ಪಾಪ ಪ್ರಾಯಶ್ಚಿತ್ತಕ್ಕೆ ಸಿಎಂ ಟೆಂಪಲ್‌ ರನ್‌: ಬಿ.ಕೆ. ಹರಿಪ್ರಸಾದ್‌

By Kannadaprabha News  |  First Published Apr 14, 2023, 8:41 AM IST

ಬಿಜೆಪಿ ಸರ್ಕಾರ ನಾಲ್ಕು ವರ್ಷದ ಆಡಳಿತ ಅವಧಿಯಲ್ಲಿ ನಡೆಸಿದ ಪಾಪಗಳ ಪ್ರಾಯಶ್ಚಿತ್ತಕ್ಕೆ ಸ್ವತಃ ಸಿಎಂ ಕರಾವಳಿಯ ದೇವಾಲಯಗಳ ಭೇಟಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಷ್ಟುದುರಾಚಾರ ಭ್ರಷ್ಟಾಚಾರ ಮಾಡಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಲೇವಡಿ ಮಾಡಿದ್ದಾರೆ.


ಉಡುಪಿ (ಏ.14) : ಬಿಜೆಪಿ ಸರ್ಕಾರ ನಾಲ್ಕು ವರ್ಷದ ಆಡಳಿತ ಅವಧಿಯಲ್ಲಿ ನಡೆಸಿದ ಪಾಪಗಳ ಪ್ರಾಯಶ್ಚಿತ್ತಕ್ಕೆ ಸ್ವತಃ ಸಿಎಂ ಕರಾವಳಿಯ ದೇವಾಲಯಗಳ ಭೇಟಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಷ್ಟುದುರಾಚಾರ ಭ್ರಷ್ಟಾಚಾರ ಮಾಡಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌(BK Hariprasad) ಲೇವಡಿ ಮಾಡಿದ್ದಾರೆ.

ಅವರು ಗುರುವಾರ ಉಡುಪಿಯ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Tap to resize

Latest Videos

ಕಾಂಗ್ರೆಸ್‌ ಪಟ್ಟಿಆರಂಭ ಶೂರತ್ವ ಮಾತ್ರ, ಈಗ ಅಭ್ಯರ್ಥಿ ಆಮದು ಲೆಕ್ಕಾಚಾರ: ಸಿಎಂ ಕುಟುಕು

ಬಿಜೆಪಿ ತನ್ನನ್ನು ದೇಶಭಕ್ತಿಯ ಪಾರ್ಟಿ ಎಂದು ಹೇಳಿಕೊಳ್ಳುತ್ತದೆ, ಆದರೆ ಅದಕ್ಕೆ ಚುನಾವಣೆಯಲ್ಲಿ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಬಿಜೆಪಿಯಲ್ಲಿ ಹಲವು ಹಿರಿಯ ನಾಯಕರೇ ಟಿಕೆಟ್‌ ವಂಚಿತರಾಗಿದ್ದಾರೆ. ಬಿಜೆಪಿ ಸರ್ಕಾರ 4 ವರ್ಷ ಒಳ್ಳೆಯ ಆಡಳಿತ ನೀಡಿದಿದ್ದಲ್ಲಿ ಹಾಲಿ ಇರುವ ಶಾಸಕರನ್ನೇ ಬದಲಾಯಿಸುವ ಅಗತ್ಯ ಏನಿತ್ತು ಎಂದು ಪ್ರಸ್ನಿಸಿದ ಅವರು, ಬಿಜೆಪಿ ಕೇವಲ ಬೂಟಾಟಿಕೆಯ ಪಾರ್ಟಿ ಎಂದರು.

ಕಾಂಗ್ರೆಸ್‌(Congress) ಪಕ್ಷದ ಅಭ್ಯರ್ಥಿಗಳ ಪಟ್ಟಿಬಿಡುಗಡೆ ಆದ ಮೇಲೆ ಪಕ್ಷದಲ್ಲಿ ಅಸಮಾಧಾನದಿಂದ ಅಲ್ಲೊಲಕಲ್ಲೊಲ ಆಗುತ್ತದೆ ಎಂದು ಬಿಜೆಪಿ ಎಣಿಸಿತ್ತು, ಆದರೆ ಅದು ಫಲಿಸಲಿಲ್ಲ. ಬಿಜೆಪಿಗೆ ಕೆಲವು ಕಡೆ ಅಭ್ಯರ್ಥಿಗಳೇ ಇಲ್ಲ, ಎರಡೆರಡು ಕಡೆಗಳಲ್ಲಿ ಸ್ಪರ್ಧೆ ಮಾಡುವ ಅನಿವಾರ್ಯತೆ ಬಂದಿದೆ ಎಂದವರು ಲೇವಡಿ ಮಾಡಿದರು.

ಲಕ್ಷ್ಮಣ ಸವದಿಗೆ ಸ್ವಾಗತ

ಬಿಜೆಪಿಯ ಲಕ್ಷ್ಮಣ ಸವದಿ ಹಿರಿಯ ಪ್ರಬುದ್ಧ ರಾಜಕೀಯ ಮುಖಂಡ, ಉಪಮುಖ್ಯಮಂತ್ರಿ, ಸಚಿವ ಸ್ಥಾನ ಹುದ್ದೆ ನಿಭಾಯಿಸಿದವರು. ಅವರು ಕಾಂಗ್ರೆಸ್‌ ಸಿದ್ಧಾಂತವನ್ನು ಒಪ್ಪಿ ಬರುವುದಾದರೆ ಸೇರ್ಪಡೆಯಾಗಬಹುದು, ಅವರನ್ನು ಸ್ವಾಗತಿಸುತ್ತೇವೆ ಎಂದವರು ಹೇಳಿದರು.

ಮೋದಿ ಜಂಗಲ್‌ ಸಫಾರಿ

ಪ್ರಧಾನಿ ನರೇಂದ್ರ ಮೋದಿ(PM Narendra Modi) ರಾಜ್ಯಕ್ಕೆ ಸಫಾರಿ(Bandipur safari) ಮಾಡಲಿಕ್ಕೆ ಬಂದಿದ್ದರು, ಆದರೂ ಅವರಿಗೆ ಹುಲಿ ಕಾಣಿಸಲಿಲ್ಲ. ಚಾಮರಾಜನಗರದಲ್ಲಿ ಕೊರೋನಾ(Corona pendamic) ಸಂದರ್ಭ ಆಮ್ಲಜನಕ ಇಲ್ಲದೆ 34 ಜನ ಪ್ರಾಣ ಕಳೆದುಕೊಂಡಿದ್ದರು. ಆಗ ಮೋದಿ ಬಂದು ಸಾಂತ್ವನ ಹೇಳಿಲ್ಲ. ಆದರೆ ರಾಹುಲ್‌ ಗಾಂಧಿ ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ಈ 34 ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿದ್ದಾರೆ ಎಂದರು.

ಟೆಂಪಲ್ ರನ್ ಮುಗಿಸಿ ಬೆಂಗಳೂರಿಗೆ ಬೊಮ್ಮಾಯಿ ವಾಪಸ್, ಏ.15ಕ್ಕೆ ನಾಮಪತ್ರ ಸಲ್ಲಿಕೆ!

ಉಡುಪಿ-ಕಾರ್ಕಳ ಗೊಂದಲ ಇಲ್ಲ

ಉಡುಪಿ ಕ್ಷೇತ್ರ(Udupi assembly constituency)ಕ್ಕೆ ಕಾಂಗ್ರೆಸ್‌ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದ ಕೃಷ್ಣಮೂರ್ತಿ ಆಚಾರ್ಯ ನನ್ನನ್ನು ಭೇಟಿಯಾಗಿದ್ದಾರೆ. ಕೆಲವೊಂದು ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಅದನ್ನು ನಾನು ಹೈಕಮಾಂಡ್‌ ಗಮನಕ್ಕೆ ತರುತ್ತೇನೆ ಎಂದರು.

ಕಾರ್ಕಳಕ್ಕೆ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಮಾಜಿ ಸಿಎಂ ಮೊಯ್ಲಿ ಆಯ್ಕೆ ಮಾಡುತ್ತಾರೆ. ಎಲ್ಲರಲ್ಲಿ ಸಮನ್ವಯ ಮೂಡಿಸುವ ಅಭ್ಯರ್ಥಿಗಳ ಹೆಸರು ಅವರ ಬಳಿ ಇದೆ. ಎರಡು ಮೂರು ದಿನಗಳಲ್ಲಿ ಅಭ್ಯರ್ಥಿಯ ಘೋಷಣೆ ಆಗಲಿದೆ ಎಂದರು.

click me!