ಡಿಸಿಎಂ ಪರಮೇಶ್ವರ್ ಗೆ ಬಿಗ್ ಆಫರ್ ಕೊಟ್ಟ ಯಡಿಯೂರಪ್ಪ

By Web DeskFirst Published Dec 22, 2018, 4:21 PM IST
Highlights

ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆಯೇ ರಾಜ್ಯ ರಾಜಕಾರಣದ ಚಟುವಟಿಕೆಗಳು ಗರಿಗೆದರಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.​ ಯಡಿಯೂರಪ್ಪ ಬಿಗ್ ಆಫರ್ ಕೊಟ್ಟದ್ದಾರೆ.

ಬೆಂಗಳೂರು, (ಡಿ.22): ಕಾಂಗ್ರೆಸ್​ಗೆ ಆಹ್ವಾನಿಸಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.​ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್​ ಆಹ್ವಾನಕ್ಕೆ ಟಾಂಗ್​​ ನೀಡಿರುವ ಯಡಿಯೂರಪ್ಪ, ಡಾ.ಪರಮೇಶ್ವರ್ ಅವರ ಮೇಲೆ ನನಗೆ ಗೌರವ ಇದೆ. ಅವರು ಈ ರೀತಿ ಹಗುರವಾಗಿ ಮಾತನಾಡಬಾರದು. ಕಾಂಗ್ರೆಸ್​​ನಲ್ಲಿ ಅಸಮಾಧಾನ ಇದೆ. ಹಾಗಾಗಿ ನಾನೇ ಅವರಿಗೆ ಬಿಜೆಪಿ ಸೇರುವಂತೆ ಆಹ್ವಾನಿಸುತ್ತೇನೆ ಎಂದರು.

ಡಿ.ಕೆ. ಶಿವಕುಮಾರ್ ಬಳಿ ಇದ್ದ ಹುದ್ದೆ ಎಚ್‌ಕೆ ಪಾಟೀಲ್ ಹೆಗಲಿಗೆ

ಅವರು ಬಿಜೆಪಿಗೆ ಬರುವುದಾದರೆ ಅವರಿಗೆ ಸೂಕ್ತ ಸ್ಥಾನಮಾನ ಗೌರವ ಕೊಡುತ್ತೇವೆ. ಲೋಕಸಭೆ ಚುನಾವಣೆ ತಯಾರಿ ಆರಂಭಿಸಿದ್ದೇವೆ. ಚಿಕ್ಕೋಡಿ, ಬೆಳಗಾವಿ ಭಾಗದ ಪ್ರಮುಖರ ಸಭೆ ನಡೆಸಿದ್ದೇವೆ ಎಂದು ಹೇಳಿದರು.

ಇನ್ನು ಸಚಿವ ಸ್ಥಾನದಿಂದ ವಂಚಿತರಾಗಿರುವ ಅತೃಪ್ತ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ ವೈ, ಇಂದು ಸಂಜೆ ಮಂತ್ರಿಮಂಡಲ ವಿಸ್ತರಣೆ ಆಗುತ್ತಿದೆ. ಮುಂದಾದರೂ ಸರ್ಕಾರ ಅಭಿವೃದ್ಧಿಯ ಕಡೆ ಗಮನ ಕೊಡಲಿ. ಆಗಲೇ ಅತೃಪ್ತರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.

8 ಜನರಿಗೆ ಮಂತ್ರಿ, ನಿಗಮ ಮಂಡಳಿಗೆ 20 ಶಾಸಕರು: ಇಲ್ಲಿದೆ ಪಟ್ಟಿ

ನಾವು ಅತೃಪ್ತರ ನಡೆ ಏನು ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಂತರ ನಮ್ಮ ನಿರ್ಧಾರ ಏನು ಎಂದು ತಿಳಿಸುತ್ತೇವೆ. ಇದುವರೆಗೆ ಯಾವುದೇ ಅತೃಪ್ತರು ನಮ್ಮನ್ಮು ಸಂಪರ್ಕಿಸಿಯೂ ಇಲ್ಲ ಮಾತುಕತೆಯನ್ನೂ ನಡೆಸಿಲ್ಲ.

ಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನಮಗೆ ಯಾವುದೇ ಆಹ್ವಾನ ಕೊಟ್ಟಿಲ್ಲ. ಹಿಂದೆಯೂ ಕೊಟ್ಟಿಲ್ಲ, ಮುಂದೆಯೂ ಇಲ್ಲ. ನಾವು ಹೋಗುವುದೂ ಇಲ್ಲ ಎಂದರು.

click me!