
ಬೆಂಗಳೂರು, [ಡಿ.22] ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಅಗ್ರಪಾಲು ದೊರೆತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ಕೈ ಹೈಕಮಾಂಡ್ ನಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
8 ನೂತನ ಸಚಿವರ ಪೈಕಿ 7 ಸಚಿವ ಸ್ಥಾನಗಳು ಉತ್ತರ ಕರ್ನಾಟಕ ಶಾಸಕರಿಗೆ ನೀಡಿರುವ ಕಾಂಗ್ರೆಸ್ ಹೇಳಿದಂತೆ ನಡೆದುಕೊಂಡಿದೆ. ಸಂಪುಟ ವಿಸ್ತರಣೆ, ಪುನಾರಚನೆ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ಅನ್ಯಾಯವಾಗಿದೆ, ತಾರತಮ್ಯ ಮಾಡಲಾಗುತ್ತಿದೆ ಎಂಬ ಪ್ರಬಲ ಆರೋಪಗಳು ಕೇಳಿಬಂದಿದ್ದವು.
8 ಜನರಿಗೆ ಮಂತ್ರಿ, ನಿಗಮ ಮಂಡಳಿಗೆ 20 ಶಾಸಕರು: ಇಲ್ಲಿದೆ ಪಟ್ಟಿ
ಈ ಆರೋಪಗಳನೆಲ್ಲ ಗಮನಿಸಿರುವ ಕಾಂಗ್ರೆಸ್ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಸರಿದೂಗಿಸಿದೆ. ಇನ್ನು ನಿಗಮ ಮಂಡಳಿಯಲ್ಲಿ ಸಮಪಾಲು ನೀಡಿದೆ.
ಉತ್ತರ ಕರ್ನಾಟಕದ ನೂತನ 7 ಸಚಿವರು ಯಾರ್ಯಾರು?
ತುಕಾರಾಂ [ಸಂಡೂರರು], ಪಿ.ಟಿ ಪರಮೇಶ್ವರ್ ನಾಯಕ್ [ಹೂವಿನಹಡಗಲಿ], ಸಿ.ಎಸ್ ಶಿವಳ್ಳಿ [ಕುಂದಗೋಳ] , ಎಂ.ಬಿ ಪಾಟೀಲ್ [ಬಬಲೇಶ್ವರ] ರಹೀಂಖಾನ್ [ಬೀದರ್], ಸತೀಶ್ ಜಾರಕಿಹೊಳಿ [ಯಮಕನಮರಡಿ], ಆರ್.ಬಿ ತಿಮ್ಮಾಪುರ [ಬಾಗಲಕೋಟೆ].
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.