ನೂತನ ಸಚಿವರ ಪ್ರಮಾಣ ವಚನ: ಯಾರ್ಯಾರಿಗೆ ಯಾವ್ಯಾವ ಖಾತೆ..?

Published : Dec 22, 2018, 06:25 PM ISTUpdated : Dec 22, 2018, 06:58 PM IST
ನೂತನ ಸಚಿವರ ಪ್ರಮಾಣ ವಚನ: ಯಾರ್ಯಾರಿಗೆ ಯಾವ್ಯಾವ ಖಾತೆ..?

ಸಾರಾಂಶ

ನೂತನ 8 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಹೊಸ ಸಚಿವರಿಗೆ ಯಾವ ಖಾತೆ ಎಂದು ಕಾಂಗ್ರೆಸ್ ನಲ್ಲಿ ಬಿರುಸಿನ ಚರ್ಚೆ! ಈಗಿನ ಪ್ರಕಾರ ಕಾಂಗ್ರೆಸ್ ನಲ್ಲಿ ಚರ್ಚೆಯಾಗ್ತಿರುವ ಸಂಭಾವ್ಯ ಖಾತೆಗಳು! ಇಷ್ಟು ದಿನ ಕಾಂಗ್ರೆಸ್ ಗೆ ತಲೆನೋವಾಗಿದ್ದ ಸಂಪುಟ ವಿಸ್ತರಣೆಯಾಗಿದ್ದರೂ, ಇದೀಗ ಹೊರ ತಲೆ ನೋವು ಶುರುವಾಗಿದೆ.

ಬೆಂಗಳೂರು, [ಡಿ.22]: ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರದ ಸಂಪುಟ ವಿಸ್ತರಣೆ ಕೊನೆಗೂ ಆಗಿದ್ದು, ರಾಜಭವನದಲ್ಲಿ ಇಂದು [ಶನಿವಾರ] ಸಂಜೆ ನಡೆದ ಕಾರ್ಯಕ್ರಮದಲ್ಲಿ ನಿಯೋಜಿತ ಸಚಿವರಿಗೆ ರಾಜ್ಯಪಾಲ ವಿ.ಆರ್​​.ವಾಲಾ ಅವರು ಪ್ರತಿಜ್ಞಾವಿಧಿ ಬೊಧಿಸಿದರು.

ನಿಗಮ ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಘೋಷಣೆ: ಯಾರಿಗೆ? ಯಾವುದು?

ಈ ಮೂಲಕ ಸಿಎಂ, ಡಿಸಿಎಂ ಹಾಗೂ 27 ಸಂಪುಟ ದರ್ಜೆ ಸಚಿವರು ಸೇರಿದ CM ಕುಮಾರಸ್ವಾಮಿ ಸರ್ಕಾರದಲ್ಲಿ ಇನ್ನೆರಡು ಸಚಿವ ಸ್ಥಾನ ಮಾತ್ರ ಬಾಕಿ ಉಳಿದುಕೊಂಡಿವೆ. ಶೂನ್ಯ ಮಾಸ ಮುಗಿದ ಬಳಿಕ ತನ್ನ ಕೋಟಾ ಭರ್ತಿಗೆ ಜೆಡಿಎಸ್ ಚಿಂತನೆ ಮಾಡಿದೆ.

ಸಂಪುಟ ವಿಸ್ತರಣೆ: ಸಿದ್ರಾಮಯ್ಯ ಹೇಳಿದಂತೆ ಉತ್ತರ ಕರ್ನಾಟಕಕ್ಕೆ ಅಗ್ರಸ್ಥಾನ

ಇನ್ನು ಸಂಪುಟ ವಿಸ್ತರಣೆ ಆಗಿದ್ದೇನು ಆಯ್ತು. ಈಗ ಹೊಸ ಸಚಿವರಿಗೆ ಯಾವ ಖಾತೆ ಎಂದು ಕಾಂಗ್ರೆಸ್ ನಲ್ಲಿ ಬಿರುಸಿನ ಚರ್ಚೆಗಳು ನಡೆದಿದ್ದು, ಈಗಿನ ಪ್ರಕಾರ ಕಾಂಗ್ರೆಸ್ ನಲ್ಲಿ ಚರ್ಚೆಯಾಗ್ತಿರುವ ಸಂಭಾವ್ಯ ಖಾತೆಗಳು ಆಧಾರದ ಮೇಲೆ ನೀಡಲಾತ್ತದೆ ಎಂದು ಮೂಲಗಳು ತಿಳಿಸಿವೆ.

ಹಾಗಾದ್ರೆ ಯಾರ್ಯಾರಿಗೆ ಯಾವ್ಯಾವ ಖಾತೆ..?
* M.B.ಪಾಟೀಲ್ ಗೆ ಡಾ.ಜಿ.ಪರಮೇಶ್ವರ್ ಬಳಿಯಿದ್ದ ಗೃಹ ಖಾತೆ ಸಾಧ್ಯತೆ
* M.T.B.ನಾಗರಾಜ್ ಗೆ ಖಾದರ್ ಬಳಿಯಿದ್ದ ನಗರಾಭಿವೃದ್ಧಿಖಾತೆ ಸಾಧ್ಯತೆ [ಬೆಂಗಳೂರು ನಗರ ಅಭಿವೃದ್ಧಿ ಹೊರತುಪಡಿಸಿ].
* ಆರ್. ಶಂಕರ್ ಕೈಬಿಟ್ಟಿದ್ದಿರಿಂದ ಸತೀಶ್ ಜಾರಕಿಹೊಳಿಗೆ ಅರಣ್ಯ ಖಾತೆ ಸಾಧ್ಯತೆ.
* ಶಿವಳ್ಳಿಗೆ ರಮೇಶ್ ಜಾರಕಿಹೊಳಿ ಹೊಂದಿದ್ದ ಪೌರಾಡಳಿತ ಖಾತೆ ಸಾಧ್ಯತೆ
* ರಹೀಂಖಾನ್ ಗೆ ಜಮೀರ್ ಬಳಿಯಿದ್ದ ಅಲ್ಪಸಂಖ್ಯಾತ ಕಲ್ಯಾಣ ಸಾಧ್ಯತೆ
* R.B.ತಿಮ್ಮಾಪುರಗೆ ಡಿಕೆಶಿ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆ ಸಾಧ್ಯತೆ
* ತುಕಾರಾಂಗೆ ಪರಮೇಶ್ವರ್ ಬಳಿಯಿದ್ದ ಯುವಜನ ಸೇವಾ ಖಾತೆ ಸಾಧ್ಯತೆ
* ಪಿ.ಟಿ.ಪರಮೇಶ್ವರ್ ನಾಯ್ಕ್ ಗೆ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಖಾತೆ ನೀಡುವ ಸಾಧ್ಯತೆಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆಗಿ ಒಂದು ತಿಂಗಳು ಕಳೆದಿಲ್ಲ, ರಾಜ್ಯದ ಎಲ್ಲ ಡ್ಯಾಂಗಳು ಖಾಲಿ: ಆರ್ ಅಶೋಕ್ ವಾಗ್ದಾಳಿ, ರೈತರಿಗೆ 50 ಸಾವಿರ ಪರಿಹಾರಕ್ಕೆ ಆಗ್ರಹ
ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!