ಘಾಟನೆ ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ: ಸಂಸದ ಬಿ.ವೈ.ರಾಘವೇಂದ್ರ

By Kannadaprabha News  |  First Published Jan 5, 2024, 2:18 PM IST

ರಾಮ ಮಂದಿರ ಉದ್ಘಾಟನೆ ಸಹಿಸದೆ ಕರಸೇವೆಗೆ ತೆರಳಿದ ವ್ಯಕ್ತಿಗಳ ಬಂಧಿಸಿರುವುದು ಕಾಂಗ್ರೆಸ್‌ ಹಿಂದೂ ವಿರೋಧಿ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 


ಶಿಕಾರಿಪುರ (ಜ.05): ರಾಮ ಮಂದಿರ ಉದ್ಘಾಟನೆ ಸಹಿಸದೆ ಕರಸೇವೆಗೆ ತೆರಳಿದ ವ್ಯಕ್ತಿಗಳ ಬಂಧಿಸಿರುವುದು ಕಾಂಗ್ರೆಸ್‌ ಹಿಂದೂ ವಿರೋಧಿ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ರಾಮಂದಿರ ಉದ್ಘಾಟನೆ ಸಂದರ್ಭದಲ್ಲಿ ಜನರು ದೊಡ್ಡಸಂಖ್ಯೆಯಲ್ಲಿ ತೆರಳಬಾರದು ಎನ್ನುವ ಉದ್ದೇಶಕ್ಕೆ ಇಂತಹ ಷಢ್ಯಂತ್ರ ಮಾಡಲಾಗಿದೆ.

ಗೋದ್ರಾ ಘಟನೆ ಮರುಕಳಿಸುತ್ತದೆ ಎನ್ನುವ ಹೇಳಿಕೆ, ಶ್ರೀಕಾಂತ ಪೂಜಾರ್ ರೌಡಿಪಟ್ಟಿಯಿಂದ ಕೈಬಿಟ್ಟು ಪುನಃ ಬಂಧಿಸಿರುವುದು ಗಮನಿಸಿದರೆ ಕಾಂಗ್ರೆಸ್‌ ಪಕ್ಷಕ್ಕೆ ಭವ್ಯ ದೇವಸ್ಥಾನ ನಿರ್ಮಾಣ ಸಹಿಸಲು ಆಗುತ್ತಿಲ್ಲ. ಬಾಬರಿ ಮಸೀದಿ ಬಿದ್ದಿರುವುದು ನೆಪ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಘಟನೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕನ ಹಿತ ಬಲಿಕೊಟ್ಟಿದ್ದಾರೆ. ಈ ಎಲ್ಲವನ್ನೂ ಗಮನಿಸಿದರೆ ಕಾಂಗ್ರೆಸ್‌ನ ಹಿಂದೂ ವಿರೋಧಿತನ ಸ್ಪಷ್ಟವಾಗುತ್ತೆ ಎಂದರು.

Tap to resize

Latest Videos

ಮಂದಿರ, ಹಿಂದುತ್ವ ಎಂದು ಜನರನ್ನು ಮರಳು ಮಾಡುತ್ತಿರುವ ಬಿಜೆಪಿ: ಯತೀಂದ್ರ ಸಿದ್ದರಾಮಯ್ಯ

ಕೆ.ಎಸ್.ಗುರುಮೂರ್ತಿ ಮಾತನಾಡಿ, ರಾಮ ಮಂದಿರ ಉದ್ಘಾಟನೆ ಇಡೀ ವಿಶ್ವವೆ ಗಮನಿಸುತ್ತಿದೆ. ಅದನ್ನು ಸಹಿಸದ ಕಾಂಗ್ರೆಸ್ ಮುಖಂಡರು ಜನರಿಗೆ ಗೊಂದಲ ಹುಟ್ಟುವ ಹೇಳಿಕೆ ನೀಡುವ ಮೂಲಕ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ಜನತೆ ತಕ್ಕಪಾಠ ಕಲಿಸಬೇಕು ಎಂದರು. ಸಭೆಗೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು. ಮುಖಂಡರಾದ ಎಚ್.ಟಿ.ಬಳಿಗಾರ್, ವಿರೇಂದ್ರ ಪಾಟೀಲ್, ಕೆ.ಹಾಲಪ್ಪ, ನಿವೇದಿತಾ, ಗಿರೀಶ್ ಧಾರವಾಡ, ಪಾಲಾಕ್ಷಪ್ಪ, ಬಂಗಾರಿನಾಯ್ಕ, ಹನುಮಂತಪ್ಪ, ಪ್ರವೀಣ ಬೆಣ್ಣೆ ಇತರರಿದ್ದರು.

ಧಾರ್ಮಿಕ ಸೇವೆ ಅವಕಾಶ ಭಕ್ತರು ಬಳಸಿಕೊಳ್ಳಲಿ: ತಾಲೂಕಿನ ಕಡೆನಂದಿಹಳ್ಳಿ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಕ್ರಿಯಾ ಕರ್ತೃತ್ವ ಶಕ್ತಿಯಿಂದಾಗಿ ಶೂನ್ಯವಾಗಿದ್ದ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮ ಸತತ ಧಾರ್ಮಿಕ ಕ್ರಿಯೆಗಳಿಂದಾಗಿ ಇದೀಗ ಜಾಗೃತ ಸ್ಥಳವಾಗಿ ಬೆಳೆದು ಎಲ್ಲರ ಗಮನ ಸೆಳೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೆಮ್ಮೆ ವ್ಯಕ್ತಪಡಿಸಿದರು. ತಾಲೂಕಿನ ಕಡೆನಂದಿಹಳ್ಳಿ ಶ್ರೀ ಮಳೆಮಲ್ಲೇಶ್ವರಸ್ವಾಮಿ ಜಾಗೃತ ಸ್ಥಳ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಶುಕ್ರವಾರ ಫೆ.2ರಿಂದ 13 ರವರೆಗೆ ಜರುಗುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪ್ರಥಮ ಪ್ರಕಟಣೆ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅವರ 33ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ, ಶಿವಾನುಷ್ಠಾನ ಧ್ಯಾನ ಮಂದಿರ ಶಿಲಾ ಮಂಟಪ, ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ, ಮಹಾಮಸ್ತಕಾಭಿಷೇಕ, ಶ್ರೀ ಜಗದ್ಗುರು ರೇಣುಕಾಚಾರ್ಯ ಪುರಾಣ ಪ್ರವಚನ, ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಸಾಂಸ್ಕೃತಿಕ ಧಾರ್ಮಿಕ ಸಮಾರಂಭಗಳನ್ನು ಫೆಬ್ರವರಿ 2ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದೆ. ಇದು ಹೆಮ್ಮೆಯ ಸಂಗತಿ. ವಿವಿಧ ಸೇವೆಗಳ ಅವಕಾಶ ಕಲ್ಪಿಸಲಾಗಿದ್ದು, ಸರ್ವ ಭಕ್ತರೂ ತನು ಮನ ಧನ ಸಹಾಯ ಮೂಲಕ ಕಾರ್ಯಕ್ರಮ ಯಶಸ್ವಿಗೆ ಮನವಿ ಮಾಡಿದರು.

ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಆಯ್ಕೆ ಕಗ್ಗಂಟು: ರಾಮಲಿಂಗಾರೆಡ್ಡಿ ನಿವಾಸದಲ್ಲಿ ಸಭೆ

ಹಿರೇಕೆರೂರು ಶಾಸಕ ಯು.ಬಿ.ಬಣಕಾರ ಅವರು ವಾಲ್ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಜನಸಾಮಾನ್ಯರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವಲ್ಲಿ ರೇವಣಸಿದ್ಧೇಶ್ವರ ಶಿವಾಚಾರ್ಯರು ನಿರಂತರ ಶ್ರಮಿಸುತ್ತಿರುವುದು ಭಕ್ತರ ಸೌಭಾಗ್ಯ ಎಂದರು. ದುಗ್ಲಿ ಕಡೆನಂದಿಹಳ್ಳಿ ಕ್ಷೇತ್ರದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀ ಮಠ ಹಮ್ಮಿಕೊಳ್ಳುವ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೂ ಭಕ್ತರ ಸಹಕಾರ ನಿರಂತರವಾಗಿರಬೇಕು ಎಂದರು.

click me!