ಗುಂಡ್ಲುಪೇಟೆ ಕನಕ ಭವನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 75 ಲಕ್ಷ ನೀಡಲು ಒಪ್ಪಿದ್ದಾರೆ, ಆರು ತಿಂಗಳಲ್ಲಿ ಕನಕ ಭವನ ಉದ್ಘಾಟನೆಗೆ ಪ್ರಯತ್ನಿಸುವುದಾಗಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಗುಂಡ್ಲುಪೇಟೆ (ಜ.28): ಗುಂಡ್ಲುಪೇಟೆ ಕನಕ ಭವನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 75 ಲಕ್ಷ ನೀಡಲು ಒಪ್ಪಿದ್ದಾರೆ, ಆರು ತಿಂಗಳಲ್ಲಿ ಕನಕ ಭವನ ಉದ್ಘಾಟನೆಗೆ ಪ್ರಯತ್ನಿಸುವುದಾಗಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಶ್ರೀ ಕನಕದಾಸ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ೫೨೪ ನೇ ಶ್ರೀ ಕನಕದಾಸ ಜಯಂತಿ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಕನಸಿನ ಕೂಸಾದ ಕನಕ ಭವನ ನೆನಗುದಿಗೆ ಬಿದ್ದಿದೆ ಎಂದರು. ಕಳೆದ ಸರ್ಕಾರದಲ್ಲಿ ಅನುದಾನ ಬರಲಿಲ್ಲ. ಈಗ ಮುಖ್ಯಮಂತ್ರಿ ೭೫ ಲಕ್ಷ ರು. ಅನುದಾನ ಬಂದರೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಭವನ ಉದ್ಘಾಟನೆ ಆಗುವಂತೆ ನೋಡಿಕೊಳ್ಳವುದಾಗಿ ಹೇಳಿದರು.
ಎಚ್‌ಎಸ್‌ಎಂ ಕಾಲದ್ದು: ಗುಂಡ್ಲುಪೇಟೆ ಪಟ್ಟಣಕ್ಕೆ ದಿನದ ೨೪ ಗಂಟೆ ಕುಡಿವ ನೀರಿನ ಯೋಜನೆಗೆ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅನುಮೋದನೆ ಕೊಡಿಸಿದ್ದರು. ಈಗ ಸಚಿವ ಬೈರತಿ ಸುರೇಶ್ ಅನುದಾನ ಕೊಟ್ಟಿದ್ದಾರೆ. ಆರೇಳು ತಿಂಗಳಲ್ಲಿ ಕುಡಿವ ನೀರಿನ ಯೋಜನೆಗೆ ಚಾಲನೆ ಸಿಗಲಿದೆ ಎಂದರು. ಜಾತಿ, ಧರ್ಮದ ಹೆಸರಲ್ಲಿ ರಾಜಕಾರಣ ಮಾಡುವವರನ್ನು ಕ್ಷೇತ್ರದ ಜನರು ವಿರೋಧಿಸಬೇಕು ಜೊತೆಗೆ ಜಾತಿ,ಧರ್ಮ ರಾಜಕಾರಣಕ್ಕೆ ಅವಕಾಶವನ್ನು ಕೊಡಬಾರದು.
undefined
ಸಂವಿಧಾನ ಎಲ್ಲರಿಗೂ ಮೂಲಭೂತ ಹಕ್ಕು ನೀಡಿದೆ: ಸಚಿವ ಕೆ.ವೆಂಕಟೇಶ್
ಕ್ಷೇತ್ರದ ಜನರು ನಾವೆಲ್ಲ ಒಂದೇ ರೀತಿ ಇರಬೇಕು ಎಂಬುದು ನನ್ನಾಆಶಯ ಎಂದರು. ಗುಂಡ್ಲುಪೇಟೆ ಕ್ಷೇತ್ರ ಶಾಂತಿಯ ತೋಟವಾಗಿರಬೇಕು. ಜಾತಿ, ಧರ್ಮದ ರಾಜಕಾರಣ ನಾನು ಮಾಡಲ್ಲ. ನನ್ನದೇನಿದ್ದರೂ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಎಲ್ಲರು ಒಂದಾಗಿರಬೇಕು ಎಂದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕೈ ಬಲ ಪಡಿಸಬೇಕು ನಿಮ್ಮ ಪ್ರೀತಿ, ವಿಶ್ವಾಸ ಇರಲಿ ನಾನು ನಿಮ್ಮ ಜೊತೆ ಸದಾ ಇರುತ್ತೇನೆ ಎಂದು ಅಭಯ ನೀಡಿದರು.
ದೇಶದ ಜನರಿಗೆ ಸಂವಿಧಾನ ರಕ್ಷಣೆ ನೀಡುತ್ತಿದೆ: ಪ್ರಪಂಚದಲ್ಲಿಯೇ ಭಾರತದ ಸಂವಿಧಾನ ಮಾದರಿಯಾಗಿದ್ದು ದೇಶದ ಜನರಿಗೆ ಸಂವಿಧಾನ ರಕ್ಷಣೆ ನೀಡುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಭಿಪ್ರಾಯಪಟ್ಟರು. ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ ೭೫ನೇ ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂವಿಧಾನ ದೇಶದ ಸರ್ವ ಜನಾಂಗಕ್ಕೂ ಸ್ಥಾನ ಮಾನ ಕೊಟ್ಟಿದೆ. ಕಳೆದ ೭೫ ವರ್ಷಗಳ ಹಿಂದೆಯೇ ಲಿಖಿತ ಸಂವಿಧಾನ ದೇಶಕ್ಕೆ ಸಿಕ್ಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಂವಿಧಾನಕ್ಕೆ ಗೌರವವಿದೆ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚನೆಗೆ ೨ ವರ್ಷ, ೧೧ ತಿಂಗಳು, ೧೮ ದಿನಗಳಲ್ಲಿ ಬರೆದಿದ್ದಾರೆ. ಸಂವಿಧಾನ ದೇಶದ ಜನರಿಗೆ ಹೆಮ್ಮೆ ವಿಷಯವಾಗಿದ್ದು ರಾಜ್ಯ ಸರ್ಕಾರ ಸಂವಿಧಾನ ದಿನಾಚರಣೆಗೆ ಅವಕಾಶ ಮಾಡಿಕೊಟ್ಟಿದೆ ಎಂದರು. ಕ್ಷೇತ್ರದಲ್ಲಿ ಶಾಂತಿಯ ತೋಟವಾಗಿರಬೇಕು ಎಂಬುದು ನನ್ನ ಆಶಯವಾಗಿದೆ. ಕ್ಷೇತ್ರದ ಜನರಲ್ಲಿ ವೈಮನಸ್ಸು ಹಾಗೂ ಕೋಮುವಾದಕ್ಕೆ ಅವಕಾಶ ಕೊಡದೆ ಜನರು ನೆಮ್ಮದಿಯಿಂದ ಜೀವನ ಸಾಗಿಸಬೇಕು ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿರುವುದೇ ನನಗೆ ಹೆಮ್ಮೆ: ಸಚಿವ ಬೈರತಿ ಸುರೇಶ್
ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮಾತನಾಡಿ ಅಂಬೇಡ್ಕರ್ ರಚಿಸಿದ ಸಂವಿಧಾನ ಸಮಾಜದ ಎಲ್ಲಾ ವರ್ಗದ ಜನರಿಗೂ ಸಮಾನತೆ ಕಲ್ಪಿಸಿದ್ದಾರೆ ಈ ನಿಟ್ಟಿಯಲ್ಲಿ ಅಂಬೇಡ್ಕರ್ ಸ್ಮರಣೆ ಪ್ರಸ್ತುತ ದಿನಗಳಲ್ಲಿ ಅಗತ್ಯ ಎಂದರು. ತಹಸೀಲ್ದಾರ್ ಟಿ.ರಮೇಶ್ ಬಾಬು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ಓದಿದರು.