ಬಿಜೆಪಿಯು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಮಂದಿರ, ಹಿಂದುತ್ವ ಎಂದು ಜನರನ್ನು ಮರಳು ಮಾಡಲು ಹೊರಟಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು.
ಮೈಸೂರು (ಜ.05): ಬಿಜೆಪಿಯು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಮಂದಿರ, ಹಿಂದುತ್ವ ಎಂದು ಜನರನ್ನು ಮರಳು ಮಾಡಲು ಹೊರಟಿದೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಟೀಕಿಸಿದರು. ವರುಣ ಕ್ಷೇತ್ರದ ಮುದ್ದೇಗೌಡನ ಹುಂಡಿ, ಕುಪ್ಪೇಗಾಲ, ಲಲಿತಾದ್ರಿಪುರ, ಲಲಿತಾದ್ರಿನಗರ, ಐಪಿಎಸ್ ಬಡಾವಣೆ ಗುಡುಮಾದನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಕಂದಾಯ ಅದಾಲತ್, ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ಅವರು ಮಾತನಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನರು ಈಗಾಗಲೇ ತಕ್ಕ ಪಾಠ ಕಲಿಸಿದ್ದು, ಬರುವ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಯವರಿಗೆ ಜನರು ಬುದ್ಧಿ ಕಲಿಸುತ್ತಾರೆ ಎಂದರು. ಮುದ್ದೇಗೌಡನ ಹುಂಡಿಯಲ್ಲಿ ಗ್ರಾಮಸ್ಥರು ವಿವಿಧ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡದರು. ನಿಮ್ಮ ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಗ್ಗೆ ಹರಿಸಿಕೊಡುವುದಾಗಿ ತಿಳಿಸಿದರು.
ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವವಿದೆ: ಜಿ.ಟಿ.ದೇವೇಗೌಡ ಸ್ಪಷ್ಟನೆ
ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಶಿವಸ್ವಾಮಿ, ಪ್ರದೀಪ್ ಕುಮಾರ್, ಜಿಪಂ ಮಾಜಿ ಸದಸ್ಯ ಕೆಂಪೀರಯ್ಯ, ಎಪಿಎಂಸಿ ಮಾಜಿ ಸದಸ್ಯ ಬಸವರಾಜು, ಬಿಇಓ ವಿವೇಕಾನಂದ, ತಾಪಂ ಸಹಾಯಕ ನಿರ್ದೇಶಕ ಶಿವಣ್ಣ, ಪಿಡಿಓ ವಿಶ್ವನಾಥ್, ಗ್ರಾಪಂ ಉಪಾಧ್ಯಕ್ಷೆ ಶಿಲ್ಪಾ ಶಿವಕುಮಾರ್, ಮುಖಂಡರಾದ ಪುಟ್ಟಣ್ಣ, ಮಹೇಂದ್ರ, ಸೋಮಣ್ಣ, ರಾಮು, ನಾಗರಾಜ್, ಸಿದ್ದರಾಮು, ಎಸ್‌ಐ ಚೇತನ್ ಇದ್ದರು.
ಸಂವಿಧಾನದಿಂದ ಮಾತ್ರವೇ ಸಮಾನತೆ ಸಾಧ್ಯ: ದಾಸ ಶ್ರೇಷ್ಠ ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕುರುಬ ಸಮಾಜದ ಸಾಂಸ್ಕೃತಿಕ ನಾಯಕರಾಗಿದ್ದು, ಇಂತಹ ಮಹನೀಯರು ತೋರಿದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಲಹೆ ನೀಡಿದರು. ತಾಲೂಕಿನ ರುದ್ರನಕಟ್ಟೆ ಗ್ರಾಮದಲ್ಲಿ ಬುಧವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘದಿಂದ ಹಮ್ಮಿಕೊಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾವಿರಾರು ವರ್ಷದಿಂದಲೂ ಅವಕಾಶ ವಂಚಿತರಾದ ಹಿಂದುಳಿದವರಾದ ನಾವುಗಳು ಇತಿಹಾಸದಿಂದಲೂ ತುಳಿತಕ್ಕೆ ಒಳಗಾಗುತ್ತಲೇ ಬಂದವರಾಗಿದ್ದೇವೆ ಎಂದರು.
ಇತಿಹಾಸ ಮರೆತರೆ ಯಾರಿಗೂ ಭವಿಷ್ಯವಿಲ್ಲ. ಸಮಾಜವು ಧರ್ಮಕ್ಕೆ ಅಡಿಯಾಳಾಗಬಾರದು. ಸಂವಿಧಾನದಿಂದ ಮಾತ್ರ ಸಮಾನತೆ ಸಾಧ್ಯ. ಯಾವುದೇ ದೇಶ ಜಾತ್ಯತೀತತೆ ಅಳವಡಿಸಿಕೊಳ್ಳದೇ, ಕೇವಲ ಧರ್ಮಾವಲಂಬಿತವಾದರೇ ಅಂತಹ ದೇಶಕ್ಕೆ ಉಳಿಗಾಲವಿಲ್ಲ. ಭಾರತದ ಜಾತ್ಯತೀತ ತತ್ವಕ್ಕೆ ಬಿಜೆಪಿ, ಸಂಘ ಪರಿವಾರದಿಂದ ಧಕ್ಕೆಯಾಗುತ್ತಿದೆ. ಧರ್ಮದಿಂದ ಜನ ಭಾವುಕರಾಗಿ ಹಾಳಾಗುತ್ತಾರೆ ಎಂದು ಹೇಳಿದರು.
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಆಯ್ಕೆ ಕಗ್ಗಂಟು: ರಾಮಲಿಂಗಾರೆಡ್ಡಿ ನಿವಾಸದಲ್ಲಿ ಸಭೆ
ಬಿಜೆಪಿ ಧರ್ಮವನ್ನ ವೈಭವೀಕರಿಸಿ, ನೈಜ ಸಮಸ್ಯೆಗಳ ಮರೆಮಾಚುತ್ತಿದೆ. ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುತ್ತಾ ಬಂದಿದೆ. ಕಾಂಗ್ರೆಸ್ ಸರ್ಕಾರವು ಚುನಾವಣೆ ಪೂರ್ವದ ಎಲ್ಲಾ ಗ್ಯಾರಂಟಿ ಯೋಜನೆಗಳ ಭರವಸೆ ಈಡೇರಿಸಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ಸನ್ನು ಬೆಂಬಲಿಸಬೇಕು. ಬಿಜೆಪಿ ಕೇವಲ ಉದ್ಯಮಿಗಳು, ಬಂಡವಾಳ ಶಾಹಿಗಳನ್ನು ಬೆಳೆಸುತ್ತಿದೆಯೇ ಹೊರತು ಸಾಮಾನ್ಯರನ್ನಲ್ಲ ಎಂದು ಕಿಡಿಕಾರಿದರು.